ರೋಣ: ‘ನನ್ನ ಕ್ವಾರಂಟೈನ್ ಅವಧಿ ಮುಗಿದಿದೆ, ನನಗೆ ಹೊರಗೆ ಹೋಗಲು ಬಿಡಿ, ಇಲ್ಲದಿದ್ದರೆ ಗೋಡೆ ಜಿಗಿದು ಹೊರ ಹೋಗುತ್ತೇನೆ’ ಎಂದು ವ್ಯಕ್ತಿಯೊಬ್ಬ ಅಧಿಕಾರಿಗಳಿಗೆ ಬೆದರಿಕೆಯೊಡ್ಡಿದ ಘಟನೆ ಪಟ್ಟಣದ ಸಮಾಜ ಕಲ್ಯಾಣ ವಸತಿ ನಿಲಯದಲ್ಲಿರುವ ಕ್ವಾರಂಟೈನ್‌ನಲ್ಲಿ ಗುರುವಾರ ನಡೆದಿದೆ.
ಗುಜರಾತ್‌ನಿಂದ ಆಗಮಿಸಿದ್ದ ವ್ಯಕ್ತಿಯೊಬ್ಬನನ್ನು ಮೇ 12ರಿಂದ ಪಟ್ಟಣದ ಸಮಾಜ ಕಲ್ಯಾಣ ವಸತಿ ನಿಲಯದಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಹೀಗಾಗಿ ಇವರ ಕ್ವಾರಂಟೈನ್ ಅವಧಿ ಮೇ 26ಕ್ಕೆ ಮುಗಿಯುತ್ತದೆ.
ಇದನ್ನೂ ಓದಿಬುಕಿಂಗ್​ಗೂ ಮುನ್ನ ಯೋಚಿಸಿ, ವಿಮಾನದಲ್ಲಿ ವ್ಯಕ್ತಿಗತ ಅಂತರ ಸಾಧ್ಯವಿಲ್ಲ, ಸೀಟು ಖಾಲಿ ಬಿಡಲ್ಲ
ಆದರೆ ಆತ ‘ನನ್ನ ಮನೆಯಲ್ಲಿ ಮದುವೆ ಇದೆ. ನನಗೆ ಯಾವುದೇ ರೀತಿಯ ಕರೊನಾ ಸೋಂಕು ಇಲ್ಲ. ನನ್ನನ್ನು ಬಿಟ್ಟು ಬಿಡಿ, ಇಲ್ಲದಿದ್ದರೆ ಗೋಡೆ ಜಿಗಿದು ಹೋಗುತ್ತೇನೆ’ ಎಂದು ಗಲಾಟೆ ಮಾಡಿದ್ದಾನೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರ ಜತೆಗೂ ಆ ವ್ಯಕ್ತಿ ವಾಗ್ವಾದ ಮಾಡಿದ್ದಾನೆ. ಇದರಿಂದ ಸಿಡಿಮಿಡಿಗೊಂಡ ಪಿಎಸ್‌ಐ, ‘ನಿನ್ನ ಕ್ವಾರಂಟೈನ್ ಅವಧಿ ಮೇ 26ಕ್ಕೆ ಮುಗಿಯುತ್ತದೆ. ಅಲ್ಲಿಯವರೆಗೆ ಇಲ್ಲಿಯೇ ಇರಬೇಕು ಇಲ್ಲದಿದ್ದರೆ ನಿನ್ನ ವಿರುದ್ಧ ದೂರು ದಾಖಲಿಸಲಾಗುವುದು’ ಎಂದು ಎಚ್ಚರಿಕೆ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಇದನ್ನೂ ಓದಿಅಂತರ ಜಿಲ್ಲಾ ಸಂಚಾರಕ್ಕೆ ಬೇಕಿಲ್ಲ ಪಾಸ್​; ಬಸ್​, ರೈಲು, ವಿಮಾನ ಪ್ರಯಾಣಕ್ಕೆ ಈ ನಿಯಮ ಪಾಲನೆ ಕಡ್ಡಾಯ
ರಂಜಾನ್ ಮನೆಯಲ್ಲೇ ಆಚರಿಸಿ: ರಾಜ್ಯ ಸರ್ಕಾರದ ಸೂಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 6 =
Remember me
