ವಿಜಯಪುರ:ಗುಮ್ಮಟನಗರಿ ವಿಜಯಪುರ ಅಪರೂಪದ ಮದುವೆಗೆ ಸಾಕ್ಷಿಯಾಗಿದೆ. ಅಮೆರಿಕ ವಧು ಹಾಗೂ ವಿಜಯಪುರದ ವರನ ನಡುವೆ ಅದ್ಧೂರಿ ವಿವಾಹ ನೆರವೇರಿದೆ. ಈ ಅಪರೂಪದ ಪ್ರೇಮ ವಿವಾಹದ ಕಂಪ್ಲೀಟ್​ ಸ್ಟೋರಿ ಇಲ್ಲಿದೆ.
ಉತ್ತರ ಅಮೆರಿಕದ ಕೆನಡಾ ದೇಶದ ಸಾರಾ ಹಾಗೂ ವಿಜಯಪುರ ನಿವಾಸಿ ರವಿಕುಮಾರ್ ಚಿಮ್ಮಲಗಿ ಶಾಸ್ತ್ರೋಕ್ತವಾಗಿ ಮದುವೆ ಆಗಿದ್ದಾರೆ. ವಿಜಯಪುರ ನಗರದಲ್ಲಿನ ಹೊಟೆಲ್ ಟೌನ್ ಪ್ಯಾಲೇಸ್​ನಲ್ಲಿ ಅದ್ದೂರಿ ಮದುವೆ ನಡೆದಿದೆ.
ಕೆನಡಾದ ಸಾಫ್ಟವೇರ್ ಕಂಪನಿಯಲ್ಲಿ ಸಾರಾ ಹಾಗೂ ರವಿಕುಮಾರ್ ಕೆಲಸ ಮಾಡುತ್ತಿದ್ದರು. ರವಿಕುಮಾರ್ ವಿಜಯಪುರದ ವಿಶ್ವನಾಥ ಚಿಮ್ಮಲಗಿ ಹಾಗೂ ಶೋಭಾ ದಂಪತಿಗಳ ಪುತ್ರ. ಸಾರಾ ಕೆನಡಾದ ರೋಜ್ಮೇರಿ ಪ್ಲಾಟ್ ಹಾಗೂ ಹ್ಯಾರಿ ಪೋಲಾರ್ಡ್ ದಂಪತಿಯ ಪುತ್ರಿ.
ರವಿಕುಮಾರ್ ಹಲವು ವರ್ಷಗಳಿಂದ ಕೆನಡಾದಲ್ಲಿ ನೆಲೆಸಿದ್ದಾರೆ. ಸಾಫ್ಟ್​ವೇರ್ ಕಂಪನಿಯಲ್ಲಿ ಕೆಲಸ ಮಾಡುವಾಗ ಸಾರಾ ಹಾಗೂ ರವಿಕುಮಾರ್ ನಡುವೆ ಪ್ರೇಮಾಂಕುರವಾಗಿತ್ತು. ಎರಡು ಕುಟುಂಬಗಳು ಪರಸ್ಪರ ಒಪ್ಪಿಕೊಂಡು ಹಿಂದು ಸಂಪ್ರದಾಯದಂತೆ ಮದುವೆ ಮಾಡಿಕೊಂಡಿದ್ದಾರೆ. ಸಾರಾ ಹಿಂದೂ ಸಂಪ್ರದಾಯಕ್ಕೆ ಮನಸೋತಿದ್ದಾರೆ.(ದಿಗ್ವಿಜಯ ನ್ಯೂಸ್​)
ಒಂದೇ ರೂಮಿನಲ್ಲಿ ನರೇಶ್ ಜತೆ ಸಿಕ್ಕಿಬಿದ್ದ​ ಪವಿತ್ರಾ​ಗೆ ಒಂದರ ಹಿಂದೆ ಮತ್ತೊಂದು ಆಘಾತ!

ದಯವಿಟ್ಟು ನನ್ನ ಮಗನಿಗೆ ಯಾರೂ ಸಾಲ ಕೊಡ್ಬೇಡಿ… ಸುಳ್ಳು ಹೇಳಿ ಜನರಿಗೆ ಮೋಸ ಮಾಡ್ತಿದ್ದಾನೆ: ಮಾಜಿ ಶಾಸಕ ಮನವಿ

ಹಿಂದು ದೇವರ ಫೋಟೋ ಇರುವ ಪೇಪರ್​ನಲ್ಲಿ ಮಾಂಸ ಪ್ಯಾಕಿಂಗ್​: ಅನ್ಯಧರ್ಮದ ವ್ಯಕ್ತಿಯ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + one =
Remember me
