ಬೆಂಗಳೂರು :ಸದ್ಯ ಕರೊನಾದಿಂದಾಗಿ ಬಣಗುಟ್ಟುತ್ತಿರುವ ರಾಜ್ಯದ ಸರ್ಕಾರಿ ಕಚೇರಿಗಳು 2021ನೇ ಸಾಲಿನಲ್ಲೂ 269 ದಿನಗಳಷ್ಟೇ ನಡೆಯಲಿವೆ! ರಾಜ್ಯ ಸರ್ಕಾರ 2021ನೇ ಸಾಲಿನ ಸರ್ಕಾರಿ ರಜೆಗಳನ್ನು ಘೂಷಣೆ ಮಾಡಿ ಶನಿವಾರ ಆದೇಶ ಹೊರಡಿಸಿದ್ದು, ಒಟ್ಟು 20 ಸಾರ್ವತ್ರಿಕ ರಜೆ, 52 ಭಾನುವಾರ, 2 ಮತ್ತು 4ನೇ ಶನಿವಾರದ ರಜೆ ಜತೆಗೆ 19 ಪರಿಮಿತ ರಜೆಗಳನ್ನೂ ಘೋಷಿಸಲಾಗಿದೆ.
ಸಾರ್ವತ್ರಿಕ ರಜೆಗಳು
ಜ.14 ಮಕರ ಸಂಕ್ರಾಂತಿಜ.26 ಗಣರಾಜ್ಯೋತ್ಸವಮಾ.11 ಮಹಾಶಿವರಾತ್ರಿಏ.4 ಗುಡ್​ಫ್ರೈಡೇಏ.13 ಯುಗಾದಿಏ.14 ಅಂಬೇಡ್ಕರ್ ಜಯಂತಿಮೇ 1 ಕಾರ್ವಿುಕರ ದಿನಾಚರಣೆಮೇ 14 ಬಸವ ಜಯಂತಿಜು.21 ಬಕ್ರಿದ್ಆ. 20 ಮೊಹರಂ ಕಡೆದಿನಸೆ.10 ವಿನಾಯಕ ಚತುರ್ಥಿಅ. 2 ಗಾಂಧಿ ಜಯಂತಿಅ.6 ಮಹಾಲಯ ಅಮಾವಾಸ್ಯೆಅ.14 ಆಯುಧ ಪೂಜೆಅ.15 ವಿಜಯದಶಮಿಅ.20 ವಾಲ್ಮೀಕಿ ಜಯಂತಿನ.1 ಕನ್ನಡ ರಾಜ್ಯೋತ್ಸವನ.3 ನರಕ ಚತುರ್ದಶಿನ.5 ಬಲಿಪಾಡ್ಯಮಿನ.22 ಕನಕದಾಸ ಜಯಂತಿ
ಸರಣಿ ರಜೆ ಹೆಚ್ಚು:ಗುಡ್ ಫ್ರೈಡೇ, ಬಸವ ಜಯಂತಿ, ಮೊಹರಂ ಕಡೆಯ ದಿನ, ಗಣೇಶ ಚತುರ್ಥಿ, ವಿಜಯ ದಶಮಿ ಹಾಗೂ ಬಲಿ ಪಾಡ್ಯಮಿ ಶುಕ್ರವಾರ ಬಂದಿವೆ. ಇವುಗಳ ಜತೆಗೆ ಶನಿವಾರ ರಜೆ ಹಾಕಿಕೊಂಡರೆ ಮೂರು ದಿನದ ರಜೆ ಪಡೆಯಲು ಅವಕಾಶ ಇದೆ. ಕಾರ್ವಿುಕ ದಿನಾಚರಣೆ, ಗಾಂಧಿ ಜಯಂತಿ ಶನಿವಾರ ಇವೆ. ಕನಕ ಜಯಂತಿ ಹಾಗೂ ಕನ್ನಡ ರಾಜ್ಯೋತ್ಸವ ಸೋಮವಾರ ಇರುವುದರಿಂದ ಭಾನುವಾರ ಸೇರಿ ಎರಡು ದಿನ ರಜೆ ಬರಲಿವೆ.
ಇದನ್ನೂ ಓದಿ:Web Exclusive | ಜೆಟಿಒ ನೇಮಕಾತಿಗೆ ಗ್ರಹಣ – ಮೂರು ವರ್ಷವಾದರೂ ಪೂರ್ಣಗೊಳ್ಳದ ಪ್ರಕ್ರಿಯೆ
ರಜೆ ಪಟ್ಟಿಗೆ ಸೇರದ್ದು :ಮಹಾವೀರ ಜಯಂತಿ (ಏ.25), ಸ್ವಾತಂತ್ರ್ಯ ದಿನಾಚರಣೆ (ಆ.15.) ಭಾನುವಾರ ಬಂದರೆ, ಕ್ರಿಸ್​ವುಸ್(ಡಿ.25.) 2ನೇ ಶನಿವಾರ ಬರುತ್ತದೆ. ಆದ್ದರಿಂದ ಅವು ರಜೆ ದಿನ ಒಳಗೊಂಡಿರುವುದಿಲ್ಲ. ಮಧ್ವ ನವಮಿ (ಫೆ.21), ಹೋಳಿ ಹಬ್ಬ(ಮಾ.28), ಶ್ರೀರಾಮಾಜಾಚಾರ್ಯ ಜಯಂತಿ(ಏ.18) ಯಜುರ್ ಉಪಾಕರ್ಮ(ಆ.22.) ಶ್ರೀಕೃಷ್ಣ ಜನ್ಮಾಷ್ಠಮಿ(ಆ.29) ಅನಂತ ಪದ್ಮನಾಭ ವ್ರತ (ಸೆ.19) ಭಾನುವಾರ ಬರುವುದಿಂದ ರಜೆ ಪಟ್ಟಿಯಲ್ಲಿ ಸೇರಿಸಿಲ್ಲ. ಸೌರಮಾನ ಯುಗಾದಿ(ಏ.14) ಬುಧವಾರ ಡಾ. ಅಂಬೇಡ್ಕರ್ ಜಯಂತಿ ನಿಮಿತ್ತ ಘೋಷಿಸಿರುವ ಸಾರ್ವತ್ರಿಕ ರಜೆ ದಿವಸ ಬರುವುದರಿಂದ ಅದನ್ನು ಕೂಡ ರಜೆ ಪಟ್ಟಿಯಲ್ಲಿ ಸೇರಿಸಿಲ್ಲ.
ಇದನ್ನೂ ಓದಿ:ಕರೊನಾ 2ನೇ ಅಲೆ, ಹಲವು ರಾಜ್ಯಗಳಲ್ಲಿ ಮತ್ತೆ ನಿರ್ಬಂಧ – ಹರಿಯಾಣ, ರಾಜಸ್ಥಾನದಲ್ಲಿ ಹೊಸ ಪ್ರಕರಣ ಹೆಚ್ಚಳ
ನಿರ್ಬಂಧಿತ ರಜಾದಿನ :ಜ.1 ನೂತನ ವರ್ಷಾರಂಭ, ಮಾ.30 ಷಬ್-ಎ-ಬರಾತ್, ಏ.3 ಹೋಳಿ ಶನಿವಾರ, ಏ.17 ದೇವರ ದಾಸಿಮಯ್ಯ ಜಯಂತಿ, ಏ.21 ಶ್ರೀರಾಮನವಮಿ, ಮೇ 7 ಜುಮಾತ್-ಉಲ್-ವಿದಾ, ಮೇ 10 ಷಬ್-ಎ-ಖದರ್, ಮೇ 17 ಶಂಕರಾಚಾರ್ಯ ಜಯಂತಿ, ಮೇ 26 ಬುದ್ದ ಪೂರ್ಣಿಮೆ, ಆ. 20 ವರಮಹಾಲಕ್ಷ್ಮಿ ವ್ರತ, ಆ. 21 ಓಣಂ, ಆ. 23 ಬ್ರರ್ಹಶ್ರೀ ನಾರಾಯಣಗುರು ಜಯಂತಿ, ಸೆ.9 ಸ್ವರ್ಣಗೌರಿ ವ್ರತ, ಸೆ.17 ವಿಶ್ವಕರ್ಮ ಜಯಂತಿ, ಅ.18 ತುಲಾ ಸಂಕ್ರಮಣ, ನ.19 ಗುರುನಾನಕ್ ಜಯಂತಿ, ನ.20 ಪುತರಿ ಹಬ್ಬ, ಡಿ.24 ಕ್ರಿಸ್​ವುಸ್ ಈವ್.
ನ್ಯಾವಿಗೇಷನ್ ವ್ಯವಸ್ಥೆಯಲ್ಲೂ ಆತ್ಮನಿರ್ಭರ – ಜಿಪಿಎಸ್​ಗೆ ಪರ್ಯಾಯವಾಗಿ ದೇಶೀಯ ಐಆರ್​ಎನ್​ಎಸ್​ಎಸ್ ಸಿದ್ಧ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − nine =
Remember me
