ಮಂಗಳೂರು:ನಗರ ಹೊರವಲಯದ ಉಳ್ಳಾಲದ ಕೆಸಿ ರೋಡ್​ ಸಮೀಪ ನಿನ್ನೆ ಸಂಜೆ ನಡೆದಿದ್ದ 12 ವರ್ಷದ ಬಾಲಕನ ಭೀಕರ ಹತ್ಯೆ ಪ್ರಕರಣದ ಆರೋಪಿಯನ್ನ ಪೊಲೀಸರು ಬಂಧಿಸಿದ್ದು, ಆತನ ಹೇಳಿಕೆ ಬೆಚ್ಚಿಬೀಳಿಸುತ್ತೆ.
ಸ್ನೇಹಿತನೊಂದಿಗೆ ಪಬ್​ಜಿ​ ಆಟವಾಡಲು ಶನಿವಾರ ಮೊಬೈಲ್​ ಹಿಡಿದು ಮನೆಯಿಂದ ಹೊರ ಹೋದ 12 ವರ್ಷದ ಬಾಲಕ ಆಕೀಫ್ ಬರ್ಬರವಾಗಿ ಹತ್ಯೆಯಾಗಿದ್ದಾನೆ. ಮೃತ ಬಾಲಕ ಪೋಷಕರು ಆತನ ಸ್ನೇಹಿತನ ಮೇಲೆ ಅನುಮಾನ ವ್ಯಕ್ತಪಡಿಸಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.ಇದನ್ನೂ ಓದಿರಿಪಿಜಿಯಲ್ಲಿದ್ದ ಸಾಕ್ಷ್ಯವನ್ನ ಎಸ್​ಐಟಿ ನಾಶ ಮಾಡಿದೆ: ಸಿಡಿ ಲೇಡಿ ಗಂಭೀರ ಆರೋಪ
ಪ್ರಕರಣ ಬೆನ್ನುಹತ್ತಿದ ಪೊಲೀಸರಿಗೆ ಶಾಕ್​ ಕಾದಿತ್ತು. ಮಕ್ಕಳಿರುವ ಪ್ರತಿ ಮನೆಯವರಿಗೂ ಎಚ್ಚರಿಕೆಯ ಗಂಟೆ.
ಕೆಲ ತಿಂಗಳಿಂದ ಆಕೀಫ್ ಮತ್ತು ಈತನ ಸ್ನೇಹಿತ ದೀಪಕ್ ಇಬ್ಬರೂ ಒಟ್ಟಿಗೆ ಕೂತು ಪಬ್​ಜಿ ಆಡುತ್ತಿದ್ದರು. ಆಟದಲ್ಲಿ ಪ್ರತಿ ಬಾರಿಯೂ ಆಕೀಫ್ ಗೆಲ್ಲುತ್ತಿದ್ದ. ಅದರಂತೆ ನಿನ್ನೆ ಸಂಜೆಯೂ ಆಟವಾಡಲು ಆಕೀಫ್​​ ಮನೆ ಸಮೀಪದ ಗ್ರೌಂಡ್​ಗೆ ಹೋಗಿದ್ದ. ಆದರೆ ಅಂದು ಮೊದಲ ಬಾರಿಗೆ ಫಕೀಪ್​ ಸೋತಿದ್ದ. ಆಟದಲ್ಲಿ ಮೋಸವಾಗುತ್ತಿದೆ ಆಕೀಫ್ ಮತ್ತು ದೀಪಕ್ ಇಬ್ಬರ ನಡುವೆಯೂ ಗಲಾಟೆಯಾಗಿದ್ದು, ಪರಸ್ಪರ ಕಲ್ಲಿನಿಂದ ಹೊಡೆದಾಡಿಕೊಂಡಿದ್ದಾರೆ.
ಈ ವೇಳೆ ಫಕೀಪ್​ ಮೇಲೆ ಆಕೀಫ್ ಮೇಲೆ ದೀಪಕ್ ದೊಡ್ಡ ಕಲ್ಲು ಎತ್ತಿ ಹಾಕಿದ್ದು, ಕಲ್ಲಿನೇಟಿಗೆ ಸ್ಥಳದಲ್ಲೇ ಆಕೀಫ್ ಪ್ರಾಣಬಿಟ್ಟಿದ್ದಾನೆ. ಮೈದಾನದ ಬದಿಯಲ್ಲಿ ಶವ ಹಾಕಿ ದೀಪಕ್ ಪರಾರಿಯಾಗಿದ್ದ. ಮಗ ಕಾಣೆಯಾಗಿದ್ದಾನೆ ಎಂದು ಪೋಷಕರು ಹುಡುಕಾಟ ನಡೆಸಿದ್ದರು. ಇಂದು ಬೆಳಗಿನ ಜಾವ ಆಕೀಫ್​ನ ಶವ ಪತ್ತೆಯಾಗಿದೆ.
ವಿಚಾರಣೆ ವೇಳೆ ಆರೋಪಿ ದೀಪಕ್(17) ತಪ್ಪೊಪ್ಪಿಕೊಂಡಿದ್ದು, ಪಬ್​ಜಿ ಆಟದ ವಿಚಾರವಾಗಿ ಆರಂಭವಾಗ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗ್ನವಾಗಿ ನೋಡಿದ್ರು, ಲೈಂಗಿಕವಾಗಿ ಬಳಸಿಕೊಂಡ್ರು.. ಎಲ್ಲ ಮುಗಿದ ಮೇಲೆ ಮಾಡಬಾರದ್ದನ್ನ ಮಾಡಿದ್ರು… ಎಳೆಎಳೆಯಾಗಿ ಬಿಚ್ಚಿಟ್ಟ ಯುವತಿ

2004ರಲ್ಲಿ ದುಡ್ಡಿಲ್ಲದೆ ಖಾಲಿ ಡಬ್ಬದಂತಿದ್ದ ಕುಮಾರಸ್ವಾಮಿ ಇವತ್ತು ತುಂಬಿದ ಕೊಡ! ಅಂದಿನ ಹಣದ ರಹಸ್ಯ ಕೆದಕಿದ ಜಮೀರ್

ಪಿಜಿಯಲ್ಲಿದ್ದ ಸಾಕ್ಷ್ಯವನ್ನ ಎಸ್​ಐಟಿ ನಾಶ ಮಾಡಿದೆ: ಸಿಡಿ ಲೇಡಿ ಗಂಭೀರ ಆರೋಪ

ಸುಳ್ಳು‌ ದೂರಿಗೆ ನನ್ನಿಂದ ಹೆಂಡತಿ‌-ಮಕ್ಕಳು ದೂರವಾದರು: ಆರ್​. ಅಶೋಕ್​ ವಿರುದ್ಧ ಸಿಡಿ ಲೇಡಿ ವಕೀಲ ಜಗದೀಶ್​ ವಾಗ್ದಾಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 14 =
Remember me
