ಬೆಂಗಳೂರು:ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರಿಗೆ ಕರೊನಾ ತಪಾಸಣೆ ಹಾಗೂ ಕ್ವಾರಂಟೈನ್​ ನಿಯಮವನ್ನು ಮತ್ತೆ ಬದಲಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ.
ಯಾವುದೇ ರಾಜ್ಯಗಳಿಂದ ಬರುವ ಪ್ರತಿಯೊಬ್ಬ ಪ್ರಯಾಣಿಕರಿಗೂ ಸೇವಾ ಸಿಂಧು ವೆಬ್​ಸೈಟ್​ನಲ್ಲಿ ಹೆಸರು ನೋಂದಣಿ ಕಡ್ಡಾಯಗೊಳಿಸಿರುವ ಇಲಾಖೆ, ಕೆಲವರಿಗೆ ಕ್ವಾರಂಟೈನ್​ ವಿನಾಯಿತಿ ನೀಡಿದೆ. ಮಹಾರಾಷ್ಟ್ರದಿಂದ ಬರುವವರಿಗೆ ಮಾತ್ರ 7 ದಿನ ಸಾಂಸ್ಥಿಕ ಕ್ವಾರಂಟೈನ್​ ಮತ್ತು 7 ದಿನ ಹೋಂ ಕ್ವಾರಂಟೈನ್​ಗೆ ಸೂಚಿಸಿದ್ದು, ಇತರ ರಾಜ್ಯದಿಂದ ಬರುವವರಿಗೆ ಸಾಂಸ್ಥಿಕ ಕ್ವಾರಂಟೈನ್​ ಇರುವುದಿಲ್ಲ. ಅದರ ಡಿಟೇಲ್ಸ್ ಇಲ್ಲಿದೆ.
ಇದನ್ನೂ ಓದಿರಿಮಟಮಟ ಮಧ್ಯಾಹ್ನ ಅಲ್ಲೇನಾಯ್ತು? … ಮುಗಿಲು ಮುಟ್ಟಿದೆ ಬಡ ಕುಟುಂಬಗಳ ಆಕ್ರಂದನ
ಮಹಾರಾಷ್ಟ್ರ ಪ್ರಯಾಣಿಕರು:ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಯಾವುದೇ ಪ್ರಯಾಣಿಕರನ್ನು ತಪ್ಪದೇ 7 ದಿನಗಳ ಸಂಸ್ಥಿಕ ಕ್ವಾರಂಟೈನ್​ ಹಾಗೂ 7 ದಿನ ಹೋಂ ಕ್ವಾರಂಟೈನ್​ಗೆ ಒಳಪಡಿಸಬೇಕು. ಈ ಅವಧಿಯಲ್ಲಿ ರೋಗ ಲಕ್ಷಣ ಕಂಡುಬಂದವರಿಗೆ ಪರೀಕ್ಷೆ ನಡೆಸಬೇಕು. 50 ವರ್ಷ ಮೇಲ್ಪಟ್ಟ ವ್ಯಕ್ತಿಗಳು ಹಾಗೂ ಯಾವುದೇ ಆರೋಗ್ಯ ಸಮಸ್ಯೆ (ಎಚ್​ಐವಿ, ಕ್ಷಯ, ಕ್ಯಾನ್ಸರ್​, ಪಾರ್ಶ್ವವಾಯು, ಡಯಾಲಿಸಿಸ್​, ಅಂಗಾಂಗ ಕಸಿ, ಮಧುಮೇಹ, ಅಧಿಕ ರಕ್ತದೊತ್ತಡ ಇತರ ಕಾಯಿಲೆ) ಹೊಂದಿರುವವರನ್ನು ಆಗಮಿಸಿದ 5ರಿಂದ 7ನೇ ದಿನದ ನಡುವೆ ಒಮ್ಮೆ ಪರೀಕ್ಷಿಸಬೇಕು.
ಇದನ್ನೂ ಓದಿರಿಸೆಸ್ಕ್ ಸಿಬ್ಬಂದಿ ಹೀಗಾ ಮಾಡೋದು? ಕೆಲಸ ಮಾಡುವಲ್ಲೇ ಆತ ಹೆಣವಾದ…
ಕ್ವಾರಂಟೈನ್​ ವಿನಾಯಿತಿ:ಗರ್ಭಿಣಿಯರು, 10 ವರ್ಷದ ಒಳಗಿನ ಮಕ್ಕಳು, 60 ವರ್ಷ ಮೇಲ್ಪಟ್ಟ ಹಿರಿಯರು, ಗಂಭೀರ ಕಾಯಿಲೆ, ಮನೋರೋಗ ಹೊಂದಿರುವವರನ್ನ, ಐಸಿಎಂಆರ್​ ಅನುಮೋದಿತ ಯಾವುದೇ ಪ್ರಯೋಗಾಲಯದಿಂದ ಎರಡು ದಿನಗಳ ಹಿಂದಷ್ಟೇ ನೆಗೆಟಿವ್​ ಕೋವಿಡ್​ ಪರೀಕ್ಷಾ ವರದಿ ಹೊಂದಿರುವ ವ್ಯಕ್ತಿಗೆ ಸಾಂಸ್ಥಿಕ ಕ್ವಾರಂಟೈನ್​ನಿಂದ ವಿನಾಯಿತಿ ನೀಡಲಾಗಿದೆ. ಇವರು 14 ದಿನಗಳ ಹೋಂ ಕ್ವಾರಂಟೈನ್​ಗೆ ಒಳಪಡಬೇಕು.
ಇತರ ರಾಜ್ಯಗಳ ಪ್ರಯಾಣಿಕರು:ಮಹಾರಾಷ್ಟ್ರ ಹೊರತುಪಡಿಸಿ ಇತರ ರಾಜ್ಯಗಳಿಂದ ಬರುವವರಿಗೆ 14 ದಿನಗಳ ಹೋಂ ಕ್ವಾರಂಟೈನ್​ಗೆ ಒಳಪಡಿಸಲಾಗುವುದು. ಒಂದು ವೇಳೆ ದೊಡ್ಡ ಕುಟುಂಬವಿದ್ದು, ಮನೆ ಚಿಕ್ಕದಾಗಿದ್ದರೆ, ಕೊಳಗೇರಿ ಅಥವಾ ಕಿಕ್ಕಿರಿದ ಪ್ರದೇಶಗಳ ನಿವಾಸಿಯಾಗಿದ್ದು ಮನೆಯಲ್ಲಿ ಪ್ರತ್ಯೇಕ ಕ್ವಾರಂಟೈನ್​ ವ್ಯವಸ್ಥೆ ಸಾಧ್ಯವಾಗದವರನ್ನು ಮಾತ್ರ ಸಾಂಸ್ಥಿಕ ಕ್ವಾರಂಟೈನ್​ಗೆ ಸೂಚಿಸಬಹುದು.
ಇದನ್ನೂ ಓದಿರಿಇಲ್ನೋಡಿ, ಒಂದೇ ಕುಟುಂಬದ 15 ಜನರಿಗೂ ವಕ್ಕರಿಸಿದೆ ಕರೊನಾ ಹೆಮ್ಮಾರಿ!
ವ್ಯಾಪಾರಿಗಳಿಗೆ 7 ದಿನಗಳ ಅವಕಾಶ:ವ್ಯಾಪಾರ ಹಾಗೂ ವ್ಯವಹಾರ ಸಂಬಂಧ ಹೊರ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರು ತಮ್ಮ ವಿಳಾಸದೊಂದಿಗೆ ತಾವು ಭೇಟಿ ಮಾಡುವವರ ಸಂಪೂರ್ಣ ಮಾಹಿತಿ ನೀಡಬೇಕು. ಜತೆಗೆ ಆಗಮನದ ದಿನಾಂಕದಿಂದ 7 ದಿನಗಳ ನಂತರ ಇರಲು ಅವಕಾಶವಿಲ್ಲ. ಹೀಗಾಗಿ ವಾಪಸ್​ ತೆರಳಲು ಮುಂಗಡ ಟಿಕೆಟ್​ ಸಹ ಹೊಂದಿರಬೇಕು. ಒಂದು ವೇಳೆ ವ್ಯಾಪಾರ ಸಂಬಂಧ ರಸ್ತೆ ಮಾರ್ಗವಾಗಿ ಬಂದಲ್ಲಿ ಸಂದರ್ಶಕರ ವಿಳಾಸ ಸೇರಿ ವಿವರವಾದ ಮಾಹಿತಿ ಒದಗಿಸಬೇಕು. ಕೇವಲ 48 ಗಂಟೆಗಳ ಅಲ್ಪಾವಧಿಗೆ ಬರುವವರಿಗೆ ಕೋವಿಡ್​ ಪರೀಕ್ಷೆ ಹಾಗೂ ತಪಾಸಣೆ ಎರಡೂ ಇರುವುದಿಲ್ಲ. ಬದಲಿಗೆ ಅವರು ಮಾಸ್ಕ್​, ಸ್ಯಾನಿಟೈಸರ್​ ಬಳಕೆ ಸೇರಿ ಶಿಷ್ಟಾಚಾರಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಒಂದು ವೇಳೆ 48 ಗಂಟೆಗೂ ಹೆಚ್ಚು ಕಾಲ ಉಳಿಯುವವರಿಗೆ ಕೋವಿಡ್​ ಪರೀಕ್ಷೆ ನಡೆಸಲಾಗುತ್ತದೆ.
ಇದನ್ನೂ ಓದಿರಿ‘ತೊಗಲಾಗಿನ ಬಲ್ಲ ತಿಮ್ಮಣ್ಣ’ ಅಂತೆ ಡಿಸಿಎಂ ಕಾರಜೋಳ! ಉದ್ಯೋಗದ ಬಗ್ಗೆ ಏನೂ ಗೊತ್ತಿಲ್ಲ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 8 =
Remember me
