ಧಾರವಾಡ:ಖ್ಯಾತ ನಟ ಅನಿರುದ್ಧ್ ಅವರು ತಮ್ಮ ಹುಟ್ಟೂರಿನ ಸುಧಾರಣೆಗೆ ಮುಂದಾಗಿದ್ದಾರೆ. ಹುಟ್ಟೂರಿನ ಐತಿಹಾಸಿಕ ಬಾವಿ, ಸ್ಥಳಗಳ ಅಭಿವೃದ್ಧಿಗೆ ಅನಿರುದ್ಧ್​ ಹೊಸ ಪರಿಕಲ್ಪನೆಯೊಂದಿಗೆ ಸಜ್ಜಾಗಿದ್ದಾರೆ.
ವಿದ್ಯಾಕಾಶಿ ಧಾರವಾಡ ನಟ ಅನಿರುದ್ಧ್ ಅವರ ಹುಟ್ಟೂರು. ಈಗಾಗಲೇ ಬೆಂಗಳೂರಿನಲ್ಲಿ ಸ್ವಚ್ಛತಾ ಕಾರ್ಯಗಳನ್ನು ಅನಿರುದ್ಧ್​ ಮಾಡಿದ್ದಾರೆ. ಈಗ ಧಾರವಾಡದಲ್ಲಿ ಸ್ವಚ್ಛತೆಗಾಗಿ ಮೈದಾನಕ್ಕೆ ಇಳಿಯಲಿದ್ದಾರೆ.
ಹು-ಧಾ ಪಾಲಿಕೆಯಿಂದ ಸ್ವಚ್ಛತಾ ರಾಯಭಾರಿಯಾಗಿ ಅನಿರುದ್ಧ್​‌ ಆಯ್ಕೆಯಾಗಿದ್ದು, ಸ್ವಚ್ಛತಾ ಜಾಗೃತಿ ಜೊತೆಗೆ ತನ್ನದೇಯಾದ ಕೆಲ ಸುಧಾರಣೆ ಪಟ್ಟಿಯನ್ನು ಅನಿರುದ್ಧ್​ ಪಾಲಿಕೆಗೆ ಸಲ್ಲಿಸಿದ್ದಾರೆ.
ಕವಿವಿ ಆವರಣದ ಪ್ರಾಯೋಗಿಕ ಸರ್ಕಾರಿ ಶಾಲೆ ಸುಧಾರಣೆಗೆ ಪ್ರಸ್ತಾಪಿಸಿದ್ದಾರೆ. ಸಪ್ತಾಪುರ, ಜಯನಗರದಲ್ಲಿ ಬಸ್ ತಂಗುದಾಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಐತಿಹಾಸಿಕ ಜತ್ತಿನ್ ಬಾವಿ ಸುಧಾರಣೆಗೆ ಮನವಿ ಮಾಡಿದ್ದಾರೆ. ಗವಳಿಗರ ಎಮ್ಮೆಗಳಿಗಾಗಿ ಕೆರೆ ನೀಡುವಂತೆಯೂ ಕೋರಿಕೆ ಸಲ್ಲಿಸಿದ್ದಾರೆ.
ಧಾರವಾಡ ನಗರ ಸುಂದರ ನಗರ ಮಾಡಲು ಅನೇಕ ಐಡಿಯಾಗಳನ್ನು ಅನಿರುದ್ಧ್ ಕೊಟ್ಟಿದ್ದು, ಅದರ ಅನುಷ್ಠಾನಕ್ಕೆ ಶ್ರಮವಹಿಸಲು ತಯಾರಾಗಿದ್ದಾರೆ.(ದಿಗ್ವಿಜಯ ನ್ಯೂಸ್​)
ಎಸ್ಸೆಸ್ಸೆಲ್ಸಿ ಪಾಸ್​ ಆಗಲ್ಲ ಎಂದು ಗೇಲಿ ಮಾಡಿದವರಿಗೆ ಈ ಹುಡುಗ ಕೊಟ್ಟ ತಿರುಗೇಟು ಹೇಗಿದೆ ನೋಡಿ!

ಒಂದು ಸಿನಿಮಾದ ಕಥೆ-ವ್ಯಥೆ: ಸಿನಿಮಾ ವಿಮರ್ಶೆ

ಕಮ್ಯೂನಿಷ್ಟರಾಗಿ ಪರಿಷ್ಕರಣೆ ಮಾಡಿಲ್ಲ: ಸರ್ಕಾರಕ್ಕೆ ಬರಗೂರು ಉತ್ತರ; ಸಾಹಿತಿಗಳನ್ನು ಮಾತುಕತೆಗೆ ಆಹ್ವಾನಿಸಲು ಆಗ್ರಹ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 4 =
Remember me
