ಬೆಂಗಳೂರು:ಕರೊನಾ ವೈರಸ್​ ಮುನ್ನೆಚ್ಛರಿಕಾ ಕ್ರಮವಾಗಿ ಹಾಕಲಾಗಿದ್ದ ಕ್ವಾರಂಟೈನ್​ ಸೀಲ್​ನಿಂದಲೇ ಯುವತಿಯೊಬ್ಬಳು ಪರದಾಡಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಎಲ್ಲಿಗೂ ಹೋಗಲು ಸಾಧ್ಯವಾಗದೇ ಯುವತಿ ಮೆಜಿಸ್ಟಿಕ್​ನಲ್ಲೇ ಪರದಾಡಿದ್ದಾಳೆ. ಯುವತಿ ಪಾಟ್ನಾದಿಂದ ಬಂದಿದ್ದಳು. ಕ್ವಾರಂಟೈನ್​ ಅವಧಿ ಮುಗಿದ್ದಿದ್ದರೂ ಕೈಯಲ್ಲಿದ್ದ ಸೀಲ್​ ನೋಡಿ ಅವಳ ಹೇಳಿದ ಜಾಗಕ್ಕೆ ಕರೆದೊಯ್ಯಲು ಚಾಲಕರು ಭಯಭೀತರಾಗಿ ಹಿಂದೇಟು ಹಾಕಿದರು. ಯುವತಿ ಎಷ್ಟೇ ಗೋಗರೆದರೂ ಚಾಲಕರ ಮನಸ್ಸು ಮಾತ್ರ ಕರಗಲೇ ಇಲ್ಲ.ಇದನ್ನೂ ಓದಿ:ಮಿಯಾಂವ್​ ಮಿಯಾಂವ್​: ಬೆಕ್ಕಿನ ಚಿತ್ರದೊಂದಿಗೆ ಮುಂಬೈ ಜನತೆಗೆ ಪೊಲೀಸರ ಎಚ್ಚರಿಕೆ!
ಕರೊನಾ ಬಂದಾಗಿನಿಂದ ಜನರು ಭಯಭೀತರಾಗಿದ್ದು, ಬೇರೆ ದೇಶ, ರಾಜ್ಯ ಹಾಗೂ ಊರುಗಳಿಂದ ಬರುವವರನ್ನು ಮುನ್ನೆಚ್ಛರಿಕಾ ಕ್ರಮವಾಗಿ 14 ದಿನಗಳ ಕಾಲ ಕ್ವಾರಂಟೈನ್​ನಲ್ಲಿ ಇಡಲಾಗುತ್ತದೆ. ಈ ವೇಳೆ ಅವರು ಎಲ್ಲಿಯೂ ಓಡಾಡುವಂತಿಲ್ಲ. ಹೀಗಾಗಿ ಯುವತಿಯ ಕೈಯಲ್ಲಿದ್ದ ಕ್ವಾರಂಟೈನ್ ಸೀಲ್​ ನೋಡಿ ಗಾಬರಿಗೊಂಡಿದ್ದಾರೆ.(ದಿಗ್ವಿಜಯ ನ್ಯೂಸ್​)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − six =
Remember me
