ಶ್ರೀನಿವಾಸಪುರ:ಮದುವೆಯಲ್ಲಿ ಸಾಮಾಜಿಕ ಅಂತರ ಕಾಪಾಡದೇ ಇದ್ದುದಕ್ಕೆ, ಮದುವೆಯಾದ ದಿನವೇ ನವ ದಂಪತಿಯೂ ಸೇರಿದಂತೆ ನೂರಾರು ಜನರನ್ನು ಕ್ವಾರಂಟೈನ್‌ಗೆ ಒಳಪಡಿಸಿರುವ ಸುದ್ದಿ ಇದು.
ಕೋಲಾರದ ವರ ಹಾಗೂ ಶ್ರೀನಿವಾಸಪುರ ತಾಲೂಕಿನ ಆರಿಕರೆ ಗ್ರಾಮದ ವಧುವಿನ ಮದುವೆ ಏ. 30ಕ್ಕೆ ಆರಿಕರೆ ಯಾತ್ರಿ ನಿವಾಸದಲ್ಲಿ ನಿಗದಿಯಾಗಿತ್ತು. ಮದುವೆಗೆ 14 ಜನರಿಗೆ ಅವಕಾಶ ನೀಡಲಾಗಿತ್ತು. ಆದರೆ ವರ ಮತ್ತು ವಧುವಿನ ಕಡೆಯಿಂದ 60 ಮಂದಿ ಪಾಲ್ಗೊಂಡಿದ್ದರು.
ರೆಡ್‌ಝೋನ್ ವ್ಯಾಪ್ತಿಯ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಿಂದಲೂ ನೆಂಟರು ಬಂದಿದ್ದರು. ಗೌರಿಬಿದನೂರು ತಹಸೀಲ್ದಾರ್ ಗಮನಕ್ಕೆ ತರದೆ 6 ಮಂದಿ ಸಂಬಂಧಿಕರು ಚೆಕ್‌ಪೋಸ್ಟ್ ದಾಟಿ ಬಂದಿದ್ದರು.ವಿಷಯ ತಿಳಿದ ಅಧಿಕಾರಿಗಳು ಕಲ್ಯಾಣ ಮಂಟಪಕ್ಕೆ ಭೇಟಿ ನೀಡುತ್ತಿದ್ದಂತೆಯೇ ಅಡುಗೆಯವರೂ ಸೇರಿ ಹಲವರು ಅಲ್ಲಿಂದ ಓಡಿ ಹೋಗಿದ್ದಾರೆ.
ಮದುವೆ ಮುಗಿದ ನಂತರ ಶ್ರೀನಿವಾಸಪುರದಲ್ಲೇ ವಧು-ವರರು ಸೇರಿ ಉಳಿದ 14 ಮಂದಿಯ ರಕ್ತದ ಮಾದರಿ ಮತ್ತು ಗಂಟಲು ದ್ರವ ಪಡೆಯಲಾಗಿದೆ. ವಧು-ವರರನ್ನು ಕೋಲಾರದ ಕುವೆಂಪು ನಗರದಲ್ಲಿ ಒಂದೇ ಕಡೆ ಗೃಹಬಂಧನದಲ್ಲಿ ಇರಿಸಲಾಗಿದೆ. ಇತರ 9 ಜನರನ್ನು ಕೋಲಾರದಲ್ಲಿ ಹಾಗೂ ವಧುವಿನ ಕಡೆಯ 5 ಜನರನ್ನು ಶ್ರೀನಿವಾಸಪುರದಲ್ಲಿ ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.
ಹೊಸಬಾಳಿನ ಕನಸಿನೊಂದಿಗೆ ಹಸೆಮಣೆ ಏರಿದ್ದ ದಂಪತಿ ಲಾಕ್‌ಡೌನ್ ನಿಯಮ ಉಲ್ಲಂಘಿಸಿದ್ದರಿಂದ ಹೋಂ ಕ್ವಾರಂಟೈನ್‌ನಲ್ಲಿ ಉಳಿಯುವಂತಾಗಿದೆ.
ಇದನ್ನೂ ಓದಿ:ಮಲಗಿದ್ದ ಮನೆಯೊಡೆಯನ ಮುಖದ ಮೇಲೆ ಹೊಡೆದ ಬೆಕ್ಕು…; ಆತ ಎಚ್ಚರಗೊಳ್ಳದೆ ಇದ್ದರೆ ಅವನ ಇಡೀ ಕುಟುಂಬ ಸಾಯುತ್ತಿತ್ತು..!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 10 =
Remember me
