ಬೆಂಗಳೂರು:ಕೋಟ್ಯಂತರ ಅಭಿಮಾನಿಗಳ ಪಾಲಿನ ‘ರಾಜಕುಮಾರ’, ಕನ್ನಡಿಗರ ಪ್ರೀತಿಯ ‘ಅಪ್ಪು’, ಸ್ಯಾಂಡಲ್​ವುಡ್​ನ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರು ನಮ್ಮನ್ನೆಲ್ಲ ಅಗಲಿ ಇಂದಿಗೆ(ಅ.29) ಒಂದು ವರ್ಷ. ಅವರ ನೆನಪಲ್ಲೇ ಅಭಿಮಾನಿಗಳು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಅಪ್ಪುಗಾಗಿ ಮಿಡಿಯುತ್ತಿದ್ದಾರೆ.
ಅಪ್ಪು ಸಮಾಧಿ ಸ್ಥಳಕ್ಕೆ ನಿತ್ಯ ಸಾವಿರಾರು ಮಂದಿ ಭೇಟಿ ನೀಡಿ ದರ್ಶನ ಪಡೆಯುತ್ತಿದ್ದಾರೆ. ಅನ್ನದಾನ, ನೇತ್ರದಾನದಂತಹ ಮಹತ್ಕಾರ್ಯ ನಡೆಸುತ್ತಲೇ ಇದ್ದಾರೆ. ದೇವರ ಮನೆಯಲ್ಲಿ ಅಪ್ಪು ಫೋಟೋ ಇಟ್ಟು ಪೂಜಿಸುತ್ತಿದ್ದಾರೆ. ತಮ್ಮ ಮಕ್ಕಳಿಗೆ ಅಪ್ಪು, ಪುನೀತ್​ ಎಂಬ ಹೆಸರಿಟ್ಟು ಅಪ್ಪುವನ್ನ ಮಕ್ಕಳಲ್ಲಿ ನೋಡುತ್ತಿರುವವರಿಗೆ ಲೆಕ್ಕವಿಲ್ಲ. ಪುಟ್ಟಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ, ಸಾಮಾನ್ಯರಿಂದ ಗಣ್ಯರವರೆಗೂ ಅಪ್ಪು ನೆನೆದು ಕಂಬನಿ ಮಿಡಿಯುತ್ತಲೇ ಇದ್ದಾರೆ, ಅಪ್ಪುಗೆ ನಮಿಸುತ್ತಲೇ ಇದ್ದಾರೆ. ದೆಹಲಿ ಸಿಎಂ ಕೂಡ ಕನ್ನಡದಲ್ಲೇ ಅಪ್ಪುವನ್ನು ಸ್ಮರಿಸಿದ್ದಾರೆ.
ಮರೆಯದ ಮಾಣಿಕ್ಯನಿಗೆ ನನ್ನದೊಂದು ನಮನ.
I profoundly remember the Icon – Dr Puneeth Rajkumar on his death anniversary.
His movies, songs, kindness & social works make us feel he never left us. He will always be a power star of#Karunadu#AppuLivesOn#DrPunithRajkumar
— Arvind Kejriwal (@ArvindKejriwal)October 29, 2022

ಕನ್ನಡದಲ್ಲೇ ಟ್ವೀಟ್​ ಮಾಡಿರುವ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​, ‘ಮರೆಯದ ಮಾಣಿಕ್ಯನಿಗೆ ನನ್ನದೊಂದು ನಮನ’ ಎಂದಿದ್ದಾರೆ. ‘ಇಂದು ಡಾ.ಪುನೀತ್ ರಾಜ್​ಕುಮಾರ್​ ಅವರ ಪುಣ್ಯತಿಥಿ. ಅವರ ನೆನಪು ನನ್ನನ್ನು ಗಾಢವಾಗಿ ಕಾಡುತ್ತಿದೆ. ಪುನೀತ್​ ಅವರ ಸಿನಿಮಾ, ಹಾಡು, ದಯೆ ಮತ್ತು ಸಾಮಾಜಿಕ ಕಾರ್ಯಗಳನ್ನು ನೋಡಿದರೆ ಅವರು ನಮ್ಮನ್ನು ಎಂದಿಗೂ ತೊರೆದಿಲ್ಲ. ಅವರು ನಮ್ಮೊಂದಿಗೇ ಇದ್ದಾರೆ ಅನಿಸುತ್ತದೆ. ಅವರು ಎಂದೆಂದಿಗೂ ಕರುನಾಡಿನ ಪವರ್ ಸ್ಟಾರ್’ ಎಂದು ಕೇಜ್ರಿವಾಲ್​ ಬರೆದುಕೊಂಡಿದ್ದಾರೆ.
ಅಶ್ವಿನಿಗಾಗಿ ಅಪ್ಪು ಭಾವಚಿತ್ರವಿರುವ ವಿಶೇಷ ಸೀರೆ ಮಾಡಿಸಿ ತಂದ ಅಭಿಮಾನಿಗಳು; ಭಾವುಕರಾದ ರಾಘಣ್ಣ.

ಇನ್ನೇನು ತಾಳಿಕಟ್ಟಬೇಕು, ನಾಳೆಯೇ ಹನಿಮೂನ್​… ಅಷ್ಟರಲ್ಲಿ ಪೊಲೀಸರ ಅತಿಥಿಯಾದ ವರ! ನಿಟ್ಟುಸಿರು ಬಿಟ್ಟ ವಧುವಿನ ಕುಟುಂಬಸ್ಥರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − one =
Remember me
