ಬೆಂಗಳೂರು:ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣದಲ್ಲಿ ದಿನಕ್ಕೊಂದು ಸಂಗತಿಗಳ ಬೆಳಕಿಗೆ ಬರುತ್ತಿವೆ. ಅನಂತರಾಜು ಪತ್ನಿ ಸುಮಾ ಹಾಗೂ ರೇಖಾ ನಡುವೆ ನಡೆದಿದ್ದ ನಾಲ್ಕೈದು ಆಡಿಯೋ ರೆಕಾರ್ಡ್​ಗಳು ಈ ಹಿಂದೆ ಸೋರಿಕೆಯಾಗಿತ್ತು. ಆಡಿಯೋದಲ್ಲಿ ಅನಂತರಾಜು ಡೆತ್​ನೋಟ್​ ಬರೆದಿಟ್ಟಿದ್ದಾರೆ ಎಂದು ಸುಮಾ ಹೇಳಿದ್ದರು. ಇದೀಗ ಆ ಡೆತ್​ನೋಟ್ ಮಾಧ್ಯಮಳಿಗೆ ಲಭ್ಯವಾಗಿದೆ. ​
ಒಂದು ಡೆತ್​ನೋಟ್​ನಲ್ಲಿ ಪತ್ನಿ ಸುಮಾ ಉದ್ದೇಶಿಸಿ ಬರೆಯಲಾಗಿದೆ. ಮತ್ತೊಂದರಲ್ಲಿ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ಗೆ ಬರೆಯಲಾಗಿದ್ದು, ಆ ಎರಡು ಡೆತ್​ನೋಟ್​ಗಳ ಸಾರಾಂಶ ಈ ಕೆಳಕಂಡಂತಿದೆ.
ಪ್ರಿಯ ಸುಮಾ, ಕ್ಷಮಿಸಿಬಿಡು ನಿನಗೆ ಮೋಸ ಮಾಡಿದ್ದೇನೆ. ನಿನ್ನಿಂದ ಕ್ಷಮೆ ಕೇಳಲು ನಾನು ಅರ್ಹನಲ್ಲ. ರೇಖಾ ಎಂಬ ಕೆ.ಆರ್.ಪುರ ಹೆಣ್ಣಿನ ಸಹವಾಸ ಮಾಡಿ ಅವಳಿಂದ ಫೋಟೋ ವಿಡಿಯೋಗಳ ಟ್ರ್ಯಾಪ್​​ಗೆ ಸಿಲುಕಿ, ಬ್ಲಾಕ್​ಮೇಲ್ ಮಾಡಿಸಿಕೊಂಡು ನಿನಗೆ ಮುಖ ತೋರಿಸಲು ಸಾಧ್ಯವಾಗ್ತಿಲ್ಲ. ತೃಪ್ತಿ, ತನ್ಮಯಿ ಹಾಗೂ ಅಭಯರನ್ನು ಚೆನ್ನಾಗಿ ನೋಡಿಕೋ ಎಂದು ಸುಮಾ ಉದ್ದೇಶಿಸಿ ಬರೆಯಲಾಗಿದೆ.

ಇನ್ನೊಂದು ಡೆತ್​ನೋಟ್​ನಲ್ಲಿ ಪೊಲೀಸ್ ಇನ್ಸ್​ಪೆಕ್ಟರ್​ ಅವರಿಗೆ ಕೆ.ಆರ್.ಪುರದ ರೇಖಾ ಎಂಬ ಹೆಣ್ಣಿನ ಮೋಸದ ಜಾಲಕ್ಕೆ ಸಿಲುಕಿ ಎಲ್ಲವನ್ನು ಕಳೆದುಕೊಂಡಿದ್ದೇನೆ. ಸಾಕಷ್ಟು ಹಣ ನೀಡಿದ್ದೇನೆ. ಅವಳಿಂದ ಮಾನಸಿಕ ಹಿಂಸೆ ಅನುಭವಿಸಿದ್ದೇನೆ. ಅವಳ ವಿರುದ್ಧ ಕಾನೂನು ಕ್ರಮ ವಹಿಸಬೇಕೆಂದು ಕೇಳಿಕೊಳ್ಳುತ್ತೇನೆ. ಇಂತಿ ನಿಮ್ಮ ಅನಂತರಾಜು ಎಂದು ಬರೆಯಲಾಗಿದೆ.

ಸದ್ಯ ಡೆತ್​ನೋಟ್ ಅನ್ನು ಬ್ಯಾಡರಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೇ ಡೆತ್​ನೋಟ್ ಎಂದು ಅನಂತರಾಜು ಪತ್ನಿ ಸುಮಾ ಪೊಲೀಸರಿಗೆ ನೀಡಿದ್ದಾರೆ. ಆದರೆ, ಡೆತ್​ನೋಟ್ ಬರೆದಿರುವುದು ಅನಂತರಾಜುನಾ? ಅಥವಾ ಬೇರೆಯವರಾ? ಎಂದು ಎಫ್ಎಸ್​ಎಲ್​ ಪರೀಕ್ಷೆಗೆ ಪೊಲೀಸರು ಕಳುಹಿಸಲಿದ್ದಾರೆ.
ಈ ಹಿಂದೆ ಫೋನ್ ಕಾಲ್​ನಲ್ಲಿ ಮಾತನಾಡುವಾಗ ರೇಖಾಗೆ ಸುಮಾರ ಅವಾಜ್ ಹಾಕಿದ್ದಳು. ನಿನ್ನ ಮೇಲೆ ಬರೆದಿರುವ ಡೆತ್ ನೋಟ್ ಇದೆ. ಅದನ್ನು ಕೊಟ್ಟು ನಿನ್ನನ್ನು ಜೈಲಿಗೆ ಹಾಕಿಸುತ್ತೆನೆ ಎಂದಿದ್ದರು. ಹೀಗಾಗಿ ಈ ಡೆತ್​ನೋಟ್ ಯಾವ ಸಂದರ್ಭದಲ್ಲಿ ಬರೆದಿದ್ದು ಎಂದು ಬ್ಯಾಡರಹಳ್ಳಿ ಪೊಲೀಸರು ತನಿಖೆ ನಡೆಸಲಿದ್ದಾರೆ.(ದಿಗ್ವಿಜಯ ನ್ಯೂಸ್​)
ನಾನು ವಾಟ್ಸ್​ಆ್ಯಪ್​ನಲ್ಲೇ ಹೇಳಿದ್ದೆ…ಅನಂತರಾಜು ಸಾವಿನ ಪ್ರಕರಣದಲ್ಲಿ ಮತ್ತೊಂದು ಸ್ಫೋಟಕ ಆಡಿಯೋ ಲೀಕ್​!

ಭಾವಿ ಪತಿಯನ್ನೇ ಬಂಧಿಸಿ ಲೇಡಿ ಸಿಂಗಂ ಎನಿಸಿಕೊಂಡಿದ್ದ ಪೊಲೀಸ್​ ಅಧಿಕಾರಿಯ ಅಸಲಿ ಮುಖ ಬಯಲು!

ಶವಗಾರ ಸೇರಿದ್ದ ಯುವಕನೀತ: ಕೈಕಾಲುಗಳಿಗೆ ರಾಡ್‌ ಇದ್ದರೂ ಹಾಕಿ ಸ್ಪರ್ಧೆಯಲ್ಲಿ ಗೆದ್ದು ಬೀಗಿದ ಕೊಡಗಿನ ವೀರ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:5 × 4 =
Remember me
