|ಮೃತ್ಯುಂಜಯ ಕಪಗಲ್ಬೆಂಗಳೂರು
ಗೋಹತ್ಯೆ ನಿಷೇಧ ಜತೆಗೆ ಅವುಗಳ ರಕ್ಷಣೆ, ಪಾಲನೆಗಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿದ ಮಹತ್ವಾಕಾಂಕ್ಷಿ ‘ಪುಣ್ಯ ಕೋಟಿ ದತ್ತು ಯೋಜನೆ’ಗೆ ಜನರ ಸ್ಪಂದನೆ ನೀರಸವಾಗಿದೆ. ಯೋಜನೆ ಹೆಚ್ಚೆಚ್ಚು ಜನರನ್ನು ತಲುಪಲೆಂದು ಪ್ರತ್ಯೇಕ ಜಾಲತಾಣ ತೆರೆಯಲಾಗಿದೆ. ಪ್ರಚಾರದ ರಾಯಭಾರಿಯಾಗಿ ಹೆಸರಾಂತ ನಟ ಸುದೀಪ್ ನೇಮಕವಾಗಿದ್ದಾರೆ. ಆದರೂ ಪರಿಣಾಮಕಾರಿ ಅನುಷ್ಠಾನ ಸಾಧ್ಯವಾಗಿಲ್ಲ. ಕಳೆದ ಜು.28ಕ್ಕೆ ಚಾಲನೆ ನೀಡಲಾದ ಯೋಜನೆಯಡಿ ಆಸಕ್ತರು ವಾರ್ಷಿಕ 11 ಸಾವಿರ ರೂ. ಪಾವತಿಸಿ ಒಂದು ಹಸು ದತ್ತು ಪಡೆಯಲು ಅವಕಾಶವಿದೆ. ಗೋವುಗಳ ಪಾಲನೆ, ದೇಸಿ ತಳಿಗಳ ಸಂರಕ್ಷಣೆ ಹಾಗೂ ಗೋಶಾಲೆಗಳ ಆರ್ಥಿಕ ಬಲವರ್ಧನೆ, ವಯಸ್ಸಾದ ಹಸುಗಳ ನಿರ್ವಹಣೆ ಈ ಯೋಜನೆ ಮುಖ್ಯ ಉದ್ದೇಶವಾಗಿದ್ದು, ಹೇಳಿಕೊಳ್ಳುವಂತಹ ಪ್ರಗತಿ ಸಾಧಿಸಿಲ್ಲ.
ಮೀನಮೇಷ:ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿದ್ದೇವೆ. ಗೋಮಾತೆಗೆ ಪೂಜ್ಯನೀಯ ಸ್ಥಾನವಿದೆ. ದೇಸಿ ಗೋತಳಿಗಳ ರಕ್ಷಣೆಗೆ ಕಟಿಬದ್ಧವಾಗಿದೆ ಎಂದು ಆಡಳಿತ ಬಿಜೆಪಿ ಶಾಸಕರು, ನಾಯಕರು ದೊಡ್ಡ ಧ್ವನಿಯಲ್ಲಿ ಸಾರುತ್ತಾರೆ. ಆದರೆ ಪುಣ್ಯಕೋಟಿ ದತ್ತು ಯೋಜನೆಯಲ್ಲಿ ಪಾಲ್ಗೊಳ್ಳುವಿಕೆ, ಹಸು ದತ್ತು ಪಡೆಯಲು ಮೀನಮೇಷ ಎಣಿಸುತ್ತಿದ್ದು, ಒಟ್ಟು ಶೇ.1-2 ಶಾಸಕರು ಮಾತ್ರ ಸ್ಪಂದಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 11 ಹಸುಗಳು, ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ 30 ಹಸುಗಳನ್ನು ದತ್ತು ಪಡೆದಿದ್ದಾರೆ. ಗೋಶಾಲೆಗಳಲ್ಲಿನ ಹಸು ದತ್ತು ಪಡೆಯಬೇಕೆಂದು ಸ್ವತಃ ಸಿಎಂ ಬೊಮ್ಮಾಯಿ ಎಲ್ಲ ಶಾಸಕರಿಗೆ ಪತ್ರ ಬರೆದಿದ್ದು, ಬಹುತೇಕರು ಗಂಭೀರವಾಗಿ ಪರಿಗಣಿಸಿಲ್ಲ. ಈ ವಿಷಯದಲ್ಲಿ ರಾಜ್ಯ ಸರ್ಕಾರಿ ನೌಕರರು ಮೇಲ್ಪಂಕ್ತಿಯಾಗಿದ್ದಾರೆ. ಯೋಜನೆಗೆ 26 ಕೋಟಿ ರೂ.ಗಳ ದೇಣಿಗೆಯನ್ನು ಸರ್ಕಾರಿ ನೌಕರರ ಸಂಘ ಅರ್ಪಿಸಿ ಗಮನಸೆಳೆದಿದೆ. ಗೋವುಗಳನ್ನು ಗೋಮಾತೆ ಎಂದು ಪೂಜಿಸುವ ಜನರು ಅಸಂಖ್ಯಾತ. ಗೋವುಗಳ ಸೇವೆ ಪುಣ್ಯದ ಕೆಲಸವೆಂಬ ಭಾವನೆಯಿರುವ ಕಾರಣ ಯಶಸ್ವಿಯಾಗಲಿದೆ ಎಂಬ ಸರ್ಕಾರದ ನಿರೀಕ್ಷೆ ಸದ್ಯಕ್ಕೆ ಹುಸಿಯಾಗಿದೆ.
ಅವಧಿ ಮುಕ್ತಾಯ:ಪಶು ಸಂಗೋಪನಾ ಇಲಾಖೆ ಮಾಹಿತಿ ಪ್ರಕಾರ ಯೋಜನೆ ಜಾರಿಯಾದಾಗಿನಿಂದ ಈವರೆಗೆ 245 ಹಸುಗಳ ದತ್ತು ಸ್ವೀಕಾರವಾಗಿದ್ದು, ಈ ಪೈಕಿ 55 ಗೋವುಗಳ ದತ್ತು ಅವಧಿ ಮುಗಿದಿದೆ. ದಾನಿಗಳ ಹೊರೆಯಾಗದಿರಲೆಂದು ಮೂರು, ಆರು ತಿಂಗಳು ಹಾಗೂ ವರ್ಷದ ಅವಧಿಗೆ ದತ್ತು ಪಡೆಯುವ ಅವಕಾಶ ನೀಡಿದ್ದು, ವಾರ್ಷಿಕ ದತ್ತು ಪಡೆದವರ ಸಂಖ್ಯೆ ವಿರಳ. ರಾಜ್ಯದಲ್ಲಿ 188 ನೋಂದಾಯಿತ ಗೋಶಾಲೆಗಳಲ್ಲಿ 26,605 ಗೋವುಗಳ ನೋಂದಣಿಯಾಗಿದ್ದು, 1,717 ದಾನಿಗಳಿಂದ 30 ಲಕ್ಷ ರೂ. ದೇಣಿಗೆ ಸಂಗ್ರಹವಾಗಿದೆ.
ಗರಿಷ್ಠ ಐದು ವರ್ಷಗಳ ಅವಧಿಗೆ ಹಸು ದತ್ತು ಪಡೆಯಬಹುದಾಗಿದೆ. ಪುಣ್ಯಕೋಟಿ ಯೋಜನೆಯಡಿ ದೇಣಿಗೆ ನೀಡಿದವರಿಗೆ ತೆರಿಗೆ ವಿನಾಯಿತಿ ಸೌಲಭ್ಯವಿದೆ. ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬಂದರೆ ಯೋಜನೆಗೆ ಯಶಸ್ಸು ನಿಶ್ಚಿತವೆಂದು ಇಲಾಖೆ ಮೂಲಗಳು ವಿಶ್ವಾಸ ವ್ಯಕ್ತಪಡಿಸಿವೆ.
ಭೂಸ್ವಾಧೀನ ಚಾಲ್ತಿ:ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ಗೋಶಾಲೆ ಜತೆಗೆ ಹೆಚ್ಚುವರಿಯಾಗಿ 70 ಹೊಸ ಗೋಶಾಲೆಗಳನ್ನು ತೆರೆಯಲಾಗುವುದು ಎಂದು ಸರ್ಕಾರ ಕಳೆದ ಬಜೆಟ್​ನಲ್ಲಿ ಘೋಷಿಸಿತ್ತು. ಮತ್ತೊಂದು ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿದ್ದು, 70 ಹೆಚ್ಚುವರಿ ಗೋಶಾಲೆ ಕಟ್ಟಲು ಬೇಕಾದ ಭೂಸ್ವಾಧೀನ ಪ್ರಕ್ರಿಯೆಯೇ ಇನ್ನೂ ಚಾಲ್ತಿಯಲ್ಲಿದೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿ ಎರಡು ವರ್ಷಗಳು ಕಳೆದಿವೆ. ಜಿಲ್ಲೆಗೆ ತಲಾ ಒಂದರಂತೆ ಘೋಷಿಸಿದ್ದ 30 ಗೋಶಾಲೆಗಳ ಪೈಕಿ 11 ಮಾತ್ರ ಕಾರ್ಯಾರಂಭಿಸಿದ್ದು, 348 ಗೋವುಗಳಿಗೆ ಆಸರೆ ನೀಡಲಾಗಿದೆ. ಹೊಸದಾಗಿ ನಿರ್ವಿುಸುತ್ತಿರುವ ಗೋಶಾಲೆಗಳ ಪೈಕಿ 11 ಪೂರ್ಣಗೊಂಡಿದ್ದು, ಎಂಟು ಗೋಶಾಲೆಗಳ ಕಾಮಗಾರಿ ಬಹುತೇಕ ಮುಗಿಯುವ ಹಂತಕ್ಕೆ ಬಂದಿದೆ.
ಒಟ್ಟು 43 ಗೋಶಾಲೆಗಳ ನಿರ್ವಣಕ್ಕೆ ಬೇಕಾದ ಜಮೀನು ಮಂಜೂರಾಗಿ ಇಲಾಖೆಗೆ ಹಸ್ತಾಂತರಿಸಿದ್ದು, 18ಕ್ಕೆ ಜಮೀನು ಗುರುತಿಸಿದ್ದರೆ, ಒಂಭತ್ತಕ್ಕೆ ಗುರುತಿಸಲಾಗುತ್ತಿದೆ. 37 ಗೋಶಾಲೆ ನಿರ್ವಣಕ್ಕಾಗಿ ತಲಾ 50 ಲಕ್ಷ ರೂ.ನಂತೆ 18.50 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಮದುವೆ ದಿನವೇ ಫಿಸಿಯೋಥೆರಪಿ ಎಕ್ಸಾಂ; ವಿವಾಹದ ದಿರಿಸಿನಲ್ಲೇ ಪರೀಕ್ಷೆಗೆ ಬಂದ ವಧು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
