ದೇವನಹಳ್ಳಿ:ಯುನೈಟೆಡ್​ ಕಿಂಗ್​ಡಂ (ಯುಕೆ) ರಾಷ್ಟದಿಂದ ವಿಮಾನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣಕ್ಕೆ ಆಗಮಿಸುವವರನ್ನು ಕ್ವಾರಂಟೈನ್​ನಲ್ಲಿ ಇಟ್ಟು ನಿಗಾ ವಹಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಮಧ್ಯರಾತ್ರಿ ಆಗಮಿಸುವವರನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಲು ನಿರ್ಧರಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್​. ರವೀಂದ್ರ ಹೇಳಿದ್ದಾರೆ.
ಇದನ್ನೂ ಓದಿಕೇರಳದಲ್ಲಿ ಈಗ ಇರುವ ಆ್ಯಕ್ಟಿವ್ ಕರೊನಾ ವೈರಸ್ ಕೇಸ್​ ಕೇವಲ 30!
ಎಲ್ಲರಿಗೂ ಪರೀಕ್ಷೆ:ಯುನೈಟೆಡ್​ ಕಿಂಗ್​ಡಂನ ವಿವಿಧ ಕಡೆಗಳಲ್ಲಿ ಇದ್ದ 700 ಮಂದಿ ಕನ್ನಡಿಗರು ಆಗಮಿಸುತ್ತಿದ್ದು, ಅವರನ್ನು ಕೋವಿಡ್​-19 ತಪಾಸಣೆಗೆ ಒಳಪಡಿಸಲಾಗುವುದು. ತಪಾಸಣೆಯಲ್ಲಿ ವೈರಸ್​ ಸೋಂಕು ಹರಡಿರುವುದು ದೃಢಪಟ್ಟರೇ ನೇರವಾಗಿ ರಾಜೀವ್​ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗುವುದು. ಸೋಂಕು ಇಲ್ಲದವರನ್ನು ನಿಗದಿಪಡಿಸಿರುವ ಕ್ವಾರಂಟೈನ್​ ಕೇಂದ್ರಗಳಿಗೆ ರವಾನಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಕ್ವಾರಂಟೈನ್​ ಮುಗಿದ ನಂತರ ಅವರು ತಮ್ಮ ಮನೆಗಳಿಗೆ ತೆರಳಬಹುದು. ದೇವನಹಳ್ಳಿ ಸಮೀಪದಲ್ಲಿರುವ ಹೋಟೆಲ್, ವಸತಿ ಶಾಲೆ, ಕಲ್ಯಾಣ ಮಂಟಪ, ಖಾಸಗಿ,ಸರ್ಕಾರಿ ಆಸ್ಪತ್ರೆಗಳನ್ನು ಕ್ವಾರೆಂಟೈನ್ ಕೇಂದ್ರಗಳಾಗಿ ಮಾರ್ಪಾಡು ಮಾಡಲಾಗಿದೆ.
ಕ್ವಾರಂಟೈನ್​ನಲ್ಲಿರುವವರ ನಿಗಾ ವಹಿಸಲು ಜಿಲ್ಲಾಧಿಕಾರಿ 13 ಮಂದಿ ಹಿರಿಯ ಅಧಿಕಾರಿಗಳನ್ನು ನಿಯೋಜಿಸಿದ್ದಾರೆ. ಉಸ್ತುವಾರಿಯನ್ನು ಜಿಲ್ಲಾಧಿಕಾರಿ ರವೀಂದ್ರ ವಹಿಸಲಿದ್ದಾರೆ.
VIDEO| ಕೆಎಂಎಫ್ ಗೆ ರೈತರು ಪೂರೈಸುವ ಹಾಲಿಗೆ ರಾಜ್ಯಾದ್ಯಂತ ಶೀಘ್ರ ಏಕರೂಪದ ದರ: ಬಾಲಚಂದ್ರ ಜಾರಕಿಹೊಳಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four + twelve =
Remember me
