ಬಾಗಲಕೋಟೆ:ಬಾದಾಮಿ ತಾಲೂಕಿನ ಕೆರೂರು ಗ್ರಾಮದಲ್ಲಿ ನಡೆದ ಗುಂಪು ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಅಲೋಕ್​ ಕುಮಾರ್ ಅವರು​ ನಿನ್ನೆ (ಜುಲೈ 20) ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ಸಂದರ್ಭದಲ್ಲಿ ಕೆರೂಡಿ ಖಾಸಗಿ ಆಸ್ಪತ್ರೆಗೆ ತೆರಳಿ ಘರ್ಷಣೆಯಲ್ಲಿ ಗಾಯಗೊಂಡವರ ಆರೋಗ್ಯವನ್ನು ವಿಚಾರಿಸಿದರು. ಅಲ್ಲದೆ, ಗಾಯಾಳುಗೆ ಬಸವಣ್ಣನವರ ವಚನವನ್ನು ಭೋದನೆ ಮಾಡಿದರು.
ಬಾಗಲಕೋಟೆ ನಗರದ ಕೆರೂಡಿ ಆಸ್ಪತ್ರೆಗೆ ಭೇಟಿ ನೀಡಿದ ಅಲೋಕ್​ ಕುಮಾರ್​, ಗಾಯಾಳು ಅರುಣ ಕಟ್ಟಿಮನಿಗೆ ಬಸವಣ್ಣನವರ ವಚನ ಹೇಳಿದರು. ಬಸವಣ್ಣನವರು ಐಕ್ಯವಾದ ಕ್ಷೇತ್ರ ಇಲ್ಲೇ ಇದೆ. ದಯವೇ ಧರ್ಮದ ಮೂಲವಯ್ಯ ಎಂದು ಬಸವಣ್ಣನವರು ಹೇಳಿದ್ದಾರೆ. ಆದರೆ, ಧರ್ಮದ ಹೆಸರಲ್ಲಿ ಗಲಾಟೆಗಳಾಗುತ್ತಿವೆ. ಬಸವಣ್ಣನವರನ್ನು ನಾವು ಮರೆತುಬಿಟ್ಟಿದ್ದೇವೆ. ಬಸವಣ್ಣನವರ ವಚನ ಪಾಲಿಸುವ ಮೂಲಕ ಶಾಂತಿಯಿಂದ ಇರಬೇಕೆಂದು ಹೇಳಿದರು.
ಗಾಯಾಳು ಅರುಣನನ್ನು ಉದ್ದೇಶಿಸಿ, ನಿನ್ನ ವಯಸ್ಸು ಎಷ್ಟು? ಮದುವೆ ಆಗಿದೆಯಾ ಎಂದು ಅಲೋಕ್​ ಕುಮಾರ್​ ಪ್ರಶ್ನಿಸಿದರು. ಯಾಕೆ ಮದುವೆ ಆಗಿಲ್ಲ? ಮದುವೆ ಮಾಡಿಕೊಳ್ಳಿ. ಇಲ್ಲ ನಾವೇ ಮಾಡಿಸಬೇಕಾ? ಪೊಲೀಸ್​ನವರು ಮಾಡಿಸ್ತಿವಿ. ಮದುವೆ ಆದರೆ ನಿಮಗೆ ಪ್ರಪಂಚ ಅರ್ಥ ಆಗುತ್ತದೆ. ಹೆಂಡತಿ ಮಕ್ಕಳು ಬಂದ್ರೆ ಎಲ್ಲ ಗೊತ್ತಾಗುತ್ತದೆ. ಈಗ ಹಿಂದೆ-ಮುಂದೆ ಯಾರು ಇಲ್ಲದೇ ಇರೋದಕ್ಕೆ ಹೀಗಾಗುತ್ತಿದೆ. ಮದುವೆ ಆದರೆ, ಹೆಂಡತಿ ಮಕ್ಕಳನ್ನು ಯಾರು ನೋಡಿಕೊಳ್ತಾರೆ ಎಂದು ನೆನಪಾಗುತ್ತದೆ. ಆಗ ಇಂತವೆಲ್ಲ ಕಡಿಮೆಯಾಗುತ್ತವೆ. ಹೀಗಾಗಿ ಮದುವೆ ಆಗಿ ಎಂದು ಚಾಕು ಇರಿತಕ್ಕೆ ಒಳಗಾದ ಅರುಣ ಹಾಗೂ ಸ್ನೇಹಿತನಿಗೆ ಹಾಸ್ಯ ಮಾಡುತ್ತಲೇ ಅಲೋಕ್​ ಕುಮಾರ್​ ಅವರು ಸಲಹೆ ನೀಡಿದರು.
ಇದೇ ವೇಳೆ ಅಲೋಕ್​ ಕುಮಾರ್​ ಅವರು ವೈದ್ಯರ ಜತೆ ಚರ್ಚಿಸಿದರು. ಬಾಗಲಕೋಟೆ ನಗರದ ಮಿರ್ಜಿ ಆಸ್ಪತ್ರೆ ವೈದ್ಯರ ಜೊತೆಗೆ ಚರ್ಚೆ ಮಾಡಿದರು. ಘಟನೆ ವೇಳೆ ನಾನು ಸ್ಥಳದಲ್ಲಿ ಇದ್ದಿದ್ರೆ ಬಾರಿಸಿ ಬಿಡ್ತಿದ್ದೆ. ನಾನು ಸುಮಾರು ಸಾರಿ ಬಂದಾಗ ಬಾಗಲಕೋಟೆ ಶಾಂತವಾಗಿಯೇ ಇತ್ತು. ಹುನಗುಂದ ಕೋ ಆಪ್ ರೇಟಿವ್ ಗಲಾಟೆ ಆದಾಗ ಒಮ್ಮೆ ಇಲ್ಲಿಗೆ ಬಂದಿದ್ದೆ. ಕೂಡಲಸಂಗಮವನ್ನು ಇಲ್ಲೆ ಇಟ್ಕೊಂಡು ಬಸವಣ್ಣನವರನ್ನೇ ಮರೆತು ಬಿಟ್ಟಿದ್ದಾರೆ. ಬಸವಣ್ಣನವರ ತತ್ವಾದರ್ಶ ಮರೆತು ಎಲ್ಲರು ಗಲಾಟೆ, ಗದ್ದಲ ಮಾಡ್ತಿದ್ದಾರೆ. ದಯವೇ ಧರ್ಮದ ಮೂಲವಯ್ಯ, ದಯವೇ ಬೇಕು ಸಕಲ ಪ್ರಾಣಿಗಳಿಗೆಲ್ಲ. ಹೀಗಂತ ಬಸವಣ್ಣನವರು ಹೇಳಿದ್ರು ಅದೆಲ್ಲಾ ಈಗ ಎಲ್ಲಿ ಹೋಯ್ತು? ಎಲ್ಲರೂ ಬಸವಣ್ಣನವರ ಮರೆತೆ ಬಿಟ್ಟಿದ್ದಾರೆ, ಕೂಡಲಸಂಗಮ ಇಲ್ಲೇ ಇದೆ. ಮಂಗಳೂರಿಗೆ ಕೂಡಲಸಂಗಮ ದೂರ ಆಗುತ್ತೆ. ಆದ್ರೆ, ಬಾಗಲಕೋಟೆಗೆ ಕೂಡಲಸಂಗಮ ಹತ್ತಿರ ಇದೆ. ಹತ್ತಿರ ಇಟ್ಕೊಂಡೇ ಇಲ್ಲಿಯವರು ಎಲ್ಲ ಮರೆತಿದ್ದಾರೆ ಎಂದು ಆಸ್ಪತ್ರೆಯಲ್ಲಿ ವೈದ್ಯರ ಜೊತೆ ಚರ್ಚೆ ವೇಳೆ ಅಲೋಕ್​ ಕುಮಾರ್​ ಬಸವಣ್ಣನವರನ್ನ ಸ್ಮರಿಸಿದರು.
ಅಲೋಕ್​ ಕುಮಾರ್​ ಅವರು ಘಟನೆ ಹಾಗೂ ಆರೋಗ್ಯದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು. ಬಾಗಲಕೋಟೆ ನಗರದಲ್ಲಿರುವ ಮೂರು ಆಸ್ಪತ್ರೆಗಳಿಗೆ ಭೇಟಿ ನೀಡಿದರು. ಮಿರ್ಜಿ ಆಸ್ಪತ್ರೆಯಲ್ಲಿ ಗೋಪಾಲ ದಾಸಮನಿ ಆರೋಗ್ಯ ವಿಚಾರಿಸಿ, ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಅಲೋಕ್​ ಕುಮಾರ್​ ಮುಂದೆ ಗೋಪಾಲ ತಾಯಿ ಕಣ್ಣೀರು ಹಾಕಿದರು. ನಮಗೆ ಜೀವಭಯ ಇದೆ ರಕ್ಷಣೆ ನೀಡಿ ಎಂದು ಕಣ್ಣೀರು ಹಾಕಿದರು. ಆರೋಪಿಗಳನ್ನು ಬೇಗ ಬಂಧಿಸಿ ಎಂದು ಕೈ ಮುಗಿದರು.(ದಿಗ್ವಿಜಯ ನ್ಯೂಸ್​)
ಮಲಯಾಳಂ ಸ್ಟಾರ್​ ನಟನ ಜತೆ ನಿತ್ಯಾ ಮೆನನ್​ ಮದುವೆ? ಮಲಯಾಳಂ ಬ್ಯೂಟಿ ಕೊಟ್ಟ ಸ್ಪಷ್ಟನೆ ಹೀಗಿದೆ…

ವಿಶ್ರಾಂತಿಯಲ್ಲಿ ಸುದೀಪ್: ಕರೊನಾ ಅಲ್ಲ ವೈರಲ್ ಫೀವರ್ ಎಂದ ಜಾಕ್ ಮಂಜು

13,800 ಸರ್ಕಾರಿ ಶಾಲೆ ಮುಚ್ಚಲು ನಡೆದಿದೆ ಹುನ್ನಾರ: ಕನ್ನಡ ಪರ, ವಿದ್ಯಾರ್ಥಿ ಸಂಘಟನೆಗಳ ಆರೋಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
