ಬೆಂಗಳೂರು:ದೇಶದಲ್ಲಿರುವ ಕಾನೂನು ಕಾಲೇಜುಗಳ ಹೆಸರು, ಅವುಗಳ ಮಾನ್ಯತೆ ಮತ್ತಿತರ ವಿವರಗಳನ್ನು ಭಾರತೀಯ ವಕೀಲರ ಪರಿಷತ್ (ಬಿಸಿಐ) ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಬಿಎಂಎಸ್ ಕಾನೂನು ಕಾಲೇಜು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಗೋವಿಂದರಾಜ್ ಅವರ ಏಕಸದಸ್ಯಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಆಲಿಸಿದ ನ್ಯಾಯಾಲಯ, ಭಾರತೀಯ ವಕೀಲರ ಪರಿಷತ್ ಯಾವ್ಯಾವ ಕಾನೂನು ಕಾಲೇಜುಗಳು ಯಾವ ದಿನಾಂಕದಲ್ಲಿ ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸಿದವು, ಅವುಗಳು ಶುಲ್ಕ ಯಾವಾಗ ಪಾವತಿಸಿದವು, ಯಾವಾಗ ಮಾನ್ಯತೆ ನವೀಕರಿಸಲಾಗಿದೆ ಎಂಬುದು ಸೇರಿ ಮತ್ತಿತರ ವಿವರಗಳನ್ನು ಪಿಡಿಎಫ್ ರೂಪದಲ್ಲಿ ಅಪ್‌ಲೋಡ್ ಮಾಡಬೇಕು ಎಂದಿದೆ.
ಅಷ್ಟೇ ಅಲ್ಲದೆ, ಎಷ್ಟು ಸೀಟುಗಳ ಭರ್ತಿಗೆ ಅನುಮೋದನೆ ನೀಡಲಾಗಿದೆ? ಯಾವ ಅವಧಿಯವರೆಗೆ ಮಾನ್ಯತೆ ನೀಡಲಾಗಿದೆ ಎಂಬ ವಿವರಗಳನ್ನೂ ಸಹ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ನ್ಯಾಯಪೀಠ ತಿಳಿಸಿದೆ. ಜತೆಗೆ ಕಾನೂನು ಕಾಲೇಜುಗಳಿಗೆ ಮಾನ್ಯತೆ ನೀಡುವ ಅಧಿಕಾರ ಬಿಸಿಐಗಿದೆ. ಅದು ತನ್ನ ವೆಬ್‌ಸೈಟ್‌ನಲ್ಲಿ ಸರಿಯಾದ ವಿವರಗಳನ್ನು ಪ್ರಕಟಿಸಬೇಕು.
ಇಲ್ಲವಾದರೆ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಕಾನೂನು ವಿದ್ಯಾರ್ಥಿಗಳಿಗೆ ತೊಂದರೆ ಆಗಲಿದೆ. ಹಾಗಾಗಿ ಅರ್ಜಿದಾರರ ಕಾಲೇಜಿನ ವಿವರಗಳನ್ನು 8 ವಾರಗಳಲ್ಲಿ ಬಿಸಿಐ ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು ಎಂದು ನ್ಯಾಯಾಲಯ ವಕೀಲರ ಪರಿಷತ್‌ಗೆ ನಿರ್ದೇಶನ ನೀಡಿ ಅರ್ಜಿಯನ್ನು ವಿಲೇವಾರಿ ಮಾಡಿದೆ.
ಪ್ರಕರಣವೇನು?ಬಿಎಂಎಸ್ ಕಾನೂನು ಕಾಲೇಜು 1963ರಿಂದ ಮೂರು ಮತ್ತು ಐದು ವರ್ಷದ ಕಾನೂನು ಕೋರ್ಸ್‌ಗಳನ್ನು ನಡೆಸುತ್ತಿದೆ. ಕಾಲ ಕಾಲಕ್ಕೆ ಮಾನ್ಯತೆ ನವೀಕರಣಕ್ಕೆ ಬಿಸಿಐಗೆ ಅರ್ಜಿಗಳನ್ನು ಸಲ್ಲಿಸಿ ಮಾನ್ಯತೆ ನವೀಕರಣ ಮಾಡಿಸಿಕೊಳ್ಳಲಾಗುತ್ತಿದೆ. 2023-24ರಿಂದ ಮೂರು ವರ್ಷಗಳ ಕಾಲ ಅಂದರೆ 2027-28ರ ಅವಧಿಯವರೆಗೆ ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸಿ, ಅಗತ್ಯ ಶುಲ್ಕವನ್ನು ಪಾವತಿಸಿತ್ತು.
ಆದರೆ ಭಾರತೀಯ ವಕೀಲರ ಪರಿಷತ್ 2023ರ ಮೇ 15ರಂದು ಪ್ರಕಟಿಸಿದ ಪಟ್ಟಿಯಲ್ಲಿ ಮಾನ್ಯತೆ ನವೀಕರಣ ವಿಸ್ತರಣೆಯಾಗಿರುವ ಅಂಶ ನಮೂದಾಗಿರಲಿಲ್ಲ. ಹಾಗಾಗಿ ಬಿಸಿಐಗೆ ಮನವಿ ಸಲ್ಲಿಸಲಾಗಿತ್ತು. ಆದರೂ ಸಹ ಅದು ತನ್ನ ವೆಬ್‌ಸೈಟ್ ನಲ್ಲಿಸರಿಯಾದ ವಿವರಗಳನ್ನು ಪ್ರಕಟಿಸಿರಲಿಲ್ಲ. ಹಾಗಾಗಿ ಬಿಎಂಎಸ್ ಕಾಲೇಜು ಹೈಕೋರ್ಟ್ ಮೊರೆ ಹೋಗಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three − 3 =
Remember me
