ಬೆಂಗಳೂರು:ಕ್ವಾರಂಟೈನ್​ ನಿಯಮದಲ್ಲಿ ಮತ್ತೆ ಬದಲಾವಣೆ ಮಾಡಿ ಸರ್ಕಾರ ಹೊಸ ಆದೇಶ ಹೊರಡಿಸಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಆದರೆ, ಇದು ಸುಳ್ಳು ಎಂದು ಫ್ಯಾಕ್ಟ್ ಚೆಕ್​ನಲ್ಲಿ ಗೊತ್ತಾಗಿದ್ದು, ಹಳೇ ನಿಯಮವೇ ಜಾರಿಯಲ್ಲಿದೆ.
ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರಿಗೆ 14 ದಿನ ಕ್ವಾರಂಟೈನ್​ ಕಡ್ಡಾಯ ಮಾಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್​ ಟ್ವಿಟರ್ ನಲ್ಲಿ ಹಾಕಿದ್ದಾರೆ ಎಂಬ ಸುದ್ದಿ ಇಂದು ಬೆಳಗ್ಗೆಯಿಂದ ಹರಿದಾಡಿತ್ತು. ಆದರೆ ಹೊಸ ನಿಯಮ ಜಾರಿ ಆಗಿಲ್ಲ ಎಂದು ಸಚಿವರು ಮತ್ತೆ ಟ್ವೀಟ್​ ಮಾಡಿದ್ದಾರೆ.ಇದನ್ನೂ ಓದಿರಿvideo/ ಕರೊನಾ ವಾರ್ಡಿನಲ್ಲಿ ‘ನರಕ’ ದರ್ಶನ, ಶೌಚಗೃಹದ ನೀರನ್ನೇ ಕುಡಿದ ಸೋಂಕಿತರು!
ಇತ್ತೀಚೆಗೆ ಕ್ವಾರಂಟೈನ್​ ನಿಯಮ ಸಡಿಲಗೊಳಿಸಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮಹಾರಾಷ್ಟ್ರದಿಂದ ಬರುವವರಿಗೆ ಮಾತ್ರ 7 ದಿನ ಸಾಂಸ್ಥಿಕ ಕ್ವಾರಂಟೈನ್​ ಮತ್ತು 7 ದಿನ ಹೋಂ ಕ್ವಾರಂಟೈನ್​ಗೆ ಸೂಚಿಸಿತ್ತು. ದೆಹಲಿ ಮತ್ತು ಗುಜರಾತ್​ ರಾಜ್ಯದಿಂದ ಬಂದವರಿಗೆ 3ದಿನ ಸಾಂಸ್ಥಿಕ ಕ್ವಾರಂಟೈನ್​, 11 ದಿನ ಹೋಂ ಕ್ವಾರಂಟೈನ್​ ಎಂದು ಹೇಳಿತ್ತು. ಸದ್ಯ ಇದೇ ನಿಯಮ ಜಾರಿಯಲ್ಲಿದೆ.
ಇದನ್ನೂ ಓದಿರಿ
ರಾಜವಂಶಸ್ಥ ಯದುವೀರ್ ವಿರುದ್ಧವೇ ತಿರುಗಿಬಿದ್ದ ಸಂಘಟನೆಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − eight =
Remember me
