ಬೆಂಗಳೂರು:ಕರೊನಾತಂಕದ ನಡುವೆಯೂ ದ್ವಿತೀಯ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಇಂದು ಮಹತ್ವದ ದಿನ. ಸುಮಾರು 7 ಲಕ್ಷ ವಿದ್ಯಾರ್ಥಿಗಳ ಫಲಿತಾಂಶ ಈಗಾಗಲೇ ಇಲಾಖೆಯ ಅಧಿಕೃತ ವೆಬ್​ಸೈಟ್​ನಲ್ಲಿ ಪ್ರಕಟವಾಗಿದೆ.
ಬೆಳಗ್ಗೆ 11.30ಕ್ಕೆ ಎಲ್ಲ ವಿದ್ಯಾರ್ಥಿಗಳ ಮೊಬೈಲ್​ಗೆ ಎಸ್​ಎಂಎಸ್​ ಮುಖಾಂತರ ಫಲಿತಾಂಶ ರವಾನೆಯಾಗಿದೆ. ಇಲಾಖೆ ವೆಬ್​ಸೈಟ್​www.karresults.nic.inನಲ್ಲಿ ಫಲಿತಾಂಶ ವೀಕ್ಷಿಸಬಹುದು.ಇದನ್ನೂ ಓದಿರಿಈಶ್ವರಪ್ಪ ಮನೆಗೂ ಕಾಲಿಟ್ಟ ಕರೊನಾ, ಸೋಂಕಿನ ಭೀತಿಯಲ್ಲಿ ಕುಟುಂಬಸ್ಥರು
ಕಳೆದ ಮಾರ್ಚ್​ 4ರಿಂದ 21ನೇ ತಾರೀಖಿನವರೆಗೂ ದ್ವಿತೀಯ ಪಿಯು ಎಕ್ಸಾಂ ನಡೆದಿತ್ತು. ಮಾರ್ಚ್ 23ರಂದು ಕೊನೆಯದಾಗಿ ಇಂಗ್ಲಿಷ್​ ಪರೀಕ್ಷೆ ನಡೆಯಬೇಕಿತ್ತು. ಅಷ್ಟರಲ್ಲಿ ಕರೊನಾ ಭೀತಿ ಆವರಿಸಿದ್ದರಿಂದ ಈ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಕಳೆದ ತಿಂಗಳು ಅಂದರೆ ಜೂನ್​ 18ರಂದು ಇಂಗ್ಲಿಷ್​ ಎಕ್ಸಾಂ ನಡೆದಿತ್ತು. ಇಂದು ಫಲಿತಾಂಶ ಪ್ರಕಟ ಆಗಿದೆ.
ಮಧ್ಯಾಹ್ನ 12 ಗಂಟೆ ನಂತರ ಇಲಾಖೆ ವೆಬ್​ಸೈಟ್​ನಲ್ಲಿ ಫಲಿತಾಂಶ ಪ್ರಕಟ ಆಗಲಿದೆ ಎಂದು ನಿನ್ನೆ ಶಿಕ್ಷಣ ಸಚಿವ ಸುರೇಶ್​ ಕುಮಾರ್​ ತಿಳಿಸಿದ್ದರು. ಆದರೆ, ನಿಗದಿತ ಸಮಯಕ್ಕೂ 1 ತಾಸು ಮೊದಲೇ ವೆಬ್​ಸೈಟ್​ನಲ್ಲಿ ಫಲಿತಾಂಶ ಪ್ರಕಟವಾಗಿದೆ. ಎಲ್ಲ ವಿದ್ಯಾರ್ಥಿಗಳು ಮನೆಯಲ್ಲೇ ಕುಳಿತು ಮೊಬೈಲ್​, ಕಂಪ್ಯೂಟರ್​ನಲ್ಲಿ ಫಲಿತಾಂಶ ವೀಕ್ಷಿಸುತ್ತಿದ್ದಾರೆ. ಇಲಾಖೆಯಿಂದಲೇ ಎಲ್ಲ ವಿದ್ಯಾರ್ಥಿಗಳ ಮೊಬೈಲ್​ಗೆ ಎಸ್​ಎಂಎಸ್​ ಮುಖಾಂತರ ಫಲಿತಾಂಶ ರವಾನೆಯಾಗಿದೆ.
ವಿದ್ಯಾರ್ಥಿಗಳೇ ಫಲಿತಾಂಶ ಏನೇ ಬರಲಿ ನಿಶ್ಚಿಂತವಾಗಿರಿ. ಅನೂತೀರ್ಣಗೊಂಡರೆ ಪೂರಕ ಪರೀಕ್ಷೆ ಬರೆಯಬಹುದು. ಕಡಿಮೆ ಅಂಕ ಬಂದರೆ ಮುಂದಿನ ತರಗತಿಯಲ್ಲಿ ಹೆಚ್ಚು ಅಂಕ ಗಳಿಸಲು ಪ್ರಯತ್ನಿಸಿ.
ಅಫಜಲಪುರ ತಾಪಂ ಅಧ್ಯಕ್ಷೆಯನ್ನೇ ವರಿಸಿದ ​ಉಪಾಧ್ಯಕ್ಷ, ಇನ್ಮುಂದೆ ಪತಿ-ಪತ್ನಿ ದರ್ಬಾರ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + seventeen =
Remember me
