ಬೆಂಗಳೂರು: ಜನ್ಮ ದಿನದಂದೇ ನಿರಾಶ್ರಿತರ ಕೇಂದ್ರದಲ್ಲಿ ಕ್ವಾರಂಟೈನ್​ನಲ್ಲಿದ್ದ 68 ವರ್ಷದ ವೃದ್ಧ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಗಾಯತ್ರಿ ನಗರದಲ್ಲಿದ್ದ ನಿರಾಶ್ರಿತ ವೃದ್ಧನನ್ನು ಕರೊನಾ ಸೋಂಕು ಶಂಕೆ ಹಿನ್ನೆಲೆಯಲ್ಲಿ ವಿಜಯನಗರದ ನಿರಾಶ್ರಿತರ ಕೇಂದ್ರದಲ್ಲಿ ಕ್ವಾರಂಟೈನ್​ನಲ್ಲಿ ಇಡಲಾಗಿತ್ತು. ಇಂದು ವೃದ್ಧನ ಹುಟ್ಟಿದ ದಿನ. ಹೀಗಾಗಿ ಆತ ನಿರಾಶ್ರಿತ ಕೇಂದ್ರದ ವಾರ್ಡನ್​ಗೆ ಪೂರಿ ಮಾಡಿಸಿಕೊಡುವಂತೆ ಕೋರಿದ್ದರು. ಅಲ್ಲದೆ ಸಂಜೆ ಕೇಕ್​ ತರಿಸಿ ಕತ್ತರಿಸಿ ಎಲ್ಲರಿಗೂ ಹಂಚಬೇಕು ಎಂದು ಹೇಳಿದ್ದರು. ಇದಾದ 2 ತಾಸಿನಲ್ಲಿ ವೃದ್ಧ ಮೃತಪಟ್ಟಿದ್ದಾರೆ. ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಅನಾಥವಾಗಿರುವ ಶವ:ನಿರಾಶ್ರಿತರ ಕ್ವಾರಂಟೈನ್​ ಕೇಂದ್ರದಲ್ಲಿ ಮೃತಪಟ್ಟಿರುವ ವೃದ್ಧನ ಶವ ಅನಾಥವಾಗಿ ಬಿದ್ದಿದೆ. ಸ್ಥಳಕ್ಕೆ ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಬಿಬಿಎಂಪಿ ಅಧಿಕಾರಿಗಳು ಬಂದಿಲ್ಲ ಎಂದು ತಿಳಿದು ಬಂದಿದೆ. ಕೇಂದ್ರದಲ್ಲಿ 40 ಮಂದಿ ನಿರಾಶ್ರಿತರು ಇದ್ದಾರೆ.
ಶಾಕಿಂಗ್​ ನ್ಯೂಸ್​: ಮದರಸಾಕ್ಕೆ ಹೋದ 53 ಮಕ್ಕಳಿಗೆ ಕರೊನಾ ಪಾಸಿಟಿವ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
