ಬೆಂಗಳೂರು:ಕರ್ನಾಟಕ ಅಂತರ್ಜಲ ಪ್ರಾಧಿಕಾರವು ಬಾವಿ ಅಥವಾ ಕೊಳವೆಬಾವಿ ತೆರೆಯುವುದನ್ನು ನಿರ್ಬಂಧಿಸಲು ರಾಜ್ಯದ 15 ಜಿಲ್ಲೆಗಳ 45 ತಾಲೂಕುಗಳಿಗೆ ಸಂಬಂಧಪಟ್ಟಂತೆ ಅಧಿಸೂಚನೆ ಹೊರಡಿಸಿದೆ.
ಕರ್ನಾಟಕ ಅಂತರ್ಜಲ (ಅಭಿವೃದ್ಧಿ ನಿರ್ವಹಣೆ ಮತ್ತು ನಿಯಂತ್ರಣ) ಅಧಿನಿಯಮ 2011 ಮತ್ತು ನಿಯಮಾವಳಿ 2012ರ ಅನುಸಾರ ಅಂತರ್ಜಲ ಅತಿ ಬಳಕೆ ತಾಲೂಕುಗಳೆಂದು 45 ತಾಲೂಕುಗಳನ್ನು ಗುರುತಿಸಿದ್ದು, ಅಲ್ಲಿಗೆ ಸೀಮಿತವಾಗಿ ಅಧಿನಿಯಮ ಅನ್ವಯವಾಗಲಿದೆ.
ಇಂಥ ಕಡೆಗಳಲ್ಲಿ ಬಾವಿ ಅಥವಾ ಕೊಳಬೆಬಾವಿ ಕೊರೆಯಲು ಜಿಲ್ಲಾ ಮಟ್ಟದ ಸಮಿತಿಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕಾಗುತ್ತದೆ. ಹಾಗೆಯೇ ಅಂತರ್ಜಲ ಬಳಕೆದಾರರು ಪ್ರಾಧಿಕಾರದಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕಾಗುತ್ತದೆ.
ಅನುಮತಿ ಪತ್ರ ಹೊಂದಿರದ ಯಾವೊಬ್ಬ ವ್ಯಕ್ತಿಯು ಕೊಳವೆಬಾವಿ ಕೊರೆಸಲು ಹಣಕಾಸಿನ ಸಹಾಯ, ವಿದ್ಯುಚ್ಛಕ್ತಿ ಸಂಪರ್ಕ ಮುಂತಾದ ಸೌಲಭ್ಯ ಪಡೆದುಕೊಳ್ಳಲು ಅರ್ಹರಾಗುವುದಿಲ್ಲ. ಮುಖ್ಯವಾಗಿ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಯಾವುದೇ ವ್ಯಕ್ತಿ ಅಥವಾ ಯಾವುದೆ ಕೊರೆಯುವ ಯಂತ್ರದ ಮಾಲೀಕರು ಪ್ರಾಧಿಕಾರದಲ್ಲಿ ನೊಂದಾಯಿಸಿಕೊಳ್ಳದೇ ಅಧಿಸೂಚಿತ ಪ್ರದೇಶದಲ್ಲಿ ಬಾವಿ ಅಥವಾ ಕೊಳವೆ ಬಾವಿ ತೋಡುವ ಕೆಲಸ ಕೈಗೊಂಡರೆ ಅಧಿನಿಯಮದ ಪ್ರಕರಣ 32ರಂತೆ ಶಿಕ್ಷಾರ್ಹರಾಗುತ್ತಾರೆ ಎಂದು ಅಂತರ್ಜಲ ನಿರ್ದೇಶನಾಲಯದ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ಅಗತ್ಯವಿದ್ದರೆ ಆಯಾ ಜಿಲ್ಲೆಯ ಹಿರಿಯ ಭೂ ವಿಜ್ಞಾನಿಗಳನ್ನು ಸಂರ್ಪಸಬಹುದು. ಸರ್ಕಾರದ ಅಂತರ್ಜಲ ಕರ್ನಾಟಕ ವೆಬ್​ಸೈಟನ್ನೂ ಕೂಡ ವೀಕ್ಷಿಸಬಹುದಾಗಿದೆ.
ಪಟ್ಟಿಯಲ್ಲಿರುವ ತಾಲೂಕುಗಳು
1. ಬೆಂಗಳೂರು ನಗರ- ಅನೇಕಲ್,
ಬೆಂಗಳೂರು ಪೂರ್ವ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ
2. ಬೆಂಗಳೂರು ಗ್ರಾಮಾಂತರ- ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ
3. ಬಾಗಲಕೋಟೆ- ಬಾದಾಮಿ, ಬಾಗಲಕೋಟೆ
4. ಬೆಳಗಾವಿ- ರಾಮದುರ್ಗ, ಅಥಣಿ, ಸವದತ್ತಿ
5. ಬಳ್ಳಾರಿ- ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ
6. ಚಾಮರಾಜನಗರ- ಗುಂಡ್ಲುಪೇಟೆ
7. ಚಿಕ್ಕಬಳ್ಳಾಪುರ- ಚಿಂತಾಮಣಿ, ಗೌರಿಬಿದನೂರು, ಗುಡಿಬಂಡೆ, ಶಿಡ್ಲಘಟ್ಟ, ಬಾಗೇಪಲ್ಲಿ
8. ಚಿಕ್ಕಮಗಳೂರು- ಕಡೂರು
9. ಚಿತ್ರದುರ್ಗ- ಹೊಳಲ್ಕೆರೆ, ಹೊಸದುರ್ಗ, ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು
10. ದಾವಣಗೆರೆ- ಚನ್ನಗಿರಿ, ಜಗಳೂರು
11. ಗದಗ- ಗದಗ, ರೋಣ
12. ಹಾಸನ- ಅರಸೀಕೆರೆ
13. ಕೋಲಾರ- ಬಂಗಾರಪೇಟೆ, ಕೋಲಾರ, ಮಾಲೂರು, ಮುಳುಬಾಗಿಲು, ಶ್ರೀನಿವಾಸಪುರ
14. ರಾಮನಗರ- ಕನಕಪುರ, ರಾಮನಗರ
15. ತುಮಕೂರು- ಚಿಕ್ಕನಾಯಕನಹಳ್ಳಿ, ಕೊರಟಗೆರೆ, ಮಧುಗಿರಿ, ತಿಪಟೂರು, ತುಮಕೂರು
ಗೊಂದಲ ಬಾಕಿ ಇಟ್ಟ ಸರ್ಕಾರ
ಪ್ರಾಧಿಕಾರ ಅಧಿಸೂಚನೆ ಹೊರಡಿಸಿ ಇನ್ನು ಮುಂದೆ ಬೋರ್​ವೆಲ್ ಹಾಕಿಸುವವರು ಅನುಮತಿ ಪಡೆದುಕೊಳ್ಳಬೇಕೆಂದು ಹೇಳಿದೆ. ಆದರೆ, ಅನುಮತಿ ಯಾರಿಗೆ ಕೊಡುತ್ತಾರೆ? ಯಾವ ಮಾನದಂಡದಲ್ಲಿ ಕೊಡುತ್ತಾರೆ? ಯಾವುದಕ್ಕೆ ಆದ್ಯತೆ ಕೊಡಲಾಗುತ್ತದೆ ಎಂಬುದನ್ನು ತಿಳಿಯಪಡಿಸಿಲ್ಲ.
ವೆಚ್ಚ ಮಾಡಿದ 20 ಸಾವಿರ ಕೋಟಿ ರೂ. ಏನಾಯ್ತು?
ಕಳೆದ 15-20 ವರ್ಷದಿಂದ ಜಲಾನಯನ, ಅಂತರ್ಜಲ ಅಭಿವೃದ್ಧಿ, ಸುಜಲ-1, ಸುಜಲ-2 ಹೀಗೆ ವಿಶೇಷ ಕಾರ್ಯಕ್ರಮಗಳ ಅಡಿಯಲ್ಲಿ ಗ್ರಾಮೀಣಾಭಿವೃದ್ಧಿ, ಅರಣ್ಯ, ಕೃಷಿ, ನೀರಾವರಿ ಇಲಾಖೆ ಅಡಿ ಬರೋಬ್ಬರಿ 20-25 ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ, ಇದು ಎಷ್ಟು ಫಲ ಕೊಟ್ಟಿದೆ ಎಂಬುದು ನೀರಾವರಿ ಹೋರಾಟಗಾರ ಆಂಜನೇಯ ರೆಡ್ಡಿಯವರ ಪ್ರಶ್ನೆಯಾಗಿದೆ.
ವಿಜಯವಾಣಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ಅವರು, ಅಂತರ್ಜಲ ವೃದ್ಧಿಗೆಂದು ಚೆಕ್ ಡ್ಯಾಂ ನಿರ್ವಣ, ಕೆರೆ ಪುನಶ್ಚೇತನ ಮಾಡಿಕೊಂಡು ಬರಲಾಗಿದೆ. ಆ ಕೆಲಸಕ್ಕೆ ದೊಡ್ಡ ಪ್ರಮಾಣದಲ್ಲಿ ಜನರ ತೆರಿಗೆ ಖರ್ಚು ಮಾಡಲಾಗಿದೆ. ಇಷ್ಟೆಲ್ಲ ವೆಚ್ಚ ಮಾಡಿದ ಮೇಲೂ ಈ ತಾಲೂಕುಗಳಲ್ಲಿ ಅಂತರ್ಜಲ ವೃದ್ಧಿಸಿಲ್ಲವೇ? ವೃದ್ಧಿಸದೆ ಇದ್ದರೆ ಯೋಜನೆ ಅವೈಜ್ಞಾನಿಕವಾದವೇ? ಮೌಲ್ಯಮಾಪನ ಮಾಡಲಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.
ಜನರ ತೆರಿಗೆ ಹಣದಲ್ಲಿ ವೆಚ್ಚ ಮಾಡಿ ಉಪಯೋಗವಾಗಿಲ್ಲ ಎಂದಾದರೆ ಆತ್ಮಾವಲೋಕನ ಅತ್ಯವಶ್ಯಕ. ರೋಗ ಸರಿಯಾಗಬೇಕೆಂದರೆ ಚಿಕಿತ್ಸೆ ಬದಲಿಸಬೇಕು, ಇಲ್ಲ ಆಸ್ಪತ್ರೆ ಬದಲಿಸಬೇಕು. ಇವೆರಡೂ ಆಗಿಲ್ಲ ಎಂದಾದರೆ ರೋಗಿ ಸಾಯುತ್ತಾನಷ್ಟೆ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − fourteen =
Remember me
