ಬೆಂಗಳೂರು:ಕರೊನಾ ಭೀತಿಯಿಂದಾಗಿ ಬಿಎಂಟಿಸಿ ಬಸ್​ಗಳಲ್ಲಿ ಪ್ರಯಾಣಿಸಲು ಜನರು ಹಿಂದೇಟು ಹಾಕುತ್ತಿದ್ದು, 2ನೇ ದಿನವೂ ಪರಿಸ್ಥಿತಿ ಯಥಾಪ್ರಕಾರವಾಗಿತ್ತು. ಸೋಂಕು ಭೀತಿ ಒಂದೆಡೆ ಯಾದರೆ, ದುಬಾರಿ ದರದಿಂದಾಗಿ ಪ್ರಯಾಣಿಕರು ಬಸ್ ಹತ್ತಲು ಮನಸ್ಸು ಮಾಡಲಿಲ್ಲ.
ಬುಧವಾರ ಬೆಳಗ್ಗೆ 7 ಗಂಟೆಗೆ ಮೊದಲ ಬಸ್ ಸಂಚರಿಸಬೇಕಿತ್ತು, ಆದರೆ ಪ್ರಯಾಣಿಕರ ಕೊರತೆಯಿಂದಾಗಿ 8 ಗಂಟೆವರೆಗೆ ಯಾವುದೇ ಬಸ್ ಸಂಚರಿಸಲಿಲ್ಲ. ಮೆಜೆಸ್ಟಿಕ್, ಯಶವಂತಪುರ ಸೇರಿ ಪ್ರಮುಖ ನಿಲ್ದಾಣಗಳಲ್ಲಿ ಬಸ್​ಗಳು ಸಾಲುಗಟ್ಟಿ ನಿಂತಿದ್ದರೂ ಪ್ರಯಾಣಿಕರ ಸುಳಿವೇ ಇರಲಿಲ್ಲ. ಬಂದ ಬೆರಳೆಣಿಕೆಯ ಪ್ರಯಾಣಿಕರಿಗೂ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ವ್ಯವಸ್ಥೆ ಇರಲಿಲ್ಲ. ಬಸ್ ಹತ್ತುವಾಗ ವ್ಯಕ್ತಿಗತ ಅಂತರ ಕಾಪಾಡುವಂತೆ ಮಾಡುವಲ್ಲಿ ಬಿಎಂಟಿಸಿ ಸಿಬ್ಬಂದಿ ಹರಸಾಹಸ ಪಡಬೇಕಾಯಿತು.
ದುಬಾರಿ ದರಕ್ಕೆ ಆಕ್ರೋಶ: ಬಸ್​ಗಳಲ್ಲಿ ಟಿಕೆಟ್ ನೀಡುವುದನ್ನು ನಿಷೇಧಿಸಲಾಗಿದ್ದು, ಪ್ರಯಾಣಿಕರು ಪಾಸ್ ಖರೀದಿಸಿಯೇ ಪ್ರಯಾಣಿಸುವಂತೆ ಸೂಚಿಸಲಾಗಿದೆ. ಹೀಗಾಗಿ ಪ್ರತಿಯೊಬ್ಬರೂ 20 ರೂ. ಪ್ರಯಾಣ ದರವಿರುವ ಸ್ಥಳಗಳಿಗೆ ತೆರಳಬೇಕೆಂದರೂ 70 ರೂ. ಮೊತ್ತದ ದಿನದ ಪಾಸ್ ಖರೀದಿಸಬೇಕಿದೆ. ಈ ಬಗ್ಗೆ ಅನೇಕ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಬಿಎಂಟಿಸಿ ಬಸ್​ಗಳಲ್ಲಿ ಪ್ರಯಾಣಿಸುವುದನ್ನು ನಿಲ್ಲಿಸುತ್ತೇವೆ ಎಂದು ಅಧಿಕಾರಿಗಳಿಗೆ ನಿಲ್ದಾಣಗಳಲ್ಲಿ ಹೇಳುತ್ತಿದ್ದ ದೃಶ್ಯ ಕಂಡುಬಂತು.
ರಾತ್ರಿ 7ರ ನಂತರವೂ ಕಾದರು!
ರಾತ್ರಿ 7 ಗಂಟೆಗೆ ಬಸ್ ಸೇವೆ ನಿಲ್ಲಿಸಲಾಗು ವುದು ಎಂದು ಮೊದಲೇ ಹೇಳಲಾಗಿತ್ತು. ಹೀಗಾಗಿ ದೂರದ ಮಾರ್ಗಗಳಿಗೆ ಸಂಚರಿಸುವ ಬಸ್​ಗಳ ಸೇವೆಯನ್ನು ಸಂಜೆ 6 ಮತ್ತು ಹತ್ತಿರದ ಮಾರ್ಗ ಗಳಿಗೆ ಸಂಜೆ 6.30ಕ್ಕೆ ಅಂತಿಮ ಬಸ್ ತೆರಳಿತು. ಆದರೆ, ನಿಯಮ ಗೊತ್ತಿಲ್ಲದವರು ರಾತ್ರಿ 7 ಗಂಟೆ ನಂತರವೂ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದರು.
ಚಾಲಕ-ನಿರ್ವಾಹಕ ಸಸ್ಪೆಂಡ್
ಬಿಎಂಟಿಸಿ ಬಸ್ ಪುನರಾರಂಭವಾದ ಮೊದಲ ದಿನವೇ ನಿಗದಿತ ಪ್ರಯಾಣಿಕರಿಗಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ದ ಆರೋಪದಡಿ ಚಾಲಕ ಕಂ ನಿರ್ವಾಹಕ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ. ಮೆಜೆಸ್ಟಿಕ್- ಯಲಹಂಕ ಮಾರ್ಗದಲ್ಲಿ ಮಂಗಳವಾರ ರಾತ್ರಿ ಸಂಚರಿಸಿದ ಕೆಎ 57 ಎಫ್ 1268 ನೋಂದಣಿ ಸಂಖ್ಯೆಯ ಘಟಕ 30ಕ್ಕೆ ಸೇರಿದ ಬಸ್​ನಲ್ಲಿ ವ್ಯಕ್ತಿಗತ ಅಂತರ ನಿಯಮ ಉಲ್ಲಂಘಿಸಿ 70 ಪ್ರಯಾಣಿಕರನ್ನು ಕರೆದೊಯ್ದಿದ್ದರು. ಹೀಗಾಗಿ ಬಸ್​ನ ಚಾಲಕ ದೀಪು ವರ್ವ ಹಾಗೂ ನಿರ್ವಾಹಕ ಕೊಂಡಯ್ಯ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
3 ತಿಂಗಳು ಬಸ್ ಹತ್ತಲ್ಲ
ಲಾಕ್​ಡೌನ್ ನಂತರ ಸಮೂಹ ಸಾರಿಗೆ ಬಳಕೆ ಬಗ್ಗೆ ಬಿಪ್ಯಾಕ್ ಸಂಸ್ಥೆ ಆನ್​ಲೈನ್ ಸರ್ವೆ ನಡೆಸಿದ್ದು, ಬಹುತೇಕ ಪ್ರಯಾಣಿಕರು ಕರೊನಾ ಭೀತಿ ಹಿನ್ನೆಲೆಯಲ್ಲಿ ಮುಂದಿನ ಮೂರು ತಿಂಗಳು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸದಿರಲು ನಿರ್ಧರಿಸಿದ್ದಾರೆ.
ಸಾರ್ವಜನಿಕ ಸಾರಿಗೆ ಬಳಸುತ್ತಿರುವವರಲ್ಲಿ ಶೇ. 50 ಜನ ಮುಂದಿನ ಮೂರು ತಿಂಗಳವರೆಗೆ ಬಿಎಂಟಿಸಿ ಸೇರಿ ಯಾವುದೇ ಸಮೂಹ ಸಾರಿಗೆ ಬಳಸದಿರಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಸಬ್​ಇನ್​ಸ್ಪೆಕ್ಟರ್ ಆಕಾಂಕ್ಷಿಗಳಿಗೆ ವಯೋಮಿತಿ ಸಂಕಷ್ಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + sixteen =
Remember me
