ಬೆಂಗಳೂರು:ಜಲ್ಲಿ ಕ್ರಷರ್​ಗಳ ಬಂದ್ ಹಾಗೂ ಕ್ವಾರಿ ಮಾಲೀಕರ ಪ್ರತಿಭಟನೆಯಿಂದ ರಾಜ್ಯಾದ್ಯಂತ ತಲೆದೋರಿದ್ದ ಸಮಸ್ಯೆ ಸಿಎಂ ಬಸವರಾಜ ಬೊಮ್ಮಾಯಿ ಶುಕ್ರವಾರ ರಾತ್ರಿ ನಡೆಸಿದ ಸಭೆ ಬಳಿಕ ಬಗೆಹರಿದಿದೆ. ಕರ್ನಾಟಕ ಸಣ್ಣ ಖನಿಜ ರಿಯಾಯಿತಿ ನಿಯಮ (ಕೆಎಂಎಂಸಿಆರ್) ತಿದ್ದುಪಡಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಆಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್, ಡಿ.21ರಿಂದ ಎಲ್ಲ ಘಟಕ ಬಂದ್ ಮಾಡಿ ರಾಜ್ಯವ್ಯಾಪಿ ಪ್ರತಿಭಟನೆ ನಡೆಸುತ್ತಿತ್ತು. ಸಿಎಂ ಜತೆ ಕ್ವಾರಿ ಮಾಲೀಕರ ಸಭೆ ಫಲಪ್ರದವಾದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಟ್ಟಿದ್ದಾರೆ. ಪ್ರತಿಭಟನೆಯಿಂದಾಗಿ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡು ಉಂಟಾಗಿರುವ ಸಮಸ್ಯೆ ಹಾಗೂ ಕಾರ್ವಿುಕರು ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ವಿಜಯವಾಣಿ ಶುಕ್ರವಾರ (ಜ.6) ‘ಜಲ್ಲಿ ಬಂದ್, ಬದುಕು ಕ್ರಷ್’ ಶೀರ್ಷಿಕೆಯಡಿ ರಿಯಾಲಿಟಿ ಚೆಕ್ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಸಮಸ್ಯೆ ಬಗೆಹರಿದಿದೆ. ಕಾನೂನುಬದ್ಧ ಗಣಿಗಾರಿಕೆಗೆ ಸೂಕ್ತ ನಿಯಮ ರೂಪಿಸಲಾಗುವುದು ಎಂದು ಸಿಎಂ ಭರವಸೆ ನೀಡಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ್ ಸಮ್ಮುಖದಲ್ಲಿ ನಡೆಸಿದ ಸಭೆಯಲ್ಲಿ ಕ್ವಾರಿ ಮಾಲೀಕರ ಸಮಸ್ಯೆಗಳನ್ನು ಸಿಎಂ ಆಲಿಸಿದರು. ರಾಜ್ಯದಲ್ಲಿ ಕಾನೂನುಬದ್ಧ ಗಣಿಗಾರಿಕೆಗೆ ಸಮರ್ಪಕವಾಗಿ ನಿಯಮಗಳು ಇಲ್ಲದಿರುವ ಹಿನ್ನೆಲೆಯಲ್ಲಿ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ಸಾವಿರಾರು ಕೋಟಿ ರೂ. ಆದಾಯ ನಷ್ಟವಾಗುತ್ತಿದೆ. ಪರಿಣಾಮಕಾರಿಯಾಗಿ ಆದಾಯ ಸಂಗ್ರಹಣೆ, ಸೋರಿಕೆ ತಡೆಗೆ ಎಲ್ಲ ಬಗೆಯ ಗಣಿಗಾರಿಕೆಗೆ ಈಗಿರುವ ನಿಯಮಗಳಿಗೆ ಸೂಕ್ತ ತಿದ್ದುಪಡಿ ಮಾಡಬೇಕಿದೆ. ಜತೆಗೆ ಕೇರಳ, ತಮಿಳುನಾಡು, ಮಹಾರಾಷ್ಟ್ರ ತೆಲಂಗಾಣ ಮತ್ತು ಆಂಧ್ರಪ್ರದೇಶ ಸೇರಿ ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಪ್ರತಿನಿತ್ಯ 2 ಲಕ್ಷ ಟನ್ ಜಲ್ಲಿ ಕಲ್ಲು ಮತ್ತು ಎಂ ಸ್ಯಾಂಡ್ ಅಕ್ರಮವಾಗಿ ಸರಬರಾಜು ಆಗುತ್ತಿದೆ. ಇದರಿಂದ ಸರ್ಕಾರಕ್ಕೆ ಬರಬೇಕಿದ್ದ ನೂರಾರು ಕೋಟಿ ರೂ. ಜಿಲ್ಲಾ ಖನಿಜ ನಿಧಿ, ರಾಜಧನ ಹಾಗೂ ಜಿಎಸ್​ಟಿ ಆದಾಯವೂ ಇಲ್ಲದಂತಾಗಿದೆ. ಈ ಕಾರಣದಿಂದಾಗಿ ನಿಯಮಗಳಿಗೆ ಸಮಗ್ರ ತಿದ್ದುಪಡಿ ಅಗತ್ಯ ಇದೆ ಎಂದು ಕ್ವಾರಿ ಮಾಲೀಕರು ಸಿಎಂಗೆ ಮನವರಿಕೆ ಮಾಡಿದರು. ಎಲ್ಲ ಸಮಸ್ಯೆಗಳನ್ನು ಆಲಿಸಿದ ಸಿಎಂ, ನಿಮ್ಮ ಬೇಡಿಕೆ ಈಡೇರಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ನಮ್ಮ ಬೇಡಿಕೆ ಈಡೇರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಹಾಲಪ್ಪ ಆಚಾರ್ ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿಯಿಂದಲೇ ಪ್ರತಿಭಟನೆ ವಾಪಸ್ ಪಡೆಯಲಾಗಿದೆ. ವಿಳಂಬ ಮಾಡದೆ ಅದಷ್ಟು ಬೇಗ ಸಮಸ್ಯೆಗಳನ್ನು ಈಡೇರಿಕೆಗೆ ಸರ್ಕಾರ ಮುಂದಾಗಬೇಕು.
|ಡಾ.ರವೀಂದ್ರ ಶೆಟ್ಟಿ. ಅಧ್ಯಕ್ಷ, ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಆಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್
ನಿರ್ಮಾಣ ಕಾಮಗಾರಿ ಸ್ಥಗಿತವಾಗಿತ್ತು:ಕಳೆದ 12 ದಿನಗಳಿಂದ ಕ್ವಾರಿ ಮಾಲೀಕರು ಕಲ್ಲು ಗಣಿಗಾರಿಕೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ್ದರು. ಇದರಿಂದ, ಬೆಂಗಳೂರು ನಗರ ಸೇರಿ ರಾಜ್ಯಾದ್ಯಂತ ಎಂಸ್ಯಾಂಡ್, ಜಲ್ಲಿಕಲ್ಲು ಮತ್ತು ಸೈಜುಗಲ್ಲು ಅಭಾವದಿಂದ ಎಲ್ಲ ಬಗೆಯ ನಿರ್ಮಾಣ ಹಂತದ ಕಾಮಗಾರಿಗಳು ಸ್ಥಗಿತಗೊಂಡಿದ್ದವು.ಅನ್ಯ ಮಾರ್ಗವಿಲ್ಲದೆ ಕೆಲವರು ಹೆಚ್ಚು ಹಣ ಕೊಟ್ಟು ಜಲ್ಲಿ, ಎಂ-ಸ್ಯಾಂಡ್ ಖರೀದಿಸಿ ಅರ್ಧಕ್ಕೆ ನಿಂತಿದ್ದ ಮನೆ ಕಾಮಗಾರಿಗಳ ಮುಗಿಸಲು ಮುಂದಾಗಿದ್ದರು. ಸಾವಿರಾರು ಕಾರ್ವಿುಕರು ಕೆಲಸವಿಲ್ಲದೆ ಬೀದಿಗೆ ಬರುವಂತಾಗಿತ್ತು.
ಮದುವೆ ಆಗಿಲ್ಲ ಅಂದ್ರೆ ಮನೆ ಖಾಲಿ ಮಾಡಿ: ಬಾಡಿಗೆದಾರರಿಗೆ ವಿಚಿತ್ರ ಎಚ್ಚರಿಕೆ

ಆಸ್ಪತ್ರೆಯಲ್ಲಿ ರೌಂಡ್ಸ್​ನಲ್ಲಿದ್ದಾಗಲೇ ಡಾಕ್ಟರ್​ಗೆ ಹೃದಯಾಘಾತ; ಕುಸಿದುಬಿದ್ದು 30 ವರ್ಷದ ವೈದ್ಯರ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
