ಎಲ್ಲ ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಕೊಟ್ಟಿದ್ದರೆ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತಿತ್ತು. ಕೃಷಿಯಲ್ಲೂ ಡಿಜಿಟಲೀಕರಣಕ್ಕೆ ಒತ್ತು ಕೊಡುವ ನಿರ್ಧಾರ ಸ್ವಾಗತಾರ್ಹ. ಕೃಷಿಯಲ್ಲಿ ಕಾರ್ಮಿಕರ ಕೊರತೆ ಕಾಡುತ್ತಿದೆ. ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಹಾಗೂ ಯುವಕರನ್ನು ಕೃಷಿಯತ್ತ ಸೆಳೆಯಲು ಯುವಪೀಳಿಗೆಗೆ ತಂತ್ರಜ್ಞಾನ ಬಳಕೆಯ ತರಬೇತಿಗೆ ಆದ್ಯತೆ ಕೊಡಬೇಕು. ಒಟ್ಟಾರೆ ಕೃಷಿ ವಲಯಕ್ಕೆ ಬಜೆಟ್‌ನಲ್ಲಿ 90 ಸಾವಿರ ಕೋಟಿ ರೂ. ಮೀಸಲಿಟ್ಟಿರುವುದು ಆಶಾದಾಯಕವಾಗಿದೆ.
-ಚಂದ್ರಶೇಖರ್‌, ಕೃಷಿಕ, ಕೋಲಾರ

ಮಹಿಳಾ ಸಬಲೀಕರಣಕ್ಕೆ ಒತ್ತುಕೊಟ್ಟು ಅದರಲ್ಲೂ ವಿಶೇಷವಾಗಿ ಸ್ವತಃ ಮಹಿಳಾ ಉದ್ಯೋಗಿಗಳಿಗೆ ಮಹಿಳಾ ಸಮ್ಮಾನ್ ಹೊಸ ಯೋಜನೆ ಘೋಷಣೆ ಮಾಡಿರುವುದು ಸಂತಸ ತಂದಿದೆ. ಆದರೆ ಅಡುಗೆ ಅನಿಲ ದರ ಇಳಿಕೆಯ ಬಗ್ಗೆ ಪ್ರಸ್ತಾಪ ಇಲ್ಲದಿರುವುದು ನಿರಾಸೆ ತಂದಿದೆ.
-ನಂದಿನಿ ಗೃಹಿಣಿ, ರಾಜಗೋಪಾಲನಗರ ನಿವಾಸಿ

ಕರ್ನಾಟಕಕ್ಕೆ ತೀರಾ ಹೇಳಿಕೊಳ್ಳುವಂತ ಯೋಜನೆ ನೀಡಿಲ್ಲ. ಹಿರಿಯರ ಉಳಿತಾಯ ಯೋಜನೆಗೆ 30 ಲಕ್ಷ ರೂಪಾಯಿ ಏರಿಸಿರುವುದು ಪರವಾಗಿಲ್ಲ, ಆದರೆ ಅಂಚೆ ಕಚೇರಿಯಲ್ಲಿ ಪಿಂಚಣಿ ಪಡೆಯಲು ಅಲೆದಾಟದ ಬಗ್ಗೆ ಸರಳೀಕರಣದ ಬಗ್ಗೆ ಗಮನಹರಿಸಬೇಕಿತ್ತು.
-ಎನ್. ಅಮರೇಶ್, ನಿವೃತ್ತ ಖಾಸಗಿ ಉದ್ಯೋಗಿ
ಸರ್ಕಾರಗಳು ಮಂಡಿಸುವ ಬಜೆಟ್ ಯಾವಾಗಲೂ ಮಧ್ಯಮ ವರ್ಗದ ಜನರಿಗೆ ಅನುಕೂಲಕರವಾಗಿರುವುದಿಲ್ಲ. ಬದಲಾಗಿ ಮೇಲ್ವರ್ಗದ ಜನರಿಗೆ ಅನುಕೂಲವಾಗಿರುತ್ತದೆ. ಆದರೆ ಆ ಅಪವಾದದಿಂದ ಹೊರಬಂದು ಈ ಬಾರಿಯ ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ಅನುಕೂಲ ಮಾಡಿಕೊಡಬಹುದಾಗಿತು. ಆದರೆ ಅದು ಆಗಿಲ್ಲ.
-ಯಶ್ವಂತಿ, ಕೆಂಗೇರಿ ಉಪನಗರದ ನಿವಾಸಿ

ಮಹಿಳಾ ಸನ್ಮಾನ ಉಳಿತಾಯ ಯೋಜನೆ ಜಾರಿಗೆ ತಂದಿರುವುದು. ಮಕ್ಕಳಿಗೆ ಮತ್ತು ಯುವಕರಿಗೆ ಡಿಜಿಟಲ್ ಲೈಬ್ರರಿಯನ್ನು ಸ್ಥಳೀಯ ಭಾಷೆಗಳಲ್ಲಿ ನೀಡುವ ಯೋಜನೆ ಅತ್ಯುತ್ತಮವಾದದ್ದು. ಸಿರಿಧಾನ್ಯಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿ ಹೆಚ್ಚಿನ ಪ್ರೋತ್ಸಾಹ ಕೊಟ್ಟಿರುವುದು ಶ್ಲಾಘನೀಯ
-ಭವಾನಿ, ಯಲಹಂಕ ನಿವಾಸಿ

ಹಿರಿಯ ನಾಗರಿಕರು ಬ್ಯಾಂಕುಗಳಲ್ಲಿ ಹೂಡಿಕೆ ಮಾಡುವ ಠೇವಣಿಗಳ ಮಿತಿಯನ್ನು 15 ಲಕ್ಷದಿಂದ 30 ಲಕ್ಷಕ್ಕೆ ಹೆಚ್ಚಿಸಿರುವುದು ಅತ್ಯುತ್ತಮ ಬೆಳವಣಿಗೆ. ಹಸಿರು ಇಂಧನ ಬಳಕೆಗೆ ಪ್ರೋತ್ಸಾಹಿಸಲು ಈ ವಲಯಕ್ಕೆ 35 ಸಾವಿರ ಕೋಟಿ ಹೂಡಿಕೆ ಮಾಡಿ ಹಳೇ ವಾಹನಗಳ ನಿಷೇಧಕ್ಕೆ ಹೊಸ ನೀತಿ ಜಾರಿಗೆ ತಂದಿರುವುದು ಒಂದು ಉತ್ತಮ ಯೋಜನೆ.
-ರತ್ನಾಕರ ವೈದ್ಯ, ವಿಕಾಸ್ ಬಡಾವಣೆ, ಯಲಹಂಕ

ಈ ಬಾರಿಯ ಬಜೆಟ್ ರೈತರಿಗೆ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲಕರವಾಗಿದೆ. ಆದರೆ, ಬಟ್ಟೆ, ಚಿನ್ನದ ಬೆಲೆ ಏರಿಕೆಯಿಂದ ಮಧ್ಯಮ ಹಾಗೂ ಕೆಳವರ್ಗದ ಜನರಿಗೆ ಅನಾನುಕೂಲವಾಗಲಿದೆ. ಕರ್ನಾಟಕದ ಹೆದ್ಧಾರಿಗೆ ಅನುಕೂಲವಾಗಲಿದೆ.
-ರವೀಂದ್ರ ಶೆಟ್ಟಿ, ಉಲ್ಲಾಳು ನಿವಾಸಿ
ಮಧ್ಯಮ ವರ್ಗದ ಕುಟುಂಬಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ. ಕೆಲವು ಅಗತ್ಯ ವಸ್ತುಗಳ ಬೆಲೆ ಇಳಿಕೆಯಿಂದ ಜನರಲ್ಲಿ ಆಶಾಭಾವನೆ ಮೂಡಿಸಿದೆ. ಒಟ್ಟಾರೆ ದೂರದೃಷ್ಟಿ ಹೊಂದಿರುವ ಬಜೆಟ್ ಮಂಡನೆಯಾಗಿದೆ.
-ಭಾಸ್ಕರ್ ಬಾಬು, ಗೋವಿಂದರಾಜನಗರ ನಿವಾಸಿ

ರೈತರಿಗೆ ಪೂರಕವಾಗಿರುವ ಬಜೆಟ್ ಮಂಡನೆಯಾಗಿದೆ, ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಬಿಡುಗಡೆ ಮಾಡಿರುವುದು ಆ ಭಾಗದ ಹಲವು ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ. ಜತೆಗೆ ಯುವಕರು-ಹಿರಿಯ ನಾಗರಿಕರಿಗೂ ಅನುಕೂಲಕರವಾಗಿದೆ.
-ಗಂಗಾಧರ್, ಮಾರೇನಹಳ್ಳಿ ನಿವಾಸಿ

ಬರಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಂಡಿಸಿರುವ ನಿರಾಶದಾಯಕ ಬಜೆಟ್ ಇದಾಗಿದೆ. ಮಹಾದಾಯಿ ವಿಚಾರದಲ್ಲಿ ಮಲತಾಯಿ ಧೋರಣೆ ತೋರುತ್ತಿರುವ ಕೇಂದ್ರ ಸರ್ಕಾರ ಕೇವಲ ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಬಿಡುಗಡೆ ಮಾಡಿ ಜನರಿಗೆ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ.
-ನಾಗರಾಜ್ ಗೌಡ, ಯಲಹಂಕ

ದೂರದೃಷ್ಟಿವುಳ್ಳ ಬಜೆಟ್ ಇದಾಗಿದ್ದು ಉತ್ತರ ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಗೆ 53 ಸಾವಿರ ಕೋಟಿ ಮತ್ತು 50 ಹೊಸ ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ಅನುದಾನ ನೀಡಿರುವುದನ್ನು ಸ್ವಾಗತಿಸುತ್ತೇನೆ. 5 ರಿಂದ 7 ಲಕ್ಷಕ್ಕೆ ತೆರಿಗೆ ರಿಯಾಯಿತಿ ಮಿತಿ ಏರಿಸಿರುವುದು ಸಂತಸದ ವಿಷಯ.
-ಡಾ.ಬಿ.ರಮೇಶ್, ಹುಸ್ಕೂರು ಗ್ರಾಮ

ಬಜೆಟ್‌ನಲ್ಲಿ ಪ್ರಮುಖವಾಗಿ ತೆರಿಗೆ ವಿಚಾರವೇ ಮುನ್ನಲೆಗೆ ಬಂದಿದೆ. ಸಾಮಾನ್ಯ ಜನರಿಗೆ ನೇರವಾಗಿ ಅನುಕೂಲವಾಗುವ ಯಾವುದೇ ವಿಚಾರಗಳು ಪ್ರಸ್ತಾಪ ಆಗಿಲ್ಲ. ರೈತರಿಗೆ ನಿರ್ದಿಷ್ಟವಾದ ಯೋಜನೆಗಳನ್ನು ಘೋಷಣೆ ಮಾಡಿಲ್ಲ. ಮುಂದಾಲೋಚನೆ ಇಲ್ಲದ ಬಜೆಟ್.
-ದಂಡಿಗನಹಳ್ಳಿ ಶಿವಣ್ಣ, ಸಮಾಜ ಸೇವಕ (ಮಹಾಲಕ್ಷ್ಮಿಲೇಔಟ್)

5 ಲಕ್ಷದಿಂದ 7 ಲಕ್ಷಕ್ಕೆ ತೆರಿಗೆ ಮಿತಿಯನ್ನು ಹೆಚ್ಚಿಸಿರುವುದರಿಂದ ಮಧ್ಯಮ ವರ್ಗದವರಿಗೆ ಅನುಕೂಲಕರವಾಗಿದೆ. ಕರ್ನಾಟಕದಲ್ಲಿ ಚುನಾವಣೆ ಎದುರಿಸಬೇಕಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಒಂದಷ್ಟು ಅನುಕೂಲಕರ ಮಾಡಿಕೊಡಲಾಗಿದೆ.
-ಹನುಮಂತರಾಯಪ್ಪ, ಮಹಾಲಕ್ಷ್ಮಿ ಲೇಔಟ್ ನಿವಾಸಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + one =
Remember me
