ಬೆಂಗಳೂರು:ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಹಾಗೂ ಬೆಂಗಳೂರು ನಗರ ಪದಾಧಿಕಾರಿಗಳ ತಂಡದ ಪುನರ್‌ ರಚನೆಯಾಗಿದ್ದು, ರಾಜ್ಯಾಧ್ಯಕ್ಷರಾಗಿ ಪೃಥ್ವಿ ರೆಡ್ಡಿ ಹಾಗೂ ನಗರಾಧ್ಯಕ್ಷರಾಗಿ ಮೋಹನ್‌ ದಾಸರಿ ಪುನರಾಯ್ಕೆ ಆಗಿದ್ದಾರೆ.
ಎಎಪಿ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ನಿರ್ದೇಶನದಂತೆ ಪಕ್ಷದ ಕರ್ನಾಟಕ ಚುನಾವಣಾ ಉಸ್ತುವಾರಿ ದಿಲೀಪ್‌ ಪಾಂಡೆಯವರು ರಾಜ್ಯ ಪದಾಧಿಕಾರಿಗಳ ತಂಡದ ಪುನಾರಚನೆ ಮಾಡಿದ್ದಾರೆ.
ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಹಾಗೂ ವಿಜಯ್‌ ಶರ್ಮಾರವರನ್ನು ರಾಜ್ಯ ಉಪಾಧ್ಯಕ್ಷರಾಗಿ ನೇಮಿಸಲಾಗಿದೆ. ಸಂಚಿತ್‌ ಸಹಾನಿಯವರು ರಾಜ್ಯ ಪ್ರಧಾನ ಕಾರ್ಯದರ್ಶಿ, ಹರಿಹರನ್‌ರವರು ರಾಜ್ಯ ಖಜಾಂಚಿ, ಜಗದೀಶ್ ವಿ ಸದಂ ರಾಜ್ಯ ಮಾಧ್ಯಮ ಉಸ್ತುವಾರಿಗಳಾಗಿ , ಕೆ. ಮಥಾಯ್ ರಾಜ್ಯವಕ್ತಾರ ಹುದ್ದೆಗೆ ನೇಮಕಗೊಂಡಿದ್ದಾರೆ.
ರಾಜ್ಯ ಕಾರ್ಯದರ್ಶಿಗಳಾಗಿ ಎಚ್.ಡಿ.ಬಸವರಾಜು, ಡಾ. ವೆಂಕಟೇಶ್‌, ಬಿ.ಟಿ.ನಾಗಣ್ಣ, ಲಕ್ಷ್ಮೀಕಾಂತ್‌ ರಾವ್‌, ಶಾಂತಲಾ ದಾಮ್ಲೆ ನೇಮಕಗೊಂಡಿದ್ದಾರೆ. ರಾಜ್ಯ ಜಂಟಿ ಕಾರ್ಯದರ್ಶಿ ಹುದ್ದೆಗಳಿಗೆ ದರ್ಶನ್‌ ಜೈನ್‌ ಹಾಗೂ ವಿವೇಕಾನಂದ ಸಾಲಿನ್ಸ್‌ರವನ್ನು ನೇಮಿಸಲಾಗಿದೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.
ಬಾಡಿಗೆ ಮನೇಲಿ ಹಾಲು ಉಕ್ಕಿಸಿದ ಕೆಲವೇ ಕ್ಷಣದಲ್ಲಿ ಸಾವಿನ ಹಾದಿ ಹಿಡಿದ ಗೃಹಿಣಿ: ಮನಕಲಕುತ್ತೆ ಈಕೆಯ ನೋವಿನ ಕತೆ

ಅನಂತರಾಜು ಆತ್ಮಹತ್ಯೆ ಕೇಸ್​ಗೆ ಮತ್ತೊಂದು ತಿರುವು: ಪೊಲೀಸರಿಗೆ ಡೆತ್​ನೋಟ್ ತಂದು ಕೊಟ್ಟ ಸುಮಾ

ಅಕ್ಕ-ತಂಗಿ ಸಾಲದು ಅಂತ ಮೂರನೇ ಮದ್ವೆಯಾಗಿ ಹೈಕೋರ್ಟ್‌ನಲ್ಲಿ ಇಕ್ಕಟ್ಟಿಗೆ ಸಿಲುಕಿದ ಬೆಂಗಳೂರಿನ ವೃದ್ಧ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 8 =
Remember me
