ಪುತ್ತೂರು:ಇಲ್ಲಿನ ಹೊರವಲಯದ ಕೊಡಿಪ್ಪಾಡಿಯ ವಿಶ್ರಾಂತಿಗೃಹದಲ್ಲಿ ಸ್ನೇಹಿತ ಏರ್ಪಡಿಸಿದ ಬೀಳ್ಕೊಡುಗೆ ಸಮಾರಂಭದ ಔತಣಕೂಟದಲ್ಲಿ ಪಾಲ್ಗೊಂಡ ಜಾರ್ಖಂಡ್ ಮೂಲದ ಯುವತಿ ಮೇಲೆ ಅತ್ಯಾಚಾರ ಎಸಗಿರುವ ಕುರಿತು ಪ್ರಕರಣ ದಾಖಲಾಗಿದ್ದು, ಆರೋಪಿ ಬ್ರಾಯನ್ ರಿಚರ್ಡ್ ಅಮನ್ನಾ ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ.
ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಅಂಡಮಾನ್‌ಗೆ ವರ್ಗಾವಣೆ ಆಗಿರುವ ಹಿನ್ನೆಲೆ ಅವರು ತಮ್ಮ ಸ್ನೇಹಿತರಿಗಾಗಿ ಫೆ.5ರಂದು ರಾತ್ರಿ ಕೊಡಿಪ್ಪಾಡಿಯಲ್ಲಿರುವ ಖಾಸಗಿ ಒಡೆತನದ ವಿಶ್ರಾಂತಿಗೃಹದಲ್ಲಿ ಔತಣಕೂಟ ಏರ್ಪಡಿಸಿದ್ದರು. ಇದರಲ್ಲಿ ನಾನಾ ಭಾಗದ 17ರಿಂದ 20ರಷ್ಟು ಮಂದಿ ಪಾಲ್ಗೊಂಡಿದ್ದರು.
ಔತಣಕೂಟ ಮುಗಿದ ಬಳಿಕ ಹೆಚ್ಚಿನವರೆಲ್ಲ ತೆರಳಿದ್ದು, ತಡರಾತ್ರಿಯಾದ ಕಾರಣ ಯುವತಿ ಸಹಿತ ನಾಲ್ವರು ಅದೇ ಮನೆಯಲ್ಲಿ ಉಳಿದುಕೊಂಡಿದ್ದರು. ಯುವತಿ ಕೋಣೆಯೊಂದರಲ್ಲಿ ಮಲಗಿದ್ದು, ಮುಂಜಾನೆ 5 ಗಂಟೆ ಸುಮಾರಿಗೆ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಪುತ್ತೂರು ಮಹಿಳಾ ಠಾಣೆಯಲ್ಲಿ ಸಂತ್ರಸ್ತ ಯುವತಿ ದೂರು ನೀಡಿದ್ದಾರೆ. ಐಪಿಸಿ ಕಲಂ 328, 376ರಂತೆ ದೂರು ದಾಖಲಾಗಿದ್ದು, ಆರೋಪಿ ಬ್ರಾಯನ್ ರಿಚರ್ಡ್ ಅಮನ್ನಾ ಎಂಬಾತನನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ರಾಜಧಾನಿಯ ಸಿಎಂ ಮಗಳಿಗೇ ಪಂಗನಾಮ! ಆನ್​ಲೈನ್​ ಸ್ಕ್ಯಾಮ್​ಗೆ ಒಳಗಾದ ಹರ್ಷಿತಾ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fourteen + 12 =
Remember me
