ಬೆಂಗಳೂರು:ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ 545 ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ಗಳ ನೇಮಕಾತಿಗೆ ನಡೆದ ಪರೀಕ್ಷೆಯಲ್ಲಿನ ಅಕ್ರಮಗಳ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಕೆ ಬೆನ್ನಲ್ಲೇ ಬಹುಕೋಟಿ ಕೋವಿಡ್ ಹಗರಣದ ತನಿಖೆ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಸದ್ಯದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗುವ ಸಾಧ್ಯತೆಯಿದೆ.
ಕೋವಿಡ್-19ಗೆ ಸಂಬಂಧಿಸಿದಂತೆ 2020ರ ಮಾರ್ಚ್‌ನಿಂದ 2022ರ ಡಿಸೆಂಬರ್ ಅವಧಿಯಲ್ಲಿ ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಸೇರಿ ಇತರೆ ಇಲಾಖೆಗಳಲ್ಲಿ ವೈದ್ಯಕೀಯ ಪರಿಕರಗಳು, ಹಾಸಿಗೆ, ವೆಂಟಿಲೇಟರ್, ಸ್ಯಾನಿಟೈಸರ್ ಮಾಸ್ಕ್, ಚುಚ್ಚುಮದ್ದು, ಮಾತ್ರೆ ಸೇರಿ ವಿವಿಧ ಔಷಧಗಳ ಖರೀದಿಯಲ್ಲಿ ಬೃಹತ್ ಅವ್ಯವಹಾರ ನಡೆದಿರುವ ಬಗ್ಗೆ ಗಂಭೀರ ಆರೋಪಗಳಿತ್ತು. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಕಾಂಗ್ರೆಸ್ ಸರ್ಕಾರ, ಸೆ.15ರಂದು ವಿಚಾರಣಾ ಆಯೋಗ ರಚಿಸಿತ್ತು. ಹೈಕೋರ್ಟ್ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹ ಅವರನ್ನು ವಿಚಾರಣಾ ಆಯುಕ್ತರಾಗಿ ನೇಮಿಸಿತ್ತು.
ವಿಚಾರಣಾ ಆಯೋಗವು ಸಂಬಂಧಪಟ್ಟ ಇಲಾಖೆಗಳಿಂದ ಎರಡು ಲಕ್ಷಕ್ಕೂ ಅಧಿಕ ಕಡತಗಳನ್ನು ತರಿಸಿಕೊಂಡಿದೆ. ಕೋವಿಡ್ ಅವಧಿಯಲ್ಲಿ ಖರೀದಿಸಿರುವ ಲಕ್ಷಕ್ಕೂ ಅಧಿಕ ಕಡತಗಳನ್ನು ಈಗಾಗಲೇ ತನಿಖಾ ತಂಡವು ತರಿಸಿಕೊಂಡು ಪರಿಶೀಲಿಸಿದೆ. ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದಿಂದ ಟೆಂಡರ್, ವೈದ್ಯಕೀಯ ಉಪಕರಣ, ವೆಂಟಿಲೇಟರ್‌ಗಳ ಖರೀದಿ ಹಾಗೂ ಆಮ್ಲಜನಕರ ನಿರ್ವಹಣೆ ಬಗ್ಗೆ ಕಡತವನ್ನು ತರಿಸಿಕೊಂಡಿದೆ. ನಗರ ಸ್ಥಳೀಯ ಸಂಸ್ಥೆಗಳು ಮತ್ತು ಜಿಲ್ಲೆಗಳಲ್ಲಿ ಖರೀದಿಗಳ ಬಗ್ಗೆ ಹಾಗೂ ಕೋವಿಡ್ ರೋಗಿಗಳಿಗೆ ಹಾಸಿಗೆ ಹಂಚಿಕೆ ಮಾಡಿರುವ ಕುರಿತು ದಾಖಲೆಗಳನ್ನು ತರಿಸಿಕೊಂಡು ಸಂಬಂಧ ಅಧಿಕಾರಿಗಳನ್ನು ಈಗಾಗಲೇ ವಿಚಾರಣೆ ನಡೆಸಿದೆ.ಈ ಎಲ್ಲವನ್ನೂ ಕ್ರೂಢೀಕರಿಸಿ ವರದಿ ಸಿದ್ಧಪಡಿಸಿರುವ ಆಯೋಗವು, 2-3 ವಾರದಲ್ಲಿ ಸರ್ಕಾರಕ್ಕೆ ಸಲ್ಲಿಸಲು ತಯಾರಿ ಮಾಡಿಕೊಂಡಿದೆ.
ಪಿಎಸ್‌ಐ ಪರೀಕ್ಷೆ: ಭದ್ರತೆಗಾಗಿ ಪ್ರತಿ ಕೇಂದ್ರಕ್ಕ 6 ಬೆಟಾಲಿಯನ್ ನಿಯೋಜನೆ
ಬೃಹತ್ ಅಕ್ರಮ:2020ರ ಮಾರ್ಚ್‌ನಿಂದ 2022ರ ಡಿಸೆಂಬರ್ ಅವಧಿಯಲ್ಲಿ ಆರೋಗ್ಯ ಇಲಾಖೆ, ಇದರ ಅಧೀನದ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್‌ಎಂ), ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ( ಕೆಎಸ್‌ಎಂಎಸ್‌ಸಿಎಲ್) ಕೆಟಿಟಿಪಿ ಕಾಯ್ದೆ ಉಲ್ಲಂಸಿ ಹಾಗೂ ಸಕ್ಷಮ ಅಧಿಕಾರಿಗಳು ನೀಡಿದ ಆಡಳಿತಾತ್ಮಕ ಅನುಮೋದನೆ ಗಾಳಿಗೆ ತೂರಿ ಸಾವಿರಾರು ಕೋಟಿ ರೂ.ಮೌಲ್ಯದ ಔಷಧ, ಪಿಪಿಇ ಕಿಟ್, ಗ್ಲೌಸ್, ಸ್ಯಾನಿಟೈಸರ್, ಧರ್ಮಲ್ ಸ್ಕ್ರೀನಿಂಗ್, ಮಾಸ್ಕ್, ನಾಸಲ್ ಕ್ಯಾನ್ಯುಲ್ ಥೆರಪಿ, ವೆಂಟಿಲೇಟರ್ ಸೇರಿ ಇತರೆ ವೈದ್ಯಕೀಯ ಉಪಕರಣಗಳು ಖರೀದಿಸಲಾಗಿತ್ತು. ಕೆಲ ಟೆಂಡರ್‌ಗಳಲ್ಲಿ ಅರ್ಹತೆ ಇಲ್ಲದೆ ಕಂಪನಿಗಳಿಗೆ ಖರೀದಿ ಆದೇಶ ಪತ್ರಿ ಕೊಟ್ಟಿರುವುದು, ಮಾರುಕಟ್ಟೆ ದರಗಿಂತ ಹೆಚ್ಚು ಮೊತ್ತ ನಮೂದಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವುದು, ಸರ್ಕಾರದ ಅನುಮತಿ ಪಡೆಯದೆ 4ಜಿ ಅಡಿ ಟೆಂಡರ್ ನಡೆಸಿರುವುದು, ನಕಲಿ ದಾಖಲೆ ಸಲ್ಲಿಸಿದ್ದ ಕಂಪನಿಗಳಿಗೆ ಟೆಂಡರ್ ಕೊಟ್ಟಿರುವುದು, ಕಮಿಷನ್ ಆಸೆಗಾಗಿ ತಮಗಿಷ್ಟ ಬಂದ ಕಂಪನಿಗಳಿಗೆ ಬೇಕಾಬಿಟ್ಟಿ ಕಾರ್ಯಾದೇಶ ಪತ್ರ ಹಂಚಿಕೆ ಮಾಡಲಾಗಿತ್ತು. ಕೆಲ ಕಂಪನಿಗಳು ಕಳಪೆ ಔಷಧ ಮತ್ತು ಉಪಕರಣಗಳನ್ನು ಖರೀದಿಸಿ ರೋಗಿಗಳಿ ಹಂಚಿಕೆ ಮಾಡಿದ ಬಗ್ಗೆ ದೂರುಗಳಿತ್ತು. ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದಲ್ಲಿಯೂ ನಿಯಮ ಉಲ್ಲಂಸಿ ಬೇಕಾಬಿಟ್ಟಿ ಪಿಪಿಇ ಕಿಟ್, ವೆಂಟಿಲೇಟರ್, ಎಕ್ಸ್‌ರೇ ಯಂತ್ರ ಸೇರಿ ವಿವಿಧ ಬಗೆಯ ವೈದ್ಯಕೀಯ ಸಲಕರಣೆಗಳನ್ನು ಖರೀದಿಸಲಾಗಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − five =
Remember me
