|ಕೀರ್ತಿನಾರಾಯಣ ಸಿ.ಬೆಂಗಳೂರು
ಟೋಲ್ ಪಾವತಿಸಲು ಸರತಿಯಲ್ಲಿ ನಿಲ್ಲದೆ ಸರಾಗ ಸಂಚಾರಕ್ಕಾಗಿ ರಾಷ್ಟ್ರೀಯ ಹೆದ್ದಾರಿಗಳ ಪ್ಲಾಜಾಗಳಲ್ಲಿ ಟೋಲ್ ಸಂಗ್ರಹಿಸಲು ವಾಹನಗಳಿಗೆ ಫಾಸ್ಟಾ್ಯಗ್ ಕಡ್ಡಾಯಗೊಳಿಸಲಾಗಿದೆ. ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವಾಲಯದ ಅಸಮರ್ಪಕ ಸೇವೆ ಮತ್ತು ಕೆಲ ವಾಹನ ಮಾಲೀಕರ ಎಡವಟ್ಟಿನಿಂದಾಗಿ ‘ಕ್ಯೂ’ನಿಲ್ಲುವ ಪರಿಸ್ಥಿತಿ ಈಗಲೂ ಮುಂದುವರಿದಿದೆ. ಈ ಮಧ್ಯೆ, ವಾಹನ ಮಾಲೀಕರಿಂದ ಶುಲ್ಕ ಸಂಗ್ರಹಿಸುವ ಖಾಸಗಿ ಕಂಪನಿಗಳು ರಸ್ತೆಗಳ ಗುಣಮಟ್ಟ ಕಾಪಾಡುವಲ್ಲಿ ವಿಫಲವಾಗುತ್ತಿದ್ದು, ಅಪಘಾತಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗುತ್ತಿರುವ ಅಂಶ ಬೆಳಕಿಗೆ ಬಂದಿದೆ.
2021ರ ಫೆ.15ರ ಮಧ್ಯರಾತ್ರಿಯಿಂದ ಕ್ಯಾಶ್​ಲೆಸ್ ವ್ಯವಸ್ಥೆಯಾಗಿ ಫಾಸ್ಟಾ್ಯಗ್ ನಿಯಮ ದೇಶಾದ್ಯಂತ ಜಾರಿಗೆ ಬಂದಿದೆ. ಈ ವ್ಯವಸ್ಥೆಯಲ್ಲಿ ಬರೀ 47 ಸೆಕೆಂಡ್​ಗಳಲ್ಲಿ ಪ್ರತಿ ವಾಹನ ಟೋಲ್ ಪ್ಲಾಜಾ ದಾಟಿ ಹೋಗಲಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ, ವಾಹನ ಮಾಲೀಕರು-ಟೋಲ್ ಸಿಬ್ಬಂದಿ ನಡುವಿನ ವಾಗ್ವಾದ, ಇಂಟರ್​ನೆಟ್ ನೆಟ್​ವರ್ಕ್ ಸಮಸ್ಯೆ ಹಾಗೂ ರೀಡಿಂಗ್​ನಲ್ಲಿನ ತಾಂತ್ರಿಕ ದೋಷದಿಂದಾಗಿ ವಾಹನಗಳ ದಟ್ಟಣೆಯಲ್ಲೇ ಮುಂದೆ ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ.
ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ (ಇಟಿಸಿ) ಲೇನ್ ಅಳವಡಿಕೆ ನಂತರ ಗಂಟೆಗೆ 260ಕ್ಕೂ ಹೆಚ್ಚು ವಾಹನಗಳು ಟೋಲ್ ದಾಟುತ್ತಿವೆ. ಫಾಸ್ಟಾ್ಯಗ್ ವ್ಯವಸ್ಥೆ ಇಲ್ಲದೆ ಸಿಬ್ಬಂದಿ ಬಳಸಿ ಶುಲ್ಕ ಪಾವತಿಸಿಕೊಳ್ಳುವಾಗ ಗಂಟೆಗೆ 112 ವಾಹನಗಳು ಮಾತ್ರ ಮುಂದೆ ಹೋಗುತ್ತಿದ್ದವು. ಫಾಸ್ಟಾ್ಯಗ್ ಜಾರಿ ನಂತರ ಹೆಚ್ಚುವರಿಯಾಗಿ 148 ವಾಹನಗಳು ಟೋಲ್ ದಾಟುತ್ತಿದ್ದು, ಶುಲ್ಕ ಸಂಗ್ರಹ ಅವಧಿ ಶೇ.56ರಷ್ಟು ಇಳಿಕೆಯಾಗಿದೆ ಎಂದು ಹೇಳಿಕೊಂಡಿರುವ ಹೆದ್ದಾರಿ ಸಚಿವಾಲಯವೇ ಈಗ ವಾಹನಗಳು ಸಾಲುಗಟ್ಟುತ್ತಿರುವುದನ್ನು ಒಪ್ಪಿಕೊಂಡಿದೆ.
ವಾಹನ ದಟ್ಟಣೆ ಹಾಗೂ ಸಂಚಾರ ವಿಳಂಬ ತಡೆಯುವ ಉದ್ದೇಶದಿಂದ ಹೆಚ್ಚು ವಾಹನ ದಟ್ಟಣೆ ಇರುವ ಟೋಲ್ ಪ್ಲಾಜಾಗಳೂ ಸೇರಿ ಎಲ್ಲ ಟೋಲ್ ಪ್ಲಾಜಾಗಳ ಕಾರ್ಯನಿರ್ವಹಣೆಯ ಮೇಲೆ ಲೈವ್ ವಿಡಿಯೋ ಮೂಲಕ ನಿರಂತರವಾಗಿ ನಿಗಾ ವಹಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಪ್ರತ್ಯೇಕ ಕಮಾಂಡ್ ಸೆಂಟರ್ ಮತ್ತು ಕಂಟ್ರೋಲ್ ರೂಂ ಸ್ಥಾಪನೆ ಮಾಡಲಾಗಿದೆ ಎಂದು ಹೆದ್ದಾರಿ ಸಚಿವಾಲಯ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.
ಆದರೆ ವಾಹನದ ಮುಂಭಾಗದ ಗ್ಲಾಸ್​ನ ಮೇಲೆ ಅಂಟಿಸಿರುವ ಫಾಸ್ಟಾ್ಯಗ್ ಸ್ಟಿಕ್ಕರ್​ನ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ (ಆರ್​ಎಫ್​ಐಡಿ) ಅನ್ನು ಫಾಸ್ಟಾ್ಯಗ್ ಲೇನ್​ನಲ್ಲಿ ಅಳವಡಿಸಿರುವ ಸೆನ್ಸರ್​ಗಳು ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಸ್ವಯಂಚಾಲಿತವಾಗಿ ಗ್ರಹಿಸುತ್ತಿಲ್ಲ. ಆಗ ಟೋಲ್ ಸಿಬ್ಬಂದಿ ಸೆನ್ಸರ್ ಯಂತ್ರವನ್ನು ಹಿಡಿದು ಸ್ಕಾ್ಯನ್ ಮಾಡಿದರೂ ರೀಡ್ ಮಾಡಲು ಒಂದೆರಡು ನಿಮಿಷ ತಗುಲುತ್ತಿದೆ.
ಹದಗೆಟ್ಟ ರಸ್ತೆಗೂ ಟೋಲ್:ರಸ್ತೆ ನಿರ್ವಣದ ವೇಳೆ ಹಾಕುವ ಫೈನಲ್ ಕೋಟಿಂಗ್ 2 ವರ್ಷಗಳ ಬಳಕೆಯ ನಂತರ ಹಾಳಾಗುತ್ತದೆ. ಮೇಲ್ಸೇತುವೆ ಹಾಗೂ ಕೆಳಸೇತುವೆ ಮುಕ್ತ್ತಾಯವಾಗುವ ಸ್ಥಳದಲ್ಲಿ ವಾಹನ ಜಂಪ್ ಆಗುವುದರಿಂದ ವಾಹನ ಅಪಘಾತಗಳಾಗುತ್ತಿವೆ. ಆದ್ದರಿಂದ, ಆಗಾಗ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಬಹುತೇಕ ಹೆದ್ದಾರಿಗಳಲ್ಲಿ ರಸ್ತೆ ಹಾಳಾಗಿದ್ದು, ಸರಿಪಡಿಸುವ ಕೆಲಸವನ್ನು ಕೈಗೆತ್ತಿಕೊಳ್ಳಬೇಕಿದೆ.
ಕೆಲವೇ ಸೆಕೆಂಡ್​ಗಳಲ್ಲಿ ವಾಹನಗಳು ಟೋಲ್ ದಾಟುತ್ತಿರುವುದು ಸ್ವಾಗತಾರ್ಹ. ಆದಾಗ್ಯೂ ಕೆಲ ಸೌಕರ್ಯಗಳ ಕೊರತೆ ಕಾಣುತ್ತಿದೆ. 2017ರಲ್ಲಿನ ಕೇಂದ್ರ ಸರ್ಕಾರದ ಭರವಸೆಯಂತೆ ಸ್ವಂತ ಬಳಕೆ ಹಾಗೂ 1 ಟನ್ ಸಾಮರ್ಥ್ಯದ ವಾಣಿಜ್ಯ ಬಳಕೆಯ ಸಣ್ಣ ವಾಹನಗಳಿಗೆ ಉಚಿತ ಪ್ರವೇಶಕ್ಕೆ ಅವಕಾಶ ಕೊಡ ಬೇಕು. ರಸ್ತೆ ಗುಣಮಟ್ಟ ಹೆಚ್ಚಿಸುವ ಜತೆಗೆ ಅವೈಜ್ಞಾನಿಕ ವಾಗಿ ಬ್ಯಾರಿಕೇಡ್ ಅಳವಡಿಸುವುದನ್ನು ನಿಲ್ಲಿಸಬೇಕು.
|ಕೆ.ರಾಧಾಕೃಷ್ಣ ಹೊಳ್ಳರಾಜ್ಯ ಟ್ರಾವೆಲ್ಸ್ ಆಪರೇಟರ್ ಸಂಘದ ಅಧ್ಯಕ್ಷ
ಟೋಲ್ ಸಿಬ್ಬಂದಿ ಜತೆ ವಾಗ್ವಾದ:ಫಾಸ್ಟ್ಯಾಗ್​ ಖಾತೆಯಲ್ಲಿ ಕಡಿಮೆ ಹಣವಿದ್ದರೆ ಅಥವಾ ಹಣವೇ ಇಲ್ಲದಿದ್ದರೆ ಡಬಲ್ ಶುಲ್ಕ ಪಾವತಿಸಬೇಕಾಗುತ್ತದೆ. ಆಗ ಟೋಲ್ ಸಿಬ್ಬಂದಿ ಜತೆ ವಾಹನ ಮಾಲೀಕರು ಜಗಳಕ್ಕಿಳಿಯುವುದರಿಂದ ಹಿಂದಿರುವ ವಾಹನಗಳಿಗೆ ತೊಂದರೆಯಾಗುತ್ತದೆ. ಬಹುತೇಕ ಟೋಲ್​ಗಳಲ್ಲಿ ಈ ಸಮಸ್ಯೆಯಾಗುತ್ತಿದೆ. ಅಲ್ಲದೆ, ಖಾತೆಯಲ್ಲಿ ಹಣವಿದ್ದರೂ ರೀಡ್ ಆಗದಿದ್ದಾಗ ಕ್ಯಾಶ್ ಪಾವತಿಸುವಂತೆ ಟೋಲ್ ಸಿಬ್ಬಂದಿ ಒತ್ತಾಯಿಸುವುದರಿಂದ ವಾಗ್ವಾದ ನಡೆದು ವಾಹನಗಳ ಕ್ಯೂ ಹೆಚ್ಚುತ್ತದೆ.
ಶುಲ್ಕ ವಸೂಲಿ ಬೇಡ:ಟೋಲ್ ಪ್ಲಾಜಾ ನಿರ್ವಣಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಪ್ರಗತಿಯಲ್ಲಿದ್ದು, ಇನ್ನೂ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೆ ಟೋಲ್ ಶುಲ್ಕ ವಸೂಲಿ ಬಗ್ಗೆ ಮರುಯೋಜನೆ ರೂಪಿಸಬೇಕು. ಈಗಾಗಲೇ ಸ್ವಾಧೀನಪಡಿಸಿಕೊಂಡಿರುವ ಭೂಮಿಯ ಸದ್ಬಳಕೆಯತ್ತ ಗಮನ ಕೊಡಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ.
ಗುತ್ತಿಗೆ ಅವಧಿ ಮುಗಿದರೂ ವಾಹನಗಳಿಂದ ಶುಲ್ಕ ವಸೂಲಿ:ದೇಶಾದ್ಯಂತ ಟೋಲ್ ಗುತ್ತಿಗೆ ಅವಧಿ ಮುಗಿದಿದ್ದರೂ ಹಲವು ಟೋಲ್ ಪ್ಲಾಜಾಗಳಲ್ಲಿ ಶುಲ್ಕ ವಸೂಲಿ ಪ್ರಕ್ರಿಯೆ ಮುಂದುವರಿಸಲಾಗಿದೆ. ಕರ್ನಾಟಕದಲ್ಲಿ ನೆಲಮಂಗಲ-ತುಮಕೂರು 32.5 ಕಿ.ಮೀ ರಸ್ತೆಯ ಟೋಲ್ ಗುತ್ತಿಗೆ ಅವಧಿ 2021 ಜೂ.26ರಂದೇ ಮುಗಿದಿದೆ. ಹೀಗಿದ್ದರೂ ಪ್ಲಾಜಾ ಸ್ಥಗಿತಗೊಳಿಸದೆ ಹಣ ಸಂಗ್ರಹಿಸಲಾಗುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಧಾರವಾಡ ಸಮೀಪದ ಒಂದು ರಸ್ತೆಯ ಟೋಲ್ ಗುತ್ತಿಗೆ ಅವಧಿ ಮುಕ್ತಾಯವಾಗಿದ್ದರೂ ಶುಲ್ಕ ಸಂಗ್ರಹಿಸಲಾಗುತ್ತಿದೆ ಎಂದು ಗೊತ್ತಾಗಿದೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + eleven =
Remember me
