ಚಿತ್ರದುರ್ಗ:ಟಿವಿ ರಿಮೋಟ್​ಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿ ದಾರುಣ ಘಟನೆ ಮೊಳಕಾಲ್ಮೂರು ಪಟ್ಟಣದ ಎನ್​ಎಂಎಸ್ ಕಾಲನಿಯಲ್ಲಿ ನಡೆದಿದೆ.
ಅಣ್ಣ-ತಮ್ಮ ಇಬ್ಬರು ರಿಮೋಟ್​ಗಾಗಿ ಜಗಳವಾಡುತ್ತಿದ್ದರು. ಇದರಿಂದ ಆಕ್ರೋಶಗೊಂಡ ತಂದೆ ಮಗನನ್ನೇ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಚಂದ್ರಶೇಖರ್ ಮೃತ ದುರ್ದೈವಿ. ತಂದೆ ಲಕ್ಷ್ಮಣಬಾಬು ಕೊಲೆ ಆರೋಪಿ.
ಲಕ್ಷ್ಮಣಬಾಬು ಎನ್ಎಮ್ಎಸ್ ಬಡಾವಣೆಯ ನಿವಾಸಿ. ಟಿವಿ ರಿಮೋಟ್​ಗಾಗಿ ಅವರ ಇಬ್ಬರು ಅಪ್ರಾಪ್ತ ಮಕ್ಕಳು ಜಗಳವಾಡುತ್ತಿದ್ದರು. ಜಗಳ ಮಾಡದಂತೆ ಲಕ್ಷ್ಮಣಬಾಬು ಮಕ್ಕಳಿಗೆ ತಿಳಿ ಹೇಳಿದ್ದ. ಆದರೆ, ಮಗ ಚಂದ್ರಶೇಖರ್​ ಮಾತು ಕೇಳದಿದ್ದಾಗ ಆಕ್ರೋಶಗೊಂಡ ಲಕ್ಷ್ಮಣಬಾಬು, ಮಗ ಚಂದ್ರಶೇಖರ್ ಕಡೆ ಜೋರಾಗಿ ಕತ್ತರಿ ಎಸೆದಿದ್ದ.
ಇದನ್ನೂ ಓದಿ:ಇಸ್ರೇಲ್​ ಪ್ರಧಾನಿಯನ್ನು ಭೂತ ಎಂದ ಅಸಾದುದ್ದೀನ್​ ಓವೈಸಿ! ಪ್ಯಾಲೆಸ್ತೀನ್ ಪರ ನಿಲ್ಲಲು ಪ್ರಧಾನಿ ಮೋದಿಗೆ ಒತ್ತಾಯ
ತಂದೆ ಎಸೆದ ಕತ್ತರಿ ಚಂದ್ರಶೇಖರ್ ಕುತ್ತಿಗಗೆ ತಾಗಿ, ರಕ್ತಸ್ರಾವವಾಯಿತು. ಕೂಡಲೇ ಚಂದ್ರಶೇಖರ್​ನನ್ನು ಪಟ್ಟಣದ ಆಸ್ಪತ್ರೆಗೆ ಕುಟುಂಬಸ್ಥರು ದಾಖಲಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗೆಂದು ಕುಟುಂಬಸ್ಥರು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದರು. ಆದರೆ, ಮಾರ್ಗ ಮಧ್ಯೆ ಚಂದ್ರಶೇಖರ್ ಮೃತಪಟ್ಟಿದ್ದಾನೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಮೊಳಕಾಲ್ಮೂರು ಪಟ್ಟಣ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಕನ್ನಡ ಓದಲು, ಬರೆಯಲು ಬಾರದವರ ಸಮೀಕ್ಷೆ ಆಗಬೇಕು: ಸರ್ಕಾರಕ್ಕೆ ಸಲಹೆ ನೀಡಿದ ಹಂಸಲೇಖ

ಆಭರಣ ಖರೀದಿಸುವ ಯೋಚನೆ ಇದ್ದರೆ ಬೆಲೆ ಗಮನಿಸಿ; ಇಂದು ಚಿನ್ನ, ಬೆಳ್ಳಿ ದರ ಏರಿಕೆ

ನಾಡದೇವತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬ ದಸರಾಗೆ ನಾದಬ್ರಹ್ಮ ಹಂಸಲೇಖ ಚಾಲನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + thirteen =
Remember me
