ಬೆಂಗಳೂರು:ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಗಾಗಿ ನಡೆಸಲಾಗಿದ್ದ ಭೂಗೋಳಶಾಸ್ತ್ರ ವಿಷಯದ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಪ್ರತಿಷ್ಠಿತ ಕಾಲೇಜಿನ ಪ್ರಾಧ್ಯಾಪಕನೊಬ್ಬನ ಹೆಸರು ತಳಕು ಹಾಕಿಕೊಂಡಿದೆ. ಈ ಪ್ರಾಧ್ಯಾಪಕನ ಮೂಲಕವೇ ಅತಿಥಿ ಉಪನ್ಯಾಸಕಿ ಸೌಮ್ಯಗೆ ಪ್ರಶ್ನೆಪತ್ರಿಕೆ ಸಿಕ್ಕಿದೆ ಎಂಬುದು ಮೇಲ್ನೋಟಕ್ಕೆ ಪತ್ತೆಯಾಗಿದೆ.
ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂಎಸ್​ಸಿ ವ್ಯಾಸಂಗ ಮಾಡಿರುವ ಸೌಮ್ಯಗೆ ಪಿಎಚ್.ಡಿ ಮಾರ್ಗದರ್ಶನ ನೀಡಿದ್ದ ಪ್ರಾಧ್ಯಾಪಕನ ಮೂಲಕವೇ ಪ್ರಶ್ನೆಪತ್ರಿಕೆ ಸಿಕ್ಕಿದೆ ಎಂಬ ಶಂಕೆ ವ್ಯಕ್ತವಾಗಿದೆ. ಇದಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳಿಗೆ ಪೊಲೀಸರು ತಡಕಾಡುತ್ತಿದ್ದು, ಸದ್ಯದಲ್ಲೇ ಪ್ರಾಧ್ಯಾಪಕನನ್ನು ಬಂಧಿಸುವ ಸಾಧ್ಯತೆಗಳಿವೆ. ಬಳಿಕ ಪ್ರಶ್ನೆಪತ್ರಿಕೆ ಸೋರಿಕೆಯ ಮೂಲ ಪತ್ತೆಯಾಗಲಿದೆ ಎಂದು ಉನ್ನತ ಪೊಲೀಸ್ ಮೂಲಗಳು ತಿಳಿಸಿವೆ. ಆದರೆ, ತನಿಖಾಧಿಕಾರಿಗಳು ಸೌಮ್ಯ ವಿಚಾರಣೆ ಬಳಿಕವೇ ಪ್ರಶ್ನೆಪತ್ರಿಕೆ ಆಕೆಗೆ ಹೇಗೆ ಸಿಕ್ಕಿದೆ? ಎಂಬುದು ಗೊತ್ತಾಗಲಿದೆ ಎಂದು ಹೇಳಿದ್ದಾರೆ.
ವಿಚಾರಣೆ ತೀವ್ರ:ಆರೋಪಿ ಸೌಮ್ಯ ಅವರನ್ನು ಮಂಗಳವಾರ 1ನೇ ಎಸಿಎಂಎಂಎ ನ್ಯಾಯಾಲಯಕ್ಕೆ ಹಾಜ ರುಪಡಿಸಿದ ಪೊಲೀಸರು, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು. ನ್ಯಾಯಾಲಯ 12 ದಿನಗಳ ಕಾಲ ಆಕೆಯನ್ನು ಮಲ್ಲೇಶ್ವರ ಪೊಲೀಸರ ವಶಕ್ಕೆ ನೀಡಿದೆ. ಸೌಮ್ಯ ಹಿನ್ನೆಲೆಯ ಬಗ್ಗೆ ಈಗಾಗಲೇ ಮಾಹಿತಿ ಕಲೆ ಹಾಕಿರುವ ಖಾಕಿ, ಪ್ರಶ್ನೆಪತ್ರಿಕೆ ಕಳುಹಿಸಿದ್ದು ಯಾರು? ನಿಮ್ಮ ಮೊಬೈಲ್​ನಿಂದ ಯಾರಿಗೆಲ್ಲ ಕಳುಹಿಸಿದ್ದೀರಿ? ಎಂಬಿತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟಿದೆ. ಆಕೆಯ ಮೊಬೈಲನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್​ಎಸ್​ಎಲ್) ಕಳುಹಿಸಲಾಗಿದ್ದು, ಪರಿಶೀಲನೆ ಬಳಿಕ ಎಷ್ಟು ಜನರಿಗೆ ಪ್ರಶ್ನೆಪತ್ರಿಕೆ ರವಾನೆಯಾಗಿದೆ ಎಂಬಿತ್ಯಾದಿ ಸಂಗತಿ ಬೆಳಕಿಗೆ ಬರಲಿದೆ.
ಐಎಎಸ್​ಗೆ ತಯಾರಿ:ಸೌಮ್ಯ ಐಎಎಸ್ ಪರೀಕ್ಷೆ ತಯಾರಿ ನಡೆಸುತ್ತಿದ್ದರು. ಅಷ್ಟರಲ್ಲಿ ಪೇಪರ್ ಡೀಲಿಂಗ್ ಕೇಸ್​ನಲ್ಲಿ ಸಿಕ್ಕಿಬಿದ್ದಿದ್ದಾರೆ. ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡ ಹಲವರಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ. ಇದಲ್ಲದೇ, ಭೂಗೋಳಶಾಸ್ತ್ರ ಪರೀಕ್ಷೆ ಬರೆದ ಕೆಲವರ ವಿಚಾರಣೆಗೆ ಸಿದ್ಧತೆ ನಡೆದಿದೆ.
ಸಹಾಯಕ ಪ್ರಾಧ್ಯಾಪಕರ ನೇಮಕ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ದೂರು ಬರುತ್ತಿದ್ದಂತೆಯೇ ತನಿಖೆ ಆರಂಭಿಸಿ, ಆರೋಪಿಯೊಬ್ಬರನ್ನೂ ಬಂಧಿಸಲಾಗಿದೆ. ಪ್ರಕರಣದ ತನಿಖೆ ಹಂತದಲ್ಲಿರುವಾಗ ಹಸ್ತಕ್ಷೇಪ ಮಾಡದೆ ವಿಚಾರಣೆ ಪೂರ್ಣಗೊಂಡ ಬಳಿಕ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲು ಬದ್ಧರಾಗಿದ್ದೇವೆ.
|ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಉನ್ನತ ಶಿಕ್ಷಣ ಸಚಿವ.
ಮಾದರಿ ಪ್ರಶ್ನೆಪತ್ರಿಕೆ?:ಕಳೆದ ಮಾ.14 ರಂದು ಬೆಳಗ್ಗೆ 8.30ಕ್ಕೆ ಸೌಮ್ಯ ಪರೀಕ್ಷೆ ಹಾಲ್ ಬಳಿ ಹೋಗಿದ್ದರು. 8.31ಕ್ಕೆ ಆಕೆಯ ಮೊಬೈಲ್​ನಿಂದ ಕೈಬರಹದ ಪ್ರಶ್ನೆಗಳು ಸ್ನೇಹಿತೆಯ ವಾಟ್ಸ್​ಆಪ್​ಗೆ ಸೆಂಡ್ ಆಗಿವೆ. ಪರೀಕ್ಷೆ ಆರಂಭಕ್ಕೂ ಕೆಲ ನಿಮಿಷಗಳ ಮೊದಲು ಪ್ರಶ್ನೆಗಳು ಗೊತ್ತಾಗಿರುವ ಹಿನ್ನೆಲೆಯಲ್ಲಿ ಇದು ಮಾದರಿ ಪ್ರಶ್ನೆಪತ್ರಿಕೆಯ ಭಾಗವಾಗಿರಬಹುದು ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
ಸೌಮ್ಯ ಬಳಿ ಇದ್ದ ಪ್ರಶ್ನೆಗಳು ಅನುಕ್ರಮ ಸಂಖ್ಯೆ ಪ್ರಕಾರ ಇರಲಿಲ್ಲ. 18 ಪ್ರಶ್ನೆಗಳ ಪೈಕಿ 11 ಪ್ರಶ್ನೆಗಳು ಪ್ರಶ್ನೆ ಪತ್ರಿಕೆಯಲ್ಲಿದ್ದವು. ಸೋರಿಕೆಯಾದ ಪ್ರಶ್ನೆಗಳು ಕೈಬರಹದಲ್ಲಿ ಇದ್ದಿದ್ದರಿಂದ ಅಷ್ಟು ಬೇಗ ಬರೆದುಕೊಳ್ಳಲು ಸಹ ಸಾಧ್ಯವಿಲ್ಲ. ಪ್ರಶ್ನೆಪತ್ರಿಕೆ ತೀರಾ ಕಷ್ಟದ್ದಾಗಿದ್ದು, ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೆಚ್ಚು ಸಮಯ ಬೇಕಾಗುತ್ತದೆ. ಹೀಗಾಗಿ ಪ್ರಶ್ನೆಪತ್ರಿಕೆ ಸೋರಿಕೆಯ ಮೂಲ ಪತ್ತೆಯಾದ ಬಳಿಕವೇ ಇದರ ಹಿಂದಿನ ರಹಸ್ಯ ತಿಳಿಯಲಿದೆ ಎಂದು ಮೂಲಗಳು ತಿಳಿಸಿವೆ.
ವಿಚಾರಣೆ ತೀವ್ರ:ಆರೋಪಿ ಸೌಮ್ಯ ಅವರನ್ನು ಮಂಗಳವಾರ 1ನೇ ಎಸಿಎಂಎಂಎ ನ್ಯಾಯಾಲಯಕ್ಕೆ ಹಾಜ ರುಪಡಿಸಿದ ಪೊಲೀಸರು, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು. ನ್ಯಾಯಾಲಯ 12 ದಿನಗಳ ಕಾಲ ಆಕೆಯನ್ನು ಮಲ್ಲೇಶ್ವರ ಪೊಲೀಸರ ವಶಕ್ಕೆ ನೀಡಿದೆ. ಸೌಮ್ಯ ಹಿನ್ನೆಲೆಯ ಬಗ್ಗೆ ಈಗಾಗಲೇ ಮಾಹಿತಿ ಕಲೆ ಹಾಕಿರುವ ಖಾಕಿ, ಪ್ರಶ್ನೆಪತ್ರಿಕೆ ಕಳುಹಿಸಿದ್ದು ಯಾರು? ನಿಮ್ಮ ಮೊಬೈಲ್​ನಿಂದ ಯಾರಿಗೆಲ್ಲ ಕಳುಹಿಸಿದ್ದೀರಿ? ಎಂಬಿತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟಿದೆ. ಆಕೆಯ ಮೊಬೈಲನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್​ಎಸ್​ಎಲ್) ಕಳುಹಿಸಲಾಗಿದ್ದು, ಪರಿಶೀಲನೆ ಬಳಿಕ ಎಷ್ಟು ಜನರಿಗೆ ಪ್ರಶ್ನೆಪತ್ರಿಕೆ ರವಾನೆಯಾಗಿದೆ ಎಂಬಿತ್ಯಾದಿ ಸಂಗತಿ ಬೆಳಕಿಗೆ ಬರಲಿದೆ.
ಮತ್ತೊಂದು ಪಿಎಸ್​ಐ ನೇಮಕಾತಿಯಲ್ಲೂ ಅಕ್ರಮ?; ಇಲ್ಲೂ ದಿವ್ಯಾ ಹಾಗರಗಿ ಕೈವಾಡ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 6 =
Remember me