ದಾವಣಗೆರೆ:ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲು, ತಮಗಾದ ಅನ್ಯಾಯವನ್ನು ಎದುರಿಸಲು ಜನರು ನಾನಾ ರೀತಿಯ ಪ್ರತಿಭಟನೆಗಳನ್ನು ನಡೆಸುವುದು ಸರ್ವೇಸಾಮಾನ್ಯ. ಅಂಥ ಒಂದು ಪ್ರತಿಭಟನೆಯ ಬಿಸಿಯನ್ನು ಶಾಸಕ ಎಂ.ಪಿ. ರೇಣುಕಾಚಾರ್ಯ ಎದುರಿಸುವಂತಾದ ಪ್ರಕರಣವೊಂದು ನಡೆದಿದೆ.
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಗ್ರಾಮವಾಸ್ತವ್ಯ ಕಾರ್ಯಕ್ರಮ‌ದಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಶಾಸಕ ರೇಣುಕಾಚಾರ್ಯ ಇದ್ದ ವೇದಿಕೆಯತ್ತ ಜನರು ಕುರಿಗಳನ್ನು ನುಗ್ಗಿಸಿದ್ದಲ್ಲದೆ, ಅವರನ್ನು ತೀವ್ರ ತರಾಟೆಗೂ ತೆಗೆದುಕೊಂಡಿದ್ದಾರೆ.
ಗೋಮಾಳದ ಜಮೀನನ್ನು ಶಾಸಕರು ಸ್ವಪಕ್ಷದ ಕೆಲವು ಕಾರ್ಯಕರ್ತರ ಗುಂಪಿಗೆ ಉಳುಮೆ ಮಾಡಲು ಬಿಟ್ಟಿದ್ದಾರೆ ಎಂದು ಸ್ಥಳೀಯ ಜನರು ರೇಣುಕಾಚಾರ್ಯ ವಿರುದ್ಧ ಆರೋಪ ಹೊರಿಸಿ, ಈ ಕೃತ್ಯ ನಡೆಸಿದ್ದಾರೆ. ನ್ಯಾಮತಿ ತಾಲೂಕಿನ ಬಸವನಹಳ್ಳಿ ಗ್ರಾಮದ ಸರ್ವೇ ನಂಬರ್ 25, 29ರಲ್ಲಿರುವ ಗೋಮಾಳವನ್ನು ಖಾತೆ ಮಾಡಿಸಿಕೊಡಲೂ ಶಾಸಕರು ಮುಂದಾಗಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ ಸ್ಥಳೀಯ ಕೆಲವು ಸಾರ್ವಜನಿಕರು ಶಾಸಕರಿದ್ದ ವೇದಿಕೆಯನ್ನು ಕುರಿಗಳನ್ನು ನುಗ್ಗಿಸಿ ಪ್ರತಿಭಟನೆ ನಡೆಸಿ, ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜನರನ್ನು ಸಮಾಧಾನ ಪಡಿಸುವಲ್ಲಿ ರೇಣುಕಾಚಾರ್ಯ ಹೈರಾಣಾದರು. ದನ ಕುರಿ ಮೇಕೆಗಳನ್ನು ಮೇಯಿಸಲು ನಮ್ಮ ಗ್ರಾಮದಲ್ಲಿ ಇದನ್ನು ಹೊರತುಪಡಿಸಿ ಬೇರೆ ಯಾವುದೇ ಜಮೀನು ಇಲ್ಲ. ಈ ಕಾರಣದಿಂದ ಈ ಜಮೀನನ್ನು ಯಾರಿಗೂ ಖಾತೆ ಮಾಡಿ ಕೊಡಬಾರದು ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.
ಶಾಲಾ ಬಸ್​ನ ಪ್ರಥಮ ಚಿಕಿತ್ಸಾ ಡಬ್ಬದಲ್ಲಿ ಕಾಂಡಂ​, ಅವಧಿ ಮುಗಿದ ಔಷಧ, ಪೇನ್​ ಕಿಲ್ಲರ್ಸ್​ ಪತ್ತೆ!
ಡಾ.ರಾಜ್​​ ಕುಟುಂಬದ ವಿರುದ್ಧ ಹಗುರ ಮಾತು ಆರೋಪ; ಪುನೀತ್ ಕೆರೆಹಳ್ಳಿ ಮೇಲೆ ದಾಳಿ, ಅಂಗಿ ಹರಿದು ಹೊಯ್​ಕೈ
Sign in to your account
Please enter an answer in digits:5 × 1 =
Remember me
