ಬೆಂಗಳೂರು:ವೃತ್ತಿಪರ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯಲ್ಲಿ ಮುಂಚೂಣಿಯಲ್ಲಿರುವ ಎಕ್ಸೆಲ್ ಅಕಾಡೆಮಿಕ್ಸ್ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುತ್ತಿದೆ. ನೀಟ್, ಸಿಇಟಿ, ಐಐಟಿ ತರಬೇತಿಯಲ್ಲಿ ಪ್ರತಿಷ್ಠಿತ ಕೋಚಿಂಗ್ ಸೆಂಟರ್ ಎಂಬ ಹೆಗ್ಗಳಿಕೆ ಹೊಂದಿದೆ.
ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಅತ್ಯುನ್ನತ ರ್ಯಾಂಕ್ ಗಳಿಸುತ್ತಿದ್ದಾರೆ. ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆ ಮತ್ತು ಆಧುನಿಕ ಪ್ರಪಂಚದ ಬೇಡಿಕೆಗೆ ಅನುಗುಣವಾಗಿ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಂಡು ಉತ್ತಮವಾದ ಪಠ್ಯ ಹಾಗೂ ನುರಿತ ಉಪನ್ಯಾಸಕರ ಸಹಾಯದಿಂದ ಈ ಸಂಸ್ಥೆ ವೃತ್ತಿಪರ ಪ್ರವೇಶ ಪರೀಕ್ಷೆಗಳಲ್ಲಿ ಹೊಸ ಕ್ರಾಂತಿಯನ್ನು ಉಂಟು ಮಾಡಿದೆ.
ಉನ್ನತ ಸಾಧನೆಯ ಮೂಲಕ ಮೆಡಿಕಲ್, ಇಂಜಿನಿಯರಿಂಗ್ ಮತ್ತು ಐಐಟಿಗಳಲ್ಲಿ ಪ್ರವೇಶ ಪಡೆಯುವ ಬಡ ವಿದ್ಯಾರ್ಥಿಗಳ ಕನಸನ್ನು ಎಕ್ಸ್ಸೆಲ್ ಅಕಾಡೆಮಿಕ್ಸ್ ನನಸು ಮಾಡುತ್ತಿದೆ. ನೆರೆಯ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಕೇರಳ, ಗುಜರಾತ್, ದೆಹಲಿ, ದುಬೈ ಸೇರಿ ವಿವಿಧೆಡೆಗಳಿಂದ ಸಾವಿರಾರು ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.
40 ದಿನಗಳ ಕ್ರಾಷ್ ಕೋರ್ಸ್:ಪ್ರತಿ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದ ಮರುದಿನವೇ ಎಕ್ಸೆಲ್ ಅಕಾಡೆಮಿಕ್ಸ್ 40 ದಿನಗಳ ಕ್ರಾಷ್ ಕೋರ್ಸ್ ಪ್ರಾರಂಭಿಸುತ್ತದೆ. ವಿದ್ಯಾರ್ಥಿಗಳನ್ನು ನೀಟ್, ಸಿಇಟಿ, ಐಐಟಿಯಂತೆ ವಿವಿಧ ತಂಡಗಳಾಗಿ ವಿಂಗಡಿಸಿ ತರಬೇತಿ ನೀಡಲಾಗುತ್ತದೆ. ರಾಜ್ಯ ಮಾತ್ರವಲ್ಲದೆ ಕೋಲ್ಕತ, ದೆಹಲಿ, ಆಂಧ್ರ ಪ್ರದೇಶದಿಂದ ನುರಿತ ಉಪನ್ಯಾಸಕರನ್ನು ಕರೆಸಿ, ಕ್ರಾಷ್ ಕೋರ್ಸ್​ನಲ್ಲಿ ತರಬೇತಿ ನೀಡಲಾಗುತ್ತದೆ.
ನಿತ್ಯ ಬೆಳಗ್ಗೆ 8ರಿಂದ ಸಂಜೆ 5.30ರವರೆಗೆ ತಲಾ ಒಂದೂವರೆ ಗಂಟೆಯಂತೆ ಭೌತಶಾಸ್ತ್ರ, ರಾಸಾಯನಶಾಸ್ತ್ರ, ಜೀವವಿಜ್ಞಾನ ವಿಷಯಗಳನ್ನು ಬೋಧಿಸಲಾಗುತ್ತದೆ. ಒಎಂಆರ್ ಶೀಟ್ ಭರ್ತಿ ಮಾಡುವ ಮೂಲಕ ಪ್ರತಿದಿನವೂ ಅಂದಂದಿನ ಪಠ್ಯದ ಪರೀಕ್ಷೆ ಮಾಡಲಾಗುತ್ತದೆ. ಈ ರೀತಿ ಒಟ್ಟು 40 ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನೂ ಬಿಡಿಸಿ, ಅವರನ್ನು ಪರೀಕ್ಷೆಗೆ ಸಂಪೂರ್ಣವಾಗಿ ಸಜ್ಜುಗೊಳಿಸಲಾಗುತ್ತದೆ.
ವಿದ್ಯಾರ್ಥಿಗಳಿಗೆ ಸುಸಜ್ಜಿತ ಹಾಸ್ಟೆಲ್ ವ್ಯವಸ್ಥೆ:ರಾಜ್ಯದ ವಿವಿಧ ಭಾಗಗಳಲ್ಲದೆ ಹೊರ ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳಿಗಾಗಿ ಸುಸಜ್ಜಿತ ಡಿಲಕ್ಸ್ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ ಅಲ್ಲಿದೆ. ಸೆಮಿ ರೆಸಿಡೆನ್ಸಿಯಲ್ ವ್ಯವಸ್ಥೆ ಕೂಡ ಲಭ್ಯವಿದೆ. ಶುಚಿರುಚಿಯಾದ ಊಟ, ತಿಂಡಿಯನ್ನು ಕೊಡಲಾಗುತ್ತದೆ.
ಇ-ಗ್ರಂಥಾಲಯ ಸೌಲಭ್ಯ:ಎಕ್ಸಲ್ ಅಕಾಡೆಮಿಕ್ಸ್ ಸಂಸ್ಥೆಯು ಸುಸಜ್ಜಿತ ಕ್ಯಾಂಪಸ್ ಹೊಂದಿದೆ. ಕೊಠಡಿಗಳು ವಿಶಾಲವಾಗಿದ್ದು, ಸುವ್ಯವಸ್ಥಿತವಾದ ಪೀಠೋಪಕರಣಗಳು, ಇ-ಗ್ರಂಥಾಲಯ ಸೌಲಭ್ಯ ಲಭ್ಯವಿದೆ.
ವಿಳಾಸ:ಎಕ್ಸೆಲ್ ಅಕಾಡೆಮಿಕ್ಸ್ ಸಂಸ್ಥೆಯು ಯಲಹಂಕ ಉಪನಗರದಲ್ಲಿರುವ ಶೇಷಾದ್ರಿಪುರ ಕಾಲೇಜು ಹತ್ತಿರ ಇದೆ. ಹೆಚ್ಚಿನ ಮಾಹಿತಿಗಾಗಿ ಮೊ:7676917777 ಅಥವಾ 9036357499 ಸಂರ್ಪಸಬಹುದು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + five =
Remember me
