ಬಾಗಲಕೋಟೆ:ನ್ಯಾಯಾಂಗ ನಿಂದನೆ ಮಾಡಿದ ವಿಶೇಷ ತಹಸೀಲ್ದಾರ್​ಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ರಬಕವಿ-ಬನಹಟ್ಟಿ ತಾಲೂಕಿನ ವಿಶೇಷ ತಹಸೀಲ್ದಾರ್​ ಎಸ್​.ಬಿ. ಕಾಂಬಳೆ ಶಿಕ್ಷೆಗೊಳಗಾದ ಅಧಿಕಾರಿ.
ನಾವಲಗಿ ಗ್ರಾಮದ ಅಣ್ಣಪ್ಪ ಮಾಂಗ ಹಾಗೂ ಇತರರು ತಹಸೀಲ್ದಾರರ ವಿರುದ್ಧ ಜಮಖಂಡಿಯಲ್ಲಿ ನ್ಯಾಯಾಲಯ ನಿಂದನೆ ಪ್ರಕರಣ ದಾಖಲಿಸಿದ್ದರು. ಈ ಮೇರೆಗೆ ವಿಚಾರಣೆ ನಡೆಸಿದ್ದ ಬನಹಟ್ಟಿಯ ಹಿರಿಯ ದಿವಾಣಿ ನ್ಯಾಯಾಧೀಶರಾದ ಕಿರಣಕುಮಾರ ವಡಗೇರಿ ಈ ಆದೇಶ ಹೊರಡಿಸಿದ್ದಾರೆ.
ಕಾಂಬಳೆ ಅವರು ಕಂದಾಯ ನಿರೀಕ್ಷಕರಾಗಿದ್ದಾಗ ಮಾಡಿದ್ದ ಉತಾರ ಬದಲಾವಣೆಯಲ್ಲಿ ನ್ಯಾಯಾಲಯದ ಆದೇಶ ಉಲ್ಲಂಘನೆ ಆಗಿದೆ ಎಂದು ಆರೋಪಿಸಲಾಗಿತ್ತು. ಬನಹಟ್ಟಿ ನ್ಯಾಯಾಲಯ ಹಾಗೂ ರಜಾಕಾಲದ ಜಿಲ್ಲಾ ನ್ಯಾಯಾಲಯಗಳು ಎರಡು ಸಲ ಸ್ಟೇ ಆದೇಶ ಕೊಟ್ಟಿದ್ದವು. ಈ ಬಗ್ಗೆ ಜಿಲ್ಲಾಧಿಕಾರಿ, ತಹಸೀಲ್ದಾರ್​ಗೆ ತಿಳುವಳಿಕೆ ಪತ್ರ ಕೊಡಲಾಗಿತ್ತು. ಅದಾಗ್ಯೂ ಕಾಂಬಳೆ ಅವರು ಉತಾರದಲ್ಲಿ ಹೆಸರು ಬದಲಾವಣೆ ಮಾಡಿದ್ದರು. ಈ ಮೂಲಕ ನ್ಯಾಯಾಲಯದ ಆದೇಶ ಪಾಲಿಸದೆ ಉದ್ದೇಶಪೂರ್ವಕ ಬೇಕಾಬಿಟ್ಟಿ ಕೆಲಸ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಪ್ರಕರಣದಲ್ಲಿ ಫಿರ್ಯಾದಿ ಪರ ನ್ಯಾಯವಾದಿ ಈಶ್ವರಚಂದ್ರ ಭೂತಿ ಹಾಗೂ ಬಸವರಾಜ ಭೂತಿ ವಾದ ಮಂಡಿಸಿದ್ದರು.
ಇಲ್ಲಿ ‘ಅಳುಮುಂಜಿ’ಯದ್ದೇ ಜೀವಮಾನದ ಸಾಧನೆ; ಕರೊನಾ ಸಂಕಷ್ಟದಲ್ಲೂ ಟ್ವಿಟರ್​ನಲ್ಲಿ ‘ಆನಂದಬಾಷ್ಪ’!

ಇನ್ನು ಸ್ಮಾರ್ಟ್​ಫೋನ್​ ಇಲ್ಲದೆ ವಾಟ್ಸ್​ಆ್ಯಪ್​ ಬಳಸಬಹುದು; ಬೀಟಾ ಯೂಸರ್ಸ್​ಗೆ ಹೊಸ ಆಪ್ಷನ್​!

ಕೋವಿಡ್​ನಿಂದ ಬಚಾವಾದರೂ ನೆಮ್ಮದಿ ಇಲ್ಲ; ಕಂಡುಬಂದಿದೆ ಮತ್ತೊಂದು ರೋಗ, ಬೋನ್​ ಡೆತ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
