ಬೆಂಗಳೂರು:ರಾಜಕಾರಣದಿಂದ ಅಂತರ ಕಾಯ್ದುಕೊಂಡಿರುವುದು ಮಾತ್ರವಲ್ಲದೇ ಸಾರ್ವಜನಿಕವಾಗಿಯೂ ಎಲ್ಲೂ ಕಾಣಿಸಿಕೊಳ್ಳದ ಮೋಹಕ ತಾರೆ ರಮ್ಯಾ ಮತ್ತೆ ರಾಜ್ಯ ರಾಜಕಾರಣಕ್ಕೆ ಮರುಪ್ರವೇಶ ಮಾಡ್ತಾರಾ? ಎಂಬುದು ರಾಜಕೀಯ ವಲಯದಲ್ಲಿ ಬಹು ಚರ್ಚಿತ ವಿಷಯವಾಗಿದೆ. ಮತ್ತೆ ರಾಜಕೀಯದಲ್ಲಿ ಸಕ್ರೀಯರಾಗಲು ರಮ್ಯಾ ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆ ಕುರಿತಾದ ಒಂದು ವರದಿ ಇಲ್ಲಿದೆ.
ರಮ್ಯಾ ಅವರ ರಾಜಕೀಯ ರೀ ಎಂಟ್ರಿಗೆ ಪ್ರಭಾವಿ ನಾಯಕರೊಬ್ಬರಿಂದ ಪ್ರಯತ್ನ ನಡೆಯುತ್ತಿದೆ ಎಂಬ ವಿಚಾರ ರಾಜಕೀಯ ಪಡಸಾಲೆಯಿಂದ ಕೇಳಿಬಂದಿದೆ. ಮಂಡ್ಯ ರಾಜಕೀಯಕ್ಕೆ ರಮ್ಯಾರನ್ನು ಮತ್ತೆ ಕರೆತರಲು ದೊಡ್ಡ ಪ್ರಯತ್ನಗಳಾಗುತ್ತಿದ್ದು, ಆಷಾಡದ ಬಳಿಕ ರಾಜಕಾರಣದಲ್ಲಿ ಸಕ್ರೀಯರಾಗಲು ಸಿದ್ಧತೆ ನಡೆಸುತ್ತಿದ್ದಾರೆಂದು ಚರ್ಚೆಯಾಗುತ್ತಿದೆ.
ಹಾಗಾದ್ರೆ ರಮ್ಯಾರನ್ನು ಮತ್ತೆ ಮಂಡ್ಯ ರಾಜಕೀಯಕ್ಕೆ ಕರೆತರಲು ಯತ್ನಿಸುತ್ತಿರುವ ಆ ಪ್ರಭಾವಿ ನಾಯಕ ಯಾರಿರಬಹುದು ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಮುಂದಿದೆ. ಆ ಪ್ರಭಾವಿ ನಾಯಕ ಕಾಂಗ್ರೆಸ್​ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಎನ್ನಲಾಗುತ್ತಿದೆ. ರಾಜಕಾರಣಕ್ಕೆ ಮತ್ತೆ ಬರುವಂತೆ ರಮ್ಯಾ ಅವರನ್ನು ಡಿಕೆಶಿ ಮನವೊಲಿಸುತ್ತಿದ್ದಾರೆಂದು ತಿಳಿದುಬಂದಿದೆ. ಮಂಡ್ಯದಿಂದ ರಮ್ಯಾರನ್ನು ಕಣಕ್ಕಿಳಿಸಲು ಡಿಕೆಶಿ ಹೊಸ ಪ್ಲಾನ್​ ರೂಪಿಸಿದ್ದಾರೆ.
ವಿಧಾನಸಭೆ ಅಥವಾ ಲೋಕಸಭೆ ಚುನವಣೆಯಲ್ಲಿ ಕಣಕ್ಕಿಳಿಸಲು ಡಿಕೆಶಿ ಯೋಜನೆ ರೂಪಿಸಿದ್ದಾರೆ. ಅಲ್ಲದೆ, ಈಗಾಗಲೇ ರಮ್ಯಾರನ್ನು ಡಿಕೆಶಿ ಮನವೊಲಿಸಿದ್ದಾರೆ ಎಂಬ ಮಾಹಿತಿಯು ಕೇಳಿಬಂದಿದೆ. ರಮ್ಯಾ ಕೂಡ ರಾಜಕೀಯಕ್ಕೆ ರೀ ಎಂಟ್ರಿ ಕೊಡಲು ರಮ್ಯಾ ಅವರು ತಯಾರಿ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಒಂದು ಕಡೆ ಸಿದ್ದರಾಮಯ್ಯ ಬಣ ಸುಮಲತಾ ಅವರನ್ನು ಕಾಂಗ್ರೆಸ್​ಗೆ ಕರೆತರಲು ಪ್ರಯತ್ನ ನಡೆಸುತ್ತಿದೆ. ಇನ್ನೊಂದೆಡೆ ಡಿಕೆಶಿ ಅಂಡ್​ ಟೀಮ್​ ಅವರು ತಮ್ಮದೆಯಾದ ತಂತ್ರವನ್ನು ರೂಪಿಸಿ ರಮ್ಯಾರನ್ನು ರಾಜಕೀಯಕ್ಕೆ ಕರೆತರಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಎಐಸಿಸಿಯಲ್ಲಿ ರಾಹುಲ್​ಗೆ ಆತ್ಮೀಯವಾಗಿರುವ ರಮ್ಯಾ ಮತ್ತೆ ರಾಜ್ಯ ರಾಜಕಾರಣಕ್ಕೆ ಮರಳುತ್ತಾರೆ ಎಂಬ ಚರ್ಚೆಯು ಆಗುತ್ತಿದೆ.(ದಿಗ್ವಿಜಯ ನ್ಯೂಸ್​)
ದರ್ಶನ್‌ ಹೆಸರಲ್ಲಿ ವಂಚನೆ ಯತ್ನ ಕೇಸ್‌: ಆರೋಪಿ ಅರುಣಾ ಕುಮಾರಿಯ ಅಸಲಿ ಮುಖವಾಡ ಬಯಲು!

ಅವರ್ ಬಿಟ್, ಇವರ್ ಬಿಟ್, ಇವನ್ಯಾರು? ಹೊಸ ಆಡಿಯೋದಲ್ಲಿ ಕೇಳಿಬಂತು ಮತ್ತೊಬ್ಬನ ಹೆಸರು

ಮುಂದಿನ ಚುನಾವಣೆಗೆ ಮುಳ್ಳುಗುತ್ತಾ ಮಾಜಿ ಸಿಎಂ ಅಖಿಲೇಶ್​ ಯಾದವ್​ರ ಆ ಒಂದು ಹೇಳಿಕೆ?!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
