ಬೆಂಗಳೂರು:ಕಳೆದ ತಿಂಗಳ ಲಾಕ್‌ಡೌನ್‌ನಿಂದಾಗಿ ಮದ್ಯ ಸಿಗದೇ ಒದ್ದಾಡಿದ್ದ ಹಲವಾರು ಮದ್ಯಪ್ರಿಯರು ಈ ಬಾರಿಯೂ ಹಾಗೆಯೇ ಆಗಿಬಿಡುತ್ತದೆ ಎಂಬ ಕಾರಣದಿಂದ ಸೋಮವಾರ ಬಹುತೇಕ ವೈನ್‌ ಶಾಪ್‌ಗಳ ಎದುರು ಜನರು ಕಿಕ್ಕಿರಿದು ತುಂಬಿಹೋಗಿದ್ದರು.
ಎಂಆರ್‌ಪಿ ಮದ್ಯದ ಮಳಿಗೆಗಳಲ್ಲಿ ಪಾರ್ಸೆಲ್‌ ತೆಗೆದಕೊಂಡು ಹೋಗಲು ಅವಕಾಶ ನೀಡಿ ಅದಕ್ಕೆ ಟೈಂ ಫಿಕ್ಸ್‌ ಮಾಡಿದ್ದರೂ, ಜನರು ಯಾವುದನ್ನೂ ನಂಬದೇ ಸಿಕ್ಕಷ್ಟು ಸಿಗಲಿ ಎಂದು ಮುಗಿಬಿದ್ದು ಖರೀದಿ ಮಾಡಿದ್ದಾರೆ. ಲಾಕ್‌ಡೌನ್‌ ಒಂದೇ ವಾರ ಎಂದು ಹೇಳಿದ್ದರೂ, ಯಾವುದರ ಮೇಲೂ ನಂಬಿಕೆ ಇಡದ ಜನ, ಮುಂದಿನ ಕೆಲವು ವಾರಗಳವರೆಗೆ ’ಸೇಫ್‌’ ಆಗಿರಲು ಮದ್ಯ ಖರೀದಿ ಮಾಡಿದ್ದಾರೆ. ಬಹುತೇಕ ಎಲ್ಲಾ ಮಳಿಗೆಗಳ ಮುಂದೆ ಭಾರಿ ಕ್ಯೂ ಕಂಡಿದೆ.
ಇದನ್ನೂ ಓದಿ:ಇಂದು ರಾತ್ರಿಯಿಂದ ಲಾಕ್‌ಡೌನ್‌: ಏನಿರುತ್ತೆ? ಏನಿರಲ್ಲ? ಇಲ್ಲಿದೆ ಡಿಟೇಲ್ಸ್‌
ಇದೇ ಕಾರಣಕ್ಕೆ ನಿನ್ನೆ ಅಂದರೆ ಸೋಮವಾರ ಒಂದೇ ದಿನ 230 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ. 215 ಕೋಟಿ ರೂ ಮೌಲ್ಯದ ಇಂಡಿಯನ್ ಮೇಡ್ ಲಿಕ್ಕರ್ ( ಐಎಂಎಲ್) ಹಾಗೂ 15 ಕೋಟಿ ರೂ. ಮೌಲ್ಯದ ಬಿಯರ್ ಮಾರಾಟ ಆಗಿರುವುದಾಗಿ ಅಬಕಾರಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಹಣ್ಣು, ತರಕಾರಿ, ಮಾಂಸದಂಗಡಿಗಳ ಮುಂದೆ ಕೂಡ ಜನರ ಗುಂಪು ಕಂಡುಬಂದಿದೆ. ಇವುಗಳ ಮಾರಾಟಕ್ಕೆ ಲಾಕ್‌ಡೌನ್‌ ವೇಳೆಯಲ್ಲಿ ಅನುಮತಿ ನೀಡಲಾಗಿದ್ದರೂ ಜನರ ಖರೀದಿ ಜೋರಾಗಿಯೇ ನಡೆದಿತ್ತು.
ಬಿಜೆಪಿ ಶಾಸಕ ರೇ ಪೋಸ್ಟ್‌ಮಾರ್ಟಮ್‌ ರಿಪೋರ್ಟ್‌ ಹೇಳಿದ್ದೇನು?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fourteen + eight =
Remember me
