ಹಾವೇರಿ: ಪಬ್‌ಜಿ ವಿಡಿಯೋ ಗೇಮ್ ಆಡಬೇಡ ಎಂದಿದ್ದಕ್ಕೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಬಾಲಕನೊಬ್ಬ ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ತಾಲೂಕಿನ ಸಂಗೂರು ಗ್ರಾಮದಲ್ಲಿ ಸಂಭವಿಸಿದೆ.
ತೇಜಸ್ ಶಿಡ್ಲಾಪುರ (17) ಆತ್ಮಹತ್ಯೆಗೆ ಶರಣಾದ ಬಾಲಕ. ಅತಿಯಾಗಿ ಪಬ್‌ಜಿ ಆಡುತ್ತಿದ್ದ ಈತನಿಗೆ ಪೋಷಕರು ಬುದ್ಧಿವಾದ ಹೇಳಿದ್ದಾರೆ. ಆಗಲೂ ಕೇಳದ್ದಕ್ಕೆ ಮೊಬೈಲ್‌ಗೆ ಇಂಟರ್‌ನೆಟ್ ಹಾಕಿಸಿರಲಿಲ್ಲ. ಇದರಿಂದ ಬೇಸತ್ತ ಬಾಲಕ ಆ. 31ರಂದು ತೋಟಕ್ಕೆ ಹೋಗಿ ಅಲ್ಲಿ ಬೆಳೆಗಳಿಗೆ ಸಿಂಪಡಿಸಲು ಇಟ್ಟಿದ್ದ ಕ್ರಿಮಿನಾಶಕ ಸೇವಿಸಿದ್ದ.
ಇದನ್ನೂ ಓದಿ:VIDEO: ಪಾರ್ಕ್​​ಗಳು ಮತ್ತೆ ತೆರೆದ ಖುಷಿಯಲ್ಲಿ ಪರಮಾವಧಿ ಮೂರ್ಖತನ ತೋರಿದ ಸಾರ್ವಜನಿಕರು
ದಾರಿಹೋಕರಿಂದ ವಿಷಯ ತಿಳಿದ ಪಾಲಕರು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಗುರುವಾರ ಮೃತಪಟ್ಟಿದ್ದಾನೆ. ಈ ಕುರಿತು ಹಾವೇರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಬ್‌ಜಿ ಸೇರಿದಂತೆ ಚೀನಾದ ಅನೇಕ ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ನಿಷೇಧಿಸಿದೆ. ಇದು ಅದಕ್ಕೂ ಮೊದಲು ನಡೆದ ಘಟನೆಯಾಗಿದೆ.
ಡ್ರಗ್ ಕೇಸ್: ಬಂಧಿತ ನಟಿಯರಿಗೆ ಚಿಕನ್ ಬಿರಿಯಾನಿ ಕೊಡಿಸಿದ ಪೊಲೀಸರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
