ಬೆಂಗಳೂರು:ಇಂದು ಬೆಳ್ಳಂಬೆಳಗ್ಗೆ ಬೆಂಗಳೂರಿನ 9 ಕಡೆ ಬಿಡಿಎ ಮಧ್ಯವರ್ತಿಗಳ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ(ಬಿಡಿಎ) ಅಧಿಕಾರಿಗಳಿಗೆ ಲಂಚದ ಆಮಿಷವೊಡ್ಡಿ ಮತ್ತು ಪ್ರಭಾವ ಬೀರಿ ಸರ್ಕಾರಿ ಕೆಲಸದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಆರೋಪದ ಮೇಲೆ 9 ಮಧ್ಯವರ್ತಿಗಳ ಮೇಲೆ ಮಂಗಳವಾರ ಬೆಳಗ್ಗೆ ಎಸಿಬಿ ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಏಕಕಾಲಕ್ಕೆ ದಾಳಿ ಮಾಡಲಾಗಿದೆ.
ಬಿಡಿಎ ಭ್ರಷ್ಟಾಚಾರದ ಮೂಲವೇ ಈ ಮಧ್ಯವರ್ತಿಗಳು. ಬಿಡಿಎಗೆ ಬರುವ ಪ್ರತಿಯೊಬ್ಬ ಅಧಿಕಾರಿಯನ್ನು ಮಧ್ಯವರ್ತಿಗಳು ಸಂಪರ್ಕಿಸುತ್ತಿದ್ದರು. ನಿವೇಶನ ಹಂಚಿಕೆ, ಸರ್ಕಾರಿ ನಿವೇಶನ ಅಭಿವೃದ್ದಿ ಸೇರಿ ಬಿಡಿಎನ‌ ಪ್ರತಿಯೊಂದು ಪ್ರಕ್ರಿಯೆಯಲ್ಲೂ ಮಧ್ಯವರ್ತಿಗಳ ಒಡನಾಟ ಪತ್ತೆಯಾಗಿದ್ದು, ಇದೆ ಹಿನ್ನೆಲೆಯಲ್ಲಿ ಬಿಡಿಎ ಮಧ್ಯವರ್ತಿಗಳ ಮೇಲೆ ಎಸಿಬಿ ದಾಳಿ ಮಾಡಿದೆ.
ದೊಮ್ಮಲೂರಿನ ಬ್ರೋಕರ್ ಮನೋಜ್ ಮನೆಯಲ್ಲಿ ಬೆಲೆ ಬಾಳುವ ವಸ್ತುಗಳು ಪತ್ತೆಯಾಗಿವೆ. ಐಷಾರಮಿ ಸನ್ ಗ್ಲಾಸಸ್ ಹಾಗೂ ವಾಚ್​ಗಳು ಪತ್ತೆಯಾಗಿವೆ. ದೇಶ ಹಾಗೂ ವಿದೇಶಗಳ ಪ್ರತಿಷ್ಟಿತ ಬ್ರಾಂಡ್​ನ ಸನ್ ಗ್ಲಾಸಸ್ ಹಾಗೂ ಕೈ ಗಡಿಯಾರಗಳು ಪತ್ತೆಯಾಗಿವೆ. ಚಿನ್ನಾಭರಣಗಳು ಸಹ ಎಸಿಬಿ ಅಧಿಕಾರಿಗಳ ಕಣ್ಣಿಗೆ ಬಿದ್ದಿದೆ.
ಬಿಡಿಎ ಕಚೇರಿಗಳಲ್ಲಿ ಏಜೆಂಟರಂತೆ ಕೆಲಸ ಮಾಡುತ್ತಿರುವ ಚಾಮರಾಜಪೇಟೆಯ ರಘು ಬಿ.ಎನ್., ಆರ್.ಟಿ.ನಗರದ ಮನೋರಾಯನಪಾಳ್ಯದ ಮೋಹನ್, ದೊಮ್ಮಲೂರಿನ ಮನೋಜ್, ಮಲ್ತಳ್ಳಿಯ ಕೆನಗುಂಟೆ ಮುನಿರತ್ನ(ರತ್ನವೇಲು), ಆರ್.ಆರ್.ನಗರದ ತೇಜಸ್ವಿ, ಮುದ್ದಿನಪಾಳ್ಯದ ಕೆ.ಜಿ. ಸರ್ಕಲ್​ನ ಅಶ್ವತ್, ಬಿಡಿಎ ಬಡಾವಣೆಯ ಚಾಮುಂಡೇಶ್ವರಿನಗರದ ರಾಮ, ಲಕ್ಷ್ಮಣ, ಮುದ್ದಿನಪಾಳ್ಯದ ಚಿಕ್ಕಹನುಮ್ಮಯ್ಯ ಅವರ ಮನೆಗಳ ಮೇಲೆ ಎಸಿಬಿ ದಾಳಿಯಾಗಿದೆ. ಅಧಿಕಾರಿಗಳು ಮತಹತ್ವದ ದಾಖಲೆಗಳಿಗಾಗಿ ಶೋಧ ಮುಂದುವರಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಆರ್​ಟಿ ನಗರದ ಬ್ರೋಕರ್​ ಮೋಹನ್ ಮನೆಯಲ್ಲಿ ಭಾರಿ ಪ್ರಮಾಣದಲ್ಲಿ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತು ಪತ್ತೆ

ಪಿಯುಸಿ ನಂತ್ರ ತೆಗೆದಿದ್ದು ಜೆರಾಕ್ಸ್ ಅಂಗಡಿ​: ಬ್ರೋಕರ್​ ಆದ ಬಳಿಕ ಮಾಜಿ ಮಂತ್ರಿಯ ಲಕ್ಷುರಿ ಬಂಗಲೆ ಖರೀದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 9 =
Remember me
