ಮಂಡ್ಯ:ಭಾರೀ ಬಿರುಗಾಳಿಗೆ ಸಿಲುಕಿ ತೆಂಗಿನ ಮರವೊಂದು ಕಾರು ಮತ್ತು ಬೈಕ್​ ಮೇಲೆ ಬಿದ್ದ ಪರಿಣಾಮ ಬಾಲಕಿಯೊಬ್ಬಳು ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ದೊಡ್ಡಪಾಳ್ಯದೊಡ್ಡಿ ಬಳಿಯ ಶ್ರೀರಂಗಪಟ್ಟಣ-ಬನ್ನೂರು ರಸ್ತೆಯಲ್ಲಿ ನಡೆದಿದೆ.
ಪ್ರಿಯಾಂಕಾ (12) ಮೃತಪಟ್ಟಿರುವ ಬಾಲಕಿ. ಕೆಆರ್​ಎಸ್​ ಗ್ರಾಮದ ನಾಗರಾಜು ಮತ್ತು ಪ್ರೇಮ ದಂಪತಿಯ ಪುತ್ರಿ. ರಾಜ್ಯದ ಹಲವೆಡೆ ಬಿಡುಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ. ನಿನ್ನೆ ಶ್ರೀರಂಗಪಟ್ಟಣ ತಾಲೂಕಿನ ದೊಡ್ಡಪಾಳ್ಯದೊಡ್ಡಿ ಬಳಿ ಬಿರುಗಾಳಿಯಿಂದ ಕಾರು ಹಾಗೂ ಬೈಕ್ ಮೇಲೆ ತೆಂಗಿನ ಮರ ಬಿದ್ದು ದುರ್ಘಟನೆ ಸಂಭವಿಸಿದೆ.
ಮೃತ ಪ್ರಿಯಾಂಕಾ ತಂದೆ-ತಾಯಿಯ ಜತೆ ಬೈಕ್​​ನಲ್ಲಿ ಸಂಬಂಧಿಕರ ಮನೆಗೆ ಹೋಗುತ್ತಿದ್ದಳು. ದೊಡ್ಡಪಾಳ್ಯದೊಡ್ಡಿ ಬಳಿ ಬರುತ್ತಿದ್ದಂತೆ ಬಿರುಗಾಳಿ ಹೆಚ್ಚಾಗಿದೆ. ದುರಾದೃಷ್ಟವಶಾತ್​ ಇದೇ ಸಂದರ್ಭದಲ್ಲಿ ರಸ್ತೆ ಪಕ್ಕದಲ್ಲಿದ್ದ ಬೃಹತ್ ತೆಂಗಿನ ಮರ ಬೈಕ್ ಮೇಲೆ ಬಿದ್ದಿದೆ. ಘಟನೆಯಲ್ಲಿ ಬೈಕ್ ಮುಂದೆ ಕುಳಿತಿದ್ದ ನಾಗರಾಜು ಹಾಗೂ ಪುತ್ರಿ ಪ್ರಿಯಾಂಕಾಗೆ ಗಭೀರ ಗಾಯವಾಗಿತ್ತು.
ರಕ್ತದ ಮಡುವಿನಲ್ಲಿ ನರಳುತ್ತಿದ್ದವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಪ್ರಿಯಾಂಕಾ ಮೃತಪಟ್ಟಿದ್ದಾಳೆ. ಸದ್ಯ ನಾಗರಾಜ್​ಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಿಂಬದಿ ಕುಳಿತಿದ್ದ ಪತ್ನಿ ಪ್ರೆಮಾ, ಪುತ್ರ ಚೇತನ್​ಗೂ ಸಣ್ಣಪುಟ್ಟ ಗಾಯಗಳಾಗಿವೆ. ಇದೇ ಸಂದರ್ಭದಲ್ಲಿ ಕಾರಿನ ಮೇಲೂ ಮರ ಬಿದ್ದಿದ್ದು, ಪಿಹಳ್ಳಿ ಗ್ರಾಮದ ನಾಗಮ್ಮ ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)
ಸಮಂತಾ ಜತೆಗಿರೋ ವಿದೇಶಿ ವ್ಯಕ್ತಿ ಯಾರು? ಈ ಒಂದು ವಿಚಾರಕ್ಕೆ ಮತ್ತೆ ಸುದ್ದಿಯಾದ ಸ್ಯಾಮ್​!

ಮಿಸ್ಟರ್​ ಆ್ಯಂಡ್​ ಮಿಸೆಸ್ ಮ್ಯಾಕ್ಸ್​ವೆಲ್​: ಆಸಿಸ್​ ಆಲ್​ರೌಂಡರ್​ ಮ್ಯಾಕ್ಸಿ ಇನ್ಮುಂದೆ ಭಾರತದ ಅಳಿಯ

ಸಹಕಾರ ಸಂಘಗಳ ಸದೃಢತೆಗೆ ಒತ್ತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
