ಬೆಂಗಳೂರು:ಹಾಸ್ಯ ಕಲಾವಿದೆ ಇಂದುಶ್ರೀ ರವೀಂದ್ರ ತಾಯಿ ಆಗುತ್ತಿದ್ದಾರೆ. ಸೀಮಂತ ಕಾರ್ಯಕ್ರಮ ನಡೆದಿದ್ದು, ಈ ಸಂಭ್ರಮದ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.
ಮಾತನಾಡೋ ಗೊಂಬೆಗಳ ಜತೆಗೆ ಇಡಿ ಜಗತ್ತನ್ನೇ ಸುತ್ತಿರುವ ಇಂದುಶ್ರೀ ರವೀಂದ್ರ, ತಮ್ಮ ವಿಶಿಷ್ಠ ಕಲೆಗೆ ವಿಪರೀತ ಫೇಮಸ್. ಭಾರತದ ಏಕೈಕ ಮಹಿಳಾ ವೆಂಟ್ರಿಲೋಕ್ವಿಸ್ಟ್(ಧ್ವನಿಮಾಯೆ)  ಇಂದುಶ್ರೀ ಸೀಮಂತದಲ್ಲಿ ಕುಟುಂಬ ಸದಸ್ಯರಷ್ಟೇ ಮಾತ್ರವಲ್ಲದೆ ಈ  ಸಂಭ್ರಮದಲ್ಲಿದ್ದವರು ಅವರ ಕೋಕಿಲ ಅಜ್ಜಿ ಹಾಗೂ ತಾತ ಗೊಂಬೆಗಳು.
A post shared by Indushree Raveendra (@indushreeraveendra)

ಇಂದುಶ್ರೀ ತಮ್ಮ ಸೀಮಂತದಲ್ಲೂ ಧ್ವನಿಮಾಯೆಯ ಹಾಸ್ಯ ಮೆರೆದಿದ್ದು, ಕೋಕಿಲ ಅಜ್ಜಿ ಮತ್ತು ತಾತ ಗೊಂಬೆಗಳು ಗರ್ಭಿಣಿ ಇಂದುವನ್ನು ಮಜವಾಗಿ ಮಾತನಾಡಿಸಿವೆ.
ತಾತ ಇಂದು ಬಳಿ ಅಚ್ಚರಿಯ ಪ್ರಶ್ನೆಯೊಂದನ್ನು ಕೇಳಿದ್ದಾರೆ, ‘ಏನಮ್ಮಾ ಮಗು ಹುಟ್ಟಿದ್ಮೇಲೆ ತಿರ್ಗಾ ಹೊಟ್ಟೆಯೊಳಗೆ ಹಾಕ್ಕೊಂಡು ಹೋಗಲ್ವಾ ನೀನು’ ಎಂದು ತಮ್ಮ ಡೌಟ್ ಬಿಚ್ಚಿಟ್ಟಿದ್ದಾರೆ. ‘ಇದೇನ್ ತಾತ, ಯಾರ್ ತಾನೇ ಹುಟ್ಟಿದ ಮಗುನ್ನ ವಾಪಸ್ ಹೊಟ್ಟೆಗೆ ಹಾಕಿಕೊಳ್ತಾರೆ’ ಅಂದಿದ್ದಕ್ಕೆ ಘಾಟಿ ತಾತ, ‘ಪ್ರೋಗ್ರಾಂ ಮುಗುದ್ಮೇಲೆ ಎಲ್ಲ ಗೊಂಬೆಗಳನ್ನು ಡಬ್ಬದಲ್ಲಿ ಹಾಕಿಕೊಂಡು ಹೋಗೋ ತರಾ ಮಗುನ್ನೂ ಹಾಕಿಕೊಳ್ತ್ಯೇನೋ ಅನ್ಕೊಂಡೆ’ ಅಂತಾರೆ. ಈ ವಿಡಿಯೋ ಸಖತ್‌ ವೈರಲ್‌ ಆಗಿದೆ.
ತಾತನ ಈ ಪ್ರಶ್ನೆ ಸಮಂಜಸವಾಗೇ ಇದೆ ಎಂದು ಕೆಲ ಅಭಿಮಾನಿಗಳು ಇಂದುವಿನ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
