ಬೆಂಗಳೂರು:ರೋಗಿಗಳಿಗೆ ಗುಣಮಟ್ಟ ಚಿಕಿತ್ಸೆ ಕಲ್ಪಿಸುವ ನಿಟ್ಟಿನಲ್ಲಿ ವೈದ್ಯಕಿಯ ಶಿಕ್ಷಿಣ ನಿರ್ದೇಶನಾಲಯ, ರಾಜ್ಯದ ವಿವಿಧ ವೈದ್ಯಕಿಯ ಕಾಲೇಜು,ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಸರಬರಾಜು ಮಾಡಲು 176 ಕೋಟಿ ರೂ.ವೆಚ್ಚದಲ್ಲಿ ಸುಸಜ್ಜಿತ 114 ಮಾಡ್ಯೂಲರ್​ ಆಪರೇಷನ್​ ಥಿಯೇಟರ್​ (ಒಟಿ) ಖರೀದಿಗೆ ಮುಂದಾಗಿದೆ.
ನಿರ್ದೇಶನಾಲಯ ವ್ಯಾಪ್ತಿಯ ವೈದ್ಯಕೀಯ ಕಾಲೇಜು, ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಪ್ರತಿ ನಿತ್ಯ ಸಾವಿರಾರು ರೋಗಿಗಳಿಗೆ ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಚಿಕಿತ್ಸಾ ಸೌಲಭ್ಯ ಆಧುನಿಕರಣಗೊಳಿಸಲು ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ 114 ಮಾಡ್ಯೂಲರ್​ ಆಪರೇಷನ್​ ಥಿಯೇಟರ್​ ಸ್ಥಾಪಿಸಿ ಶಸ್ತ್ರ ಚಿಕಿತ್ಸಾ ಕೊಠಡಿ ಮೇಲ್ದರ್ಜೆಗೇರಿಸಲಾಗುವುದು.ಶಸ್ತ್ರ ಚಿಕಿತ್ಸಾ ಕೊಠಡಿಗಳಲ್ಲಿ ಸೋಂಕು ನಿಯಂತ್ರಣ, ರೋಗಿಗಳ ಸುರಕ್ಷತೆ ಸೇರಿ ಇತರೆ ಸುಜ್ಜಿತ ಸೌಲಭ್ಯ ಒಳಗೊಂಡಿದೆ. ಇದರಿಂದಾಗಿ ಬಡ, ಮಧ್ಯಮ ವರ್ಗದ ರೋಗಿಗಳಿಗೆ ಅನುಕೂಲವಾಗಲಿದೆ. ಉಪಕರಣಗಳ ಖರೀದಿಗೆ ಆಡಳಿತಾತ್ಮಕ ಅನುಮೋದನೆ ನೀಡುವಂತೆ ನಿರ್ದೇಶನಾಲಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಪ್ರಸ್ತಾವನೆ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿದ ಸರ್ಕಾರ, ಮಾಡ್ಯೂಲರ್​ ಆಪರೇಷನ್​ ಥಿಯೇಟರ್​ ಖರೀದಿಗೆ 176 ಕೋಟಿ ರೂ.ಮೊತ್ತದಲ್ಲಿ ಶೇ.60 ಸರ್ಕಾರದಿಂದ ಹಾಗೂ ಶೇ.40 ಸ್ವಾಯತ್ತ ಸಂಸ್ಥೆಗಳಲ್ಲಿ ಲಭ್ಯವಿರುವ ಆಂತರಿಕ ಸಂಪನ್ಮೂಲಗಳಿಂದ ಭರಿಸಿ ಯೋಜನೆ ಅನುಷ್ಠಾನಗೊಳಿಸಬೇಕು. ಕರ್ನಾಟಕ ಸಾರ್ವಜನಿಕರ ಸಂಗ್ರಹಣೆಗಳಲ್ಲಿ ಪಾರದರ್ಶಕ (ಕೆಟಿಪಿಪಿ) ಕಾಯ್ದೆ ಅನ್ವಯ ಟೆಂಡರ್​ ಕರೆದು ಉಪಕರಣ ಖರೀದಿಸಬೇಕು. ಹೆಚ್ಚುವರಿ ಅನುದಾನಕ್ಕಾಗಿ ಸರ್ಕಾರಕ್ಕೆ ಯಾವುದೇ ಪ್ರಸ್ತಾವನೆ ಕಳುಹಿಸಬಾರದು ಎಂದು ಸರ್ಕಾರ, ನಿರ್ದೇಶನಾಲಯಕ್ಕೆ ಕೆಲ ಷರತ್ತು ವಿಧಿಸಿದೆ.
ವರ ನಟನಿಗೆ ಕನ್ನಡಿಗರ ಹೃದಯದಲ್ಲಿ ಶಾಶ್ವತ ಸ್ಥಾನ
ನಿರ್ವಹಣೆಗೆ ಬೇಕಿದೆ ಸಿಬ್ಬಂದಿಆಸ್ಪತ್ರೆಗಳಿಗೆ ಒಟಿ ಸೌಲಭ್ಯ ನೀಡಬಹುದು. ಆದರೆ, ಇವುಗಳ ನಿರ್ವಹಣೆಗೆ ಅಗತ್ಯ ಮಾನವ ಸಂಪನ್ಮೂಲ ಪೂರೈಸುವುದೇ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. 114 ಒಟಿಗಳ ನಿರ್ವಹಣೆಗೆ ನೂರಾರು ಸಿಬ್ಬಂದಿಗೆ ಅಗತ್ಯವಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಸೇರಿ ಇತರೆ ಸಿಬ್ಬಂದಿ ಕೊರತೆ ಇದೆ. ಇದರಿಂದಾಗಿ ಸಕಾಲದಲ್ಲಿ ಚಿಕಿತ್ಸೆ ಸಿಗದೆ ರೋಗಿಗಳು ಪರದಾಡುವಂತಾಗಿದೆ. ಇನ್ನೊಂದೆಡೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡ ಸಿಬ್ಬಂದಿಗೆ ಸಂಬಳ ಸಿಗುತ್ತಿಲ್ಲ. 30 ಜಿಲ್ಲೆಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಕಿಯ ವೃತ್ತಿಪರರ ಕೊರತೆ ಉಂಟಾಗಿದೆ. ಹೀಗಿರುವಾಗ, ಮಾಡ್ಯೂಲರ್​ ಒಟಿ ನಿರ್ಮಾಣವಾದರೆ ಎಷ್ಟರ ಮಟ್ಟಿಗೆ ರೋಗಿಗಳಿಗೆ ಇದರ ಸೌಲಭ್ಯ ಸಿಗುತ್ತದೆ ಎಂಬುದರ ಬಗ್ಗೆ ಸಾರ್ವಜನಿಕರ ವಲಯದಲ್ಲಿ ಚರ್ಚೆ ಸಹ ನಡೆಯುತ್ತಿದೆ.
ಯಾವೆಲ್ಲಾ ಆಸ್ಪತ್ರೆಗೆ ಸರಬರಾಜುಹಾಸನ, ಯಾದಗಿರಿ, ಹುಬ್ಬಳ್ಳಿ, ಹಾವೇರಿ, ಬೀದರ್​, ಕೊಪ್ಪಳ, ಕಲಬುರಗಿ, ಕಾರವಾರ, ಮಂಡ್ಯ, ಬೆಳಗಾವಿ, ಮೈಸೂರು ವೈದ್ಯಕೀಯ ಕಾಲೇಜು, ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ, ರಾಜೀವ್​ಗಾಂಧಿ ಎದೆರೋಗ ಆಸ್ಪತ್ರೆ, ಕಿದ್ವಾಯಿ ಕ್ಯಾನ್ಸರ್​ ಆಸ್ಪತ್ರೆ, ಸಂಜಯ ಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆ, ಬೆಂಗಳೂರು ಮೆಡಿಕಲ್​ ಕಾಲೇಜು, ನೆಪೋ ಯುರಾಲಜಿ ಸಂಸ್ಥೆ, ಅಟಲ್​ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜುಗಳಿಗೆ ಮಾಡ್ಯೂಲರ್​ ಆಪರೇಷನ್​ ಥಿಯೇಟರ್​ ಸರಬರಾಜು ಮಾಡಲಾಗುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + thirteen =
Remember me
