ಆನೇಕಲ್:ಚಾಕೋಲೆಟ್​ ಕೊಡಿಸುವ ನೆಪದಲ್ಲಿ ಮಗುವಿನ ಮೇಲೆ ಅತ್ಯಾಚಾರ ಮಾಡಿದ್ದ ಆರೋಪಿಗೆ 10 ವರ್ಷ ಜೈಲುವಾಸ ಶಿಕ್ಷೆ ವಿಧಿಸಲಾಗಿದೆ.
ಆರೋಪಿ ಲೋಕನಾಥ್ ಬಹದ್ದೂರ್, 2017 ರಲ್ಲಿ ಅತ್ತಿಬೆಲೆಯಲ್ಲಿ ಮಗುವನ್ನು ಕಿಡ್ನಾಪ್ ಮಾಡಿ ಅತ್ಯಾಚಾರ ನಡೆಸಿದ್ದ. ಮೂಲತಃ ನೇಪಾಳದವನಾದ ಆರೋಪಿ ಅತ್ತಿಬೆಲೆಯಲ್ಲಿ ವಾಚ್​ಮೆನ್ ಆಗಿ ಕೆಲಸ ಮಾಡ್ತಿದ್ದ. 2017ರಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ ಮಗುವಿಗೆ ಚಾಕೋಲೆಟ್​ ಕೊಡಿಸುವುದಾಗಿ ಕರೆದೊಯ್ದಿದ್ದ.
ಅತ್ತಿಬೆಲೆಯ ತನ್ನ ರೂಂಗೆ ಕರೆದೊಯ್ದು ಮಗುವಿನ ಮೇಲೆ ಆರೋಪಿ ಅತ್ಯಾಚಾರ ಎಸಗಿದ್ದ. ಮಗು ಅಳುವುದಕ್ಕೆ ಶುರು ಮಾಡುತ್ತಿದ್ದಂತೆ ಮಗುವಿನ ಸಮೇತ ಆರೋಪಿ ಚೆನ್ನೈಗೆ ಎಸ್ಕೇಪ್ ಆಗಿದ್ದ. ಮಗು ಕಾಣೆಯಾದ ಹಿನ್ನೆಲೆಯಲ್ಲಿ ಮಗುವಿನ ಪೊಷಕರು ಅತ್ತಿಬೆಲೆ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು.
ಆರೋಪಿಯ ಜಾಡನ್ನು ಬೆನ್ನತ್ತಿದ ಪೊಲೀಸರಿಗೆ ಆರೋಪಿ ಚೆನೈನಲ್ಲಿ ಇರೋದು ಗೊತ್ತಾಗಿತ್ತು. ಆರೋಪಿಯು ಚೆನ್ನೈನಲ್ಲಿದ್ದ ನೇಪಾಳ ಮೂಲದವರಿಗೆ ಮಗುವನ್ನು ಕೊಟ್ಟಿದ್ದ. ಬೆಂಗಳೂರಿಗೆ ಬಾರದೇ ಚೆನ್ನೈನಲ್ಲಿ ಅಡ್ಡಾಡಿಕೊಂಡಿದ್ದ. ಆರೋಪಿಯನ್ನು ಅಂದಿನ ಅತ್ತಿಬೆಲೆ ಇನ್ಸ್​ಪೆಕ್ಟರ್​ ಎಲ್​​.ವೈ. ರಾಜೇಶ್​ ಮತ್ತು ತಂಡ ಚೆನ್ನೈನಿಂದ ಬಂಧಿಸಿ ಕರೆತಂದಿತ್ತು.
ವೈಜ್ಞಾನಿಕ ಪುರಾವೆಯಲ್ಲಿ ಆರೋಪಿ ಮಗುವಿನ ಮೇಲೆ ಅತ್ಯಾಚಾರ ಎಸಗಿರುವುದು ಸಾಬೀತಾಗಿತ್ತು. ಕೃತ್ಯ ನಡೆದು ಐದು ವರ್ಷಗಳ ಸುಧೀರ್ಘ ವಿಚಾರಣೆ ನಂತರ ಆರೋಪಿಗೆ 10 ವರ್ಷ ಸಜೆ ಹಾಗೂ ಐದು ಸಾವಿರ ದಂಡ ವಿಧಿಸಲಾಗಿದೆ. ಆನೇಕಲ್ ತಾಲ್ಲೂಕು ಸತ್ರ ನ್ಯಾಯಾಲಯದ ನ್ಯಾಯಾಧೀಶ ಶ್ರೀಕಾಂತ್ ಅವರು ಈ ಆದೇಶ ಹೊರಡಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಕಾಡುತ್ತಿದೆ ಕಲ್ಲಿದ್ದಲು ಕೊರತೆ, ವಿದ್ಯುತ್ ಅಭಾವ ಭೀತಿ; 81 ಸ್ಥಾವರಗಳಲ್ಲಿ ನಿಶ್ಚಿತ ದಾಸ್ತಾನಿಲ್ಲ

5 ವರ್ಷದ ಮಕ್ಕಳಿಗೂ ಲಸಿಕೆ; ಕೊರ್ಬೆವ್ಯಾಕ್ಸ್ ನೀಡಲು ಕೇಂದ್ರದ ತಜ್ಞರ ಸಮಿತಿ ಶಿಫಾರಸು

ಮೂಲಸೌಕರ್ಯ ಬಲಪಡಿಸಿ; ಕಂದಾಯ ಇಲಾಖೆಯಲ್ಲಿ ಹಲವು ಹೊಸ ಉಪಕ್ರಮ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + fourteen =
Remember me
