ತರೀಕೆರೆ:‘ಅಪ್ಪಾ, ಇಂಗ್ಲಿಷ್ ಸಬ್ಜೆಕ್ಟ್ ಪರೀಕ್ಷೆ ಬರೆದುಬಿಟ್ಟಿದ್ದರೆ ಒಳ್ಳೆಯ ಸ್ಕೋರ್ ಬರ್ತಿತ್ತು. ಆಮೇಲೆ ನನ್ನ ಯಾವ ಕಾಲೇಜಿಗೆ ಸೇರಿಸುತ್ತಿದ್ದೆ?’… ಪಿಯುಸಿ ಫಲಿತಾಂಶ ನೋಡಿ ಈ ಪ್ರಶ್ನೆ ಕೇಳಿದ್ದ ಮಗ ಸಂಜೆ ವೇಳೆಗೆ ಇನ್ನಿಲ್ಲವಾದರೆ ಹೆತ್ತವರಿಗೆ ಹೇಗಾಗಬೇಡ?
ತರೀಕೆರೆಯ ಲಿಂಗಮೂರ್ತಿ ಮತ್ತು ವೇದಾವತಿ ದಂಪತಿ ಪುತ್ರ ಮೋಹಿತ್, ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ. ಐದು ವಿಷಯಗಳ ಪರೀಕ್ಷೆ ಬರೆದಿದ್ದ ಆತ, ಲಾಕ್‌ಡೌನ್ ಕಾರಣ ಇಂಗ್ಲಿಷ್ ಪರೀಕ್ಷೆ ಮುಂದೂಡಿಕೆ ಆಗಿದ್ದರಿಂದ ತರೀಕೆರೆಗೆ ವಾಪಸ್ ಬಂದಿದ್ದ.
ಇದನ್ನೂ ಓದಿರಿಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿ, ಚಿಕಿತ್ಸೆ ಸಿಗದೆ 7 ತಿಂಗಳ ಮಗು ಸಾವು
ಇದೇ ಸಮಯದಲ್ಲಿ ಅನಾರೋಗ್ಯಕ್ಕೆ ತುತ್ತಾದ ಮೋಹಿತ್​ಗೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಶಿಫಾರಸು ಮಾಡಿದ್ದರು. ಅನಾರೋಗ್ಯದಿಂದಾಗಿ ಇಂಗ್ಲಿಷ್ ಪರೀಕ್ಷೆ ಬರೆಯಲು ಸಾಧ್ಯವಾಗಿರಲಿಲ್ಲ.
ಜು.14ರಂದು ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಪ್ರತಿಶತ 92 ಅಂಕಗಳು ಬಂದಿದ್ದವು. ಫಲಿತಾಂಶ ನೋಡಿ ಸಂಭ್ರಮಿಸಿದ್ದ ಮೋಹಿತ್, ‘ಅಪ್ಪಾ, ಒಳ್ಳೆಯ ಮಾರ್ಕ್ಸ್ ಬಂದಿದೆ. ಇಂಗ್ಲಿಷ್‌ನಲ್ಲೂ ಒಳ್ಳೆಯ ಮಾರ್ಕ್ಸ್ ಬಂದು ಪಾಸಾಗಿದ್ದರೆ ಯಾವ ಕಾಲೇಜಿಗೆ ಸೇರಿಸುತ್ತಿದ್ದೆ?’ ಎಂದು ತಂದೆಯನ್ನು ಕೇಳಿದ್ದ. ದುರ್ದೈವ ಫಲಿತಾಂಶ ಪ್ರಕಟವಾದ ದಿನವೇ ಆತ ಕೊನೆಯುಸಿರೆಳೆದಿದ್ದಾನೆ. ಮಗನನ್ನು ಕಳೆದುಕೊಂಡ ಮನೆಯಲ್ಲಿ ಶೋಕ ಮಡುಗಟ್ಟಿದೆ. ಮಗನನ್ನ ನೆನದು ಹೆತ್ತವರು ಕಣೀರಾಗುತ್ತಲೇ ಇದ್ದಾರೆ.
ಅರಬ್​ ದೇಶಗಳಿಗೆ ಯುವತಿಯರ ಕಳ್ಳ ಸಾಗಣೆ; ಫೋಟೋ ಸ್ಟುಡಿಯೋ ನೆಪದಲ್ಲಿ ಬೆಂಗಳೂರಿನಲ್ಲೇ ದಂಧೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + four =
Remember me
