ಬೆಂಗಳೂರು:ಮಾನವ-ಆನೆ ಸಂಘರ್ಷ ತಡೆ ಸಂಬಂಧ ವನ್ಯಜೀವಿ ಕಾಯ್ದೆಗೆ ತಿದ್ದುಪಡಿ, ಅರಣ್ಯೀಕರಣದ ಪರಿಹಾರಾತ್ಮಕ ನಿಧಿ ‘ಕ್ಯಾಂಪಾ’ ಅನುದಾನ ಬಿಡುಗಡೆ ಕೋರಿ ಶೀಘ್ರವೇ ಕೇಂದ್ರದ ಬಳಿಗೆ ನಿಯೋಗ ಕೊಂಡೊಯ್ಯಲು ಅರಣ್ಯ ಸಚಿವರ ಮಟ್ಟದ ಸಭೆಯಲ್ಲಿ ಸೋಮವಾರ ನಿರ್ಣಯ ಕೈಗೊಳ್ಳಲಾಯಿತು.
ಜಿಕೆವಿಕೆಯಲ್ಲಿ ಆಯೋಜಿಸಿರುವ ಮಾನವ-ಆನೆ ಸಂಘರ್ಷ ನಿರ್ವಹಣೆಯ ಕುರಿತ ಜಾಗತಿಕ ಸಮ್ಮೇಳನದ ನೇಪಥ್ಯದಲ್ಲಿ ಸಚಿವ ಈಶ್ವರ್ ಖಂಡ್ರೆ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ರಾಜ್ಯಗಳ ಅರಣ್ಯ ಮಂತ್ರಿಗಳ ಸಭೆಯಲ್ಲಿ ಈ ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಯಿತು. ಕೇರಳ ಅರಣ್ಯ ಸಚಿವರು ಕೇಂದ್ರದೊಂದಿಗೆ ಸಂಪರ್ಕಿಸಿ ಸೂಕ್ತ ದಿನಾಂಕವನ್ನು ಗೊತ್ತು ಮಾಡಲು ಸಭೆಯಲ್ಲಿ ಪ್ರಕಟಿಸಲಾಯಿತು.
ಈಶ್ವರ್ ಖಂಡ್ರೆ ಮಾತನಾಡಿ, ಕರ್ನಾಟಕಕ್ಕೆ 1,300 ಕೋಟಿ ರೂ. ಮೊತ್ತದ ಕ್ಯಾಂಪಾ ಹಣ ಬರಬೇಕಿದೆ. ಮೂರು ಬಾರಿ ದಿಲ್ಲಿಗೆ ಹೋಗಿ ಮನವಿ ಸಲ್ಲಿಸಿದರೂ ಒಪ್ಪಿಗೆ ನೀಡಿಲ್ಲ. ಈ ಹಣ ಬಾರದ ಕಾರಣ ವನ್ಯಜೀವಿ ಸಂಬಂಧಿತ ಯೋಜನೆಗಳ ಜಾರಿಗೆ ವಿಳಂಬವಾಗಿದೆ ಎಂದು ಆಕ್ಷೇಪಿಸಿದರು. ಇದಕ್ಕೆ ದನಿಗೂಡಿಸಿದ ಕೇರಳ ಹಾಗೂ ಇತರ ರಾಜ್ಯಗಳ ಅರಣ್ಯ ಸಚಿವರು ತಮ್ಮ ರಾಜ್ಯಕ್ಕೂ ಅನುದಾನ ಬಾಕಿ. ಎಲ್ಲರೂ ಒಟ್ಟಾಗಿ ದಿಲ್ಲಿಗೆ ನಿಯೋಗ ಹೋಗಿ ನಿಧಿ ಬಿಡುಗಡೆಗೆ ಒತ್ತಾಯಿಸೋಣ ಎಂಬ ಸಲಹೆ ಕೇಳಿಬಂತು. ಇದಕ್ಕೆ ಸಭೆ ನಿರ್ಣಯ ಕೈಗೊಳ್ಳಲು ಸಮ್ಮತಿಸಿತು.
ಲಾಂಟನಾ ಸಮಸ್ಯೆಗೆ ಪರಿಹಾರ ಹುಡುಕಿ:
ಎಲ್ಲ ರಾಜ್ಯಗಳ ಅರಣ್ಯದಲ್ಲಿ ಲಾಂಟನಾ ಗಿಡಗಳು ಬೆಳೆದು ಸಮಸ್ಯೆ ಸೃಷ್ಟಿಯಾಗುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಆಯಾ ರಾಜ್ಯಗಳಲ್ಲಿ ಅನುಸರಿಸುತ್ತಿರುವ ಉತ್ತಮ ಅಂಶಗಳನ್ನು ವಿನಿಮಯ ಮಾಡಿಕೊಳ್ಳಬೇಕು. ನಿರಂತರವಾಗಿ ಲಾಂಟನಾವನ್ನು ಮೂಲೋತ್ಪಾಟನೆ ಮಾಡುವ ಜತೆಗೆ ಜಾರ್ಖಂಡ್‌ನಲ್ಲಿ ಸ್ಥಳೀಯ ಜನರಿಗೆ ಉಚಿತವಾಗಿ ನೀಡಿ ಗ್ರಾಮೀಣ ಕರಕುಶಲ ಕಲೆಗೆ ಬಳಸಲಾಗುತ್ತಿದೆ ಎಂಬ ಅಭಿಪ್ರಾಯ ಕೇಳಿಬಂತು.
ಎಲ್ಲ ರಾಜ್ಯಗಳಿಗೂ ಒಪ್ಪಿಗೆಯಾಗುವಂತಹ ಎಸ್‌ಒಪಿ ಅಂಶಗಳನ್ನು ಪಟ್ಟಿ ಮಾಡಿ ಅವುಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಎಲ್ಲ ಸಚಿವರು ಸಹಮತ ವ್ಯಕ್ತಪಡಿಸಿದರು.
ಸಭೆಯಲ್ಲಿ ಜಾರ್ಖಂಡ್‌ನ ಸಚಿವ ಬೈದ್ಯನಾಥ್ ರಾಮ್, ತಮಿಳುನಾಡು ಸಚಿವ ಎಂ. ಮಥಿವೆಂಥನ್, ತೆಲಂಗಾಣ ಸಚಿವೆ ಕೊಂಡ ಸುರೇಖಾ ಹಾಗೂ ಅಧಿಕಾರಿಗಳು ಇದ್ದರು.
ಕಾಡಿನ ಆನೆಗಳು ನೀರು, ಆಹಾರ ಕೊರತೆಯಿಂದ ನಾಡಿಗೆ ಬರುತ್ತವೆ. ನೀರಿನ ಕೊರತೆ ನೀಗಿಸಲು ಚೆಕ್ ಡ್ಯಾಂ ನಿರ್ಮಿಸಲಾಗುತ್ತಿದೆ. ಕಾಡಂಚಿನ ಪ್ರದೇಶದಲ್ಲೇ ಮಾನವ-ಆನೆ ಸಂಘರ್ಷ ಹೆಚ್ಚಿರುವುದರಿಂದ ಅಲ್ಲಿನ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಅಂಥ ಸ್ಥಳಗಳಲ್ಲಿ ತಂತ್ರಜ್ಞಾನ ಆಧಾರಿತ ಪರಿಹಾರದ ಜತೆಗೆ ಕೃತಕ ಬುದ್ಧಿಮತ್ತೆಯ ಪ್ರಯೋಜನ ಪಡೆದುಕೊಳ್ಳುವುದು ಯುಕ್ತ.– ಬೈದ್ಯನಾಥ್ ರಾಮ್, ಜಾರ್ಖಂಡ್‌ನ ಅರಣ್ಯ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
