ಬೆಂಗಳೂರು:ಸುಂಕದಕಟ್ಟೆಯಲ್ಲಿ ಹಾಡಹಗಲೇ ಯುವತಿಯ ಮೇಲೆ ಆ್ಯಸಿಡ್​ ದಾಳಿ ನಡೆಸಿ, ತಮಿಳುನಾಡಿನಲ್ಲಿ ತಲೆಮರೆಸಿಕೊಂಡು 16 ದಿನಗಳ ಬಳಿಕ ಪೊಲೀಸರ ಕೈಗೆ ಸಿಕ್ಕಿಬಿದ್ದ ಆರೋಪಿ ನಾಗೇಶ್​ ಕೊನೆಗೂ ತಾನು ಮಾಡಿದ್ದು ಬಹಳ ದೊಡ್ಡ ತಪ್ಪು ಎಂದು ಪಶ್ಚಾತಾಪದ ಮಾತುಗಳಾಡಿದ್ದಾನೆ.
ಕಾಮಾಕ್ಷಿಪಾಳ್ಯ ಪೊಲೀಸರು ಆರೋಪಿ ಆ್ಯಸಿಡ್ ನಾಗನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ನಾನು ದೊಡ್ಡ ಪ್ರಮಾದ ಮಾಡಿದೆ. ಆ ಹುಡುಗಿಗೆ ಆ್ಯಸಿಡ್ ಹಾಕಬೇಕು ಅಂತ ಕನಸು, ಮನಸಲ್ಲೂ ಯೋಚಿಸಿರಲಿಲ್ಲ. ನಾನು ಇಂತಾ ಅನ್ಯಾಯ ಮಾಡಬಾರದಿತ್ತು. ನಾನು ಮಾಡಿರೋದು ತಪ್ಪು ಎಂದು ಪೊಲೀಸ್ ಕಸ್ಟಡಿ ವೇಳೆ ನಾಗೇಶ್​ ಪಶ್ಚಾತ್ತಾಪದ ಮಾತುಗಳನ್ನು ಆಡಿದ್ದಾನೆ.
ನನಗೆ ಸಿಗದಿದ್ದು, ಬೇರೆಯವರಿಗೆ ಸಿಗಬಾರದು ಅನ್ನೋ ಕಾರಣಕ್ಕೆ ಆ್ಯಸಿಡ್​ ಹಾಕಿಬಿಟ್ಟೆ. ಹಾಕಿದ ಮರುಕ್ಷಣ ಮನಪರಿವರ್ತನೆ ಆಯ್ತು, ಹೆದರಿಕೆಯು ಆಯ್ತು. ಅದರಿಂದ ಊರು ಬಿಟ್ಟೆ. ನನಗಿದು ಕಡಿಮೆ ಶಿಕ್ಷೆ. ಇನ್ನೂ ಹೆಚ್ಚಿನ ಶಿಕ್ಷೆ ಆಗಬೇಕು ಎಂದು ನಾಗೇಶ್ ಹೇಳುತ್ತಿದ್ದಾನೆ. ನಮ್ಮ ಅಣ್ಣ ಬೈದಿದ್ದಕ್ಕೆ ಆ ರೀತಿ ಮಾಡಿಬಿಟ್ಟೆ, ಅದು ಬಿಟ್ಟು ಬೇರೆನು ಕಾರಣ ಇಲ್ಲ. ನಾನು ನಾರ್ಮಲ್ ಆಗಬೇಕು, ತಪ್ಪು ತಿದ್ದಿಕೊಳ್ಳಬೇಕು ಅಂತ ತಮಿಳುನಾಡಿಗೆ ಹೋಗಿದ್ದೆ ಎಂದಿದ್ದಾನೆ.
ಮೊದಲು ಸಾಯೋಣ ಅನ್ಕೊಂಡೆ, ಆದ್ರೆ ಆಗ ಭಯ ಆಯ್ತು‌. ಸಾಯಲು ಮನಸ್ಸು ಬರಲಿಲ್ಲ ಎಂದಿರುವ ನಾಗೇಶ್​, ಈ ಹಿಂದೆ ನಾವು ಅಕ್ಕಪಕ್ಕದ ಮನೆಯಲ್ಲೇ ಇದ್ದೆವು. ಇಬ್ಬರ ಜಾತಿ ಬೇರೆ ಬೇರೆ ಇತ್ತು. 18 ವರ್ಷ ಇದ್ದಾಗ ಇಬ್ಬರು ಚೆನ್ನಾಗಿ ಮಾತಾಡ್ಕೊಂಡು ಇದ್ವಿ. ಆಕೆ ನನ್ನ ಜೊತೆ ಚೆನ್ನಾಗಿ ಮಾತಾಡೋದನ್ನು ನೋಡಿ ನನ್ನ ಮೇಲೆ ಲವ್ ಇದೆ ಅನ್ಕೊಂಡೆ. ಆದರೆ, ಅವಳಿಗೆ ನನ್ನ ಮೇಲೆ ಲವ್ ಇರಲಿಲ್ಲ. ನಂತರ ನಮ್ಮ ಮನೆಯವರು ಕೂಡ ಸ್ವಲ್ಪ ದೂರ ಮಾಡೋಕೆ ನೋಡಿದರು. 2020 ರಲ್ಲಿಯೂ ಆ್ಯಸಿಡ್​ ದಾಳಿ ಯೋಚನೆ ಮಾಡಿದ್ದೆ, ಆಗ ಕರೊನಾ ಬಂದಿದ್ದರಿಂದ ಓಡಾಡೋಕೆ ಆಗಿಲ್ಲ ಎಂದು ಹೇಳಿದ್ದಾನೆ.
ಕಾಲೇಜಿನಲ್ಲೂ ಯುವತಿಯ ಮೇಲೆ ಗೂಢಾಚಾರಿಕೆ ಮಾಡಿಸಿರುವುದಾಗಿ ನಾಗೇಶ್ ಇದೇ ಸಂದರ್ಭದಲ್ಲಿ ಒಪ್ಪಿಕೊಂಡಿದ್ದಾನೆ. ಯಾರಾದರೂ ಆಕೆಯನ್ನ ನೋಡಿದ್ರೆ, ಮಾತಾಡಿದ್ರೆ ಮತ್ತು ಆಕೆಯ ತಂಟೆಗೆ ಹೋದ್ರೆ ಸರಿಯಿರಲ್ಲ ಅಂತಾ ಎಚ್ಚರಿಕೆ ಮಾಡಿದ್ದನಂತೆ. ಇದಾದ ಬಳಿಕ ಇತ್ತೀಚಿಗೆ ಮದುವೆ ಪ್ರಸ್ತಾಪ ಇಟ್ಟಿದ್ದ. ಆದ್ರೆ, ಅದಕ್ಕೆ ಯುವತಿ ಒಪ್ಪಲಿಲ್ಲ. ಅಲ್ಲದೆ, ನನ್ನ ಅಣ್ಣನಿಗೆ ಹೇಳಿ ನಿಂದಿಸಿದ್ದರಿಂದ ಅತಿರೇಕಕ್ಕೆ ಒಳಗಾಗಿ ತಪ್ಪು ಮಾಡಿಬಿಟ್ಟೆ. ಇನ್ನೂ ಯಾವ ಕಾರಣಕ್ಕೂ ಇಂತಹ ತಪ್ಪು ಮಾಡಲ್ಲ. ಶಿಕ್ಷೆ ಅನುಭವಿಸಿಕೊಂಡು, ಒಳ್ಳೆಯವನಾಗಬೇಕು. ಇನ್ನೂ ಮದುವೆನೂ ಆಗಲ್ಲ, ನನ್ನ ಪಾಡಿಗೆ ನಾನು ಇದ್ಬಿಡ್ತಿನಿ ಎಂದು ಆ್ಯಸಿಡ್ ನಾಗ ತಿಳಿಸಿದ್ದಾನೆ.(ಏಜೆನ್ಸೀಸ್​)
PSI ಹುದ್ದೆ ನೇಮಕಾತಿಯಿಂದ ವಂಚಿತರಾದ ಅಭ್ಯರ್ಥಿಗಳಿಂದ HDK ಕಾರಿಗೆ ಮುತ್ತಿಗೆ ಹಾಕಲು ಯತ್ನ

ನಾನೇ ನೋಡಲಾಗದಂತಹ ಸಿನಿಮಾಗಳನ್ನೂ ಮಾಡಿದ್ದೇನೆ: ನೋವಿನ ಸಂಗತಿ ಬಿಚ್ಚಿಟ್ಟ ನಟಿ ಸೊನಾಲಿ ಬೇಂದ್ರೆ!

ತುಮಕೂರು ಜಿಲ್ಲಾ BJP ಮುಖಂಡನ ಕೊಲೆಗೆ ಯತ್ನ: ಇಬ್ಬರು ಇಂಜಿನಿಯರ್​ ಸಸ್ಪೆಂಡ್​, ತಲೆಮರೆಸಿಕೊಂಡವನಿಗಾಗಿ ಶೋಧ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − two =
Remember me
