ಆನೇಕಲ್:ಖ್ಯಾತ ರಾಜಕಾರಣಿಯೊಬ್ಬರಿಗೆ ಅಲಯನ್ಸ್ ಯೂನಿವರ್ಸಿಟಿಯ ವಿವಾದಿತ ಆಸ್ತಿ ಮಾರಾಟ ಮಾಡಲು ಯತ್ನಿಸಿ, ಯೂನಿವರ್ಸಿಟಿಯಲ್ಲಿ ಗುಂಪು ಕಟ್ಟಿಕೊಂಡು ಬಂದು ಗಲಾಟೆ ಮಾಡಿದ ಆರೋಪದ ಮೇಲೆ ಸ್ಯಾಂಡಲ್​ವುಡ್​ ಸ್ಟಾರ್​ ನಟಿ ಶ್ರೀಲೀಲಾ ಅವರ ತಾಯಿ ಸ್ವರ್ಣಲತಾ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ
ನೂರಾರು ಕೋಟಿ ರೂಪಾಯಿ ವ್ಯವಹಾರ ಮಾಡಲು ಹೋದ ಸ್ವರ್ಣಲತಾ ಅವರು ಇದೀಗ ಪೊಲೀಸ್​ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಸ್ವರ್ಣಲತಾ ಅವರು ಖ್ಯಾತ ರಾಜಕಾರಣಿಗೆ ಅಲಯನ್ಸ್ ವಿವಿ ಮಾರಾಟ ಮಾಡಿಸಲು ಮುಂದಾಗಿದ್ದರು. ಈಗಾಗಲೇ ಯೂನಿವರ್ಸಿಟಿಯಿಂದ ಹೊರಬಿದ್ದಿರುವ ಮಧುಕರ್ ಅಂಗೂರ್​ರಿಂದ ಯುನಿವರ್ಸಿಟಿ ಮಾರಾಟಕ್ಕೆ ಸ್ವರ್ಣಲತಾ ಡೀಲ್ ಕುದುರಿಸಿದ್ದರು. ಆದ್ರೆ, ಸೆಷನ್ಸ್ ಕೋರ್ಟ್ ಹಾಗೂ ಹೈಕೋರ್ಟ್ ಆದೇಶದ ಮೇರೆಗೆ ಮಧುಕರ್​ರನ್ನು ಯೂನಿವರ್ಸಿಟಿಯಿಂದ ಹೊರಹಾಕಲಾಗಿದೆ.
ಮಧುಕರ್ ಅಂಗೂರ್​ನಿಂದ ರಾಜಕಾರಣಿಗೆ ವಿವಿ ಮಾರಾಟದ ಡೀಲ್ ಕುದುರಿತ್ತು. ಆದರೆ, ಅಲಯನ್ಸ್ ಯುನಿವರ್ಸಿಟಿ ಮಾತ್ರ ಮಧುಕರ್ ಅಂಗೂರ್ ವಶದಲ್ಲಿ ಇರಲಿಲ್ಲ. ಇದರ ನಡುವೆ ಕೆಲ ಗೂಂಡಾಗಳನ್ನು ಕರೆದುಕೊಂಡು ಯೂನಿವರ್ಸಿಟಿ ಒಳಗೆ ನುಗ್ಗಿ, ಮಧುಕರ್ ಹಾಗೂ ಸ್ವರ್ಣಲತಾ ಗಲಾಟೆ ಮಾಡಿರುವ ಆರೋಪ ಕೇಳಿಬಂದಿದೆ. ಸೆ.10ರಂದು ಬೆಳಗ್ಗೆ 11 ಗಂಟೆಗೆ ಯುನಿವರ್ಸಿಟಿ ಅಡ್ಮಿನ್ ಬ್ಲಾಕ್ ಎಂಟ್ರಿಯಾಗಿ ಗಲಾಟೆ ಮಾಡಿದ್ದಾರೆಂದು ಹೇಳಲಾಗಿದೆ.
ಮಧುಕರ್ ಹಾಗೂ ಸ್ವರ್ಣಲತಾ ಗುಂಪು ಕಟ್ಟಿಕೊಂಡು, ಬಂದೂಕು ಹಿಡಿದುಕೊಂಡು ಬಂದು ಯೂನಿವರ್ಟಿಗೆ ಒಳಗೆ ಇದ್ದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿ, ಗಲಾಟೆ ಮಾಡಿರುವ ಆರೋಪ ಕೇಳಿಬಂದಿದ್ದು, ಗುಂಪು ಕಟ್ಟಿಕೊಂಡು ಬಂದಿದ್ದ ಎಲ್ಲರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಯುನಿವರ್ಸಿಟಿಯ ರಿಜಿಸ್ಟ್ರಾರ್​ ಡಾ. ನಿವೇದಿತಾ ಮಿಶ್ರಾ ಅವರು ಆನೇಕಲ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.
ಇತ್ತ ಎಫ್ಐಆರ್ ದಾಖಲಾಗುತ್ತಿದ್ದಂತೆ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಪರಾರಿಯಾಗಿದ್ದು, ಸ್ವರ್ಣಲತಾ ಅವರಿಗಾಗಿ ಆನೇಕಲ್ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಸ್ವರ್ಣಲತಾ ಅವರು ಖ್ಯಾತ ಗೈನಕಾಲಜಿಸ್ಟ್ ಕೂಡ ಆಗಿದ್ದಾರೆ. ಆದರೆ, ರಾಜಕಾರಣಿಯೊಬ್ಬರಿಗೆ ಯುನಿವರ್ಸಿಯ ವಿವಾದಿತ ಆಸ್ತಿ ಮಾರಾಟಕ್ಕೆ ಯತ್ನಿಸಿ, ಬಂದೂಕು ಹಿಡಿದು ಗೂಂಡಾಗಳ ಜೊತೆ ಯುನಿವರ್ಸಿಟಿಗೆ ನುಗ್ಗಿ ಗಲಾಟೆ ಮಾಡುವ ಮೂಲಕ ಇದೀಗ ಪೊಲೀಸರ ಪ್ರಕರಣ ಎದುರಿಸುವಂತಾಗಿದೆ.
ಎಫ್ಆರ್ ದಾಖಲಿಸಿರುವ ಆನೇಕಲ್ ಪೊಲೀಸರು ಸದ್ಯ ಡಾ.ಮಧುಕರ್ ಅಂಗೂರ್​ನನ್ನು ಬಂಧಿಸಿದ್ದಾರೆ. ಮಧುಕರ್ ಅಂಗೂರ್ ಜೊತೆ ಗೂಂಡಾಗಿರಿ ಮಾಡಿದ ಕೆಲವರನ್ನೂ ಅರೆಸ್ಟ್ ಮಾಡಲಾಗಿದೆ. ಆದರೆ, ಆರೋಪಿ ನಂಬರ್ 2 ಆಗಿರುವ ಡಾ.ಸ್ವರ್ಣಲತಾ ಮಾತ್ರ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.(ಏಜೆನ್ಸೀಸ್​)
ವಿರಾಮದ ವೇಳೆ ಜವರಾಯನ ಅಟ್ಟಹಾಸ: ಮಂಗಳೂರು ಮೂಲದ ಮಲಯಾಳಿ ವೈದ್ಯೆ ಪುಣೆಯಲ್ಲಿ ದುರ್ಮರಣ

ಬೈಕ್​ ಮೇಲೆ ಕುಳಿತು ಪ್ರಯಾಣ ಮಾಡಿದ ಗೂಳಿ! ನೀವು ಇದುವರೆಗೂ ನೋಡಿರದ ವಿಡಿಯೋ ಇದು…

1 ಕೋಟಿ ರೂ. ಮೌಲ್ಯದ ಮರ್ಸಿಡೆಸ್​ ಕಾರಿಗೆ ಬೆಂಕಿಯಿಟ್ಟ ಗಾರೆ ಕೆಲಸದ ಮೇಸ್ತ್ರಿ! ಕಾರಣ ಹೀಗಿದೆ…

Sign in to your account
Please enter an answer in digits:19 + eighteen =
Remember me
