ಬೀದರ್: ಕರೊನಾ ಸೋಂಕು ಹರಡ್ತಾ ಇದೆ. ಅದನ್ನು ತಡೆಯೋದಕ್ಕಾದರೂ ಮನೆಯಲ್ಲೇ ಇರಿ. ಕ್ವಾರಂಟೈನ್ ಅವಧಿಯಲ್ಲಿ ಇದ್ದೀರಿ.. ಹೊರಬರಲೇ ಬೇಡಿ ಎಂದು ಬುದ್ಧಿ ಮಾತು ಹೇಳಿದ ಸರ್ಕಲ್ ಇನ್​ಸ್ಪೆಕ್ಟರ್​ ಮೇಲೇ ಕೈ ಮಾಡಿದ್ರು ಕಿಡಿಗೇಡಿಗಳು.
ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಬೆಳಕುಣಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಹಾರಾಷ್ಟ್ರ ಪೂನಾ ದಿಂದ ಬಂದ ರಾಹುಲ್​ ಮತ್ತು ಆತನ ಕುಟುಂಬಸ್ಥರೇ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ನಡೆಸಿದವರು. ಹಲ್ಲೆಗೀಡಾದ ಪೊಲೀಸ್ ಅಧಿಕಾರಿ ಕಮಲನಗರ ವೃತ್ತದ ಸಿಪಿಐ ಪಾಲಕ್ಷ ಹಿರೇಮಠ.
ಮಹಾರಾಷ್ಟ್ರದಲ್ಲಿ ಕರೊನಾ ಸೋಂಕು ಅಧಿಕವಾಗಿದ್ದು, ಅಲ್ಲಿಂದ ಬಂದವರು ಮನೆಯಿಂದ ಹೊರಗೆ ಬರಲೇಬಾರದು. ಕ್ವಾರಂಟೈನ್ ಅವಧಿ ಪೂರೈಸಿ ಬಿಡಿ ಎಂದು ಹಿರೇಮಠ ಅವರು ಮನವಿ ಮಾಡಿಕೊಂಡಿದ್ದರು. ಇದರಿಂದ ಕೆರಳಿದ ರಾಹುಲ್ ಮತ್ತು ಕುಟುಂಬಸ್ಥರು ಆಶಾ ಕಾರ್ಯಕರ್ತರ ಸಮ್ಮುಖದಲ್ಲೇ ಸಿಪಿಐ ಮೇಲೆ ಹಲ್ಲೆ ನಡೆಸಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಹಲ್ಲೆ ನಡೆಸಿದವರನ್ನು ಬಂಧಿಸಿದ್ದಾರೆ.
ಒಂದೇ ಒಂದು ಆ್ಯಪಲ್​ – 2 ಕೋಟಿ ಪರಿಹಾರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − 2 =
Remember me
