ಬೆಂಗಳೂರು:ಇದೀಗ ಕಾಂಗ್ರೆಸ್ ನೇತೃತ್ವದ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿರುವ ಆರ್. ಅಶೋಕ್, ಯೋಜನೆಯ ಅರ್ಜಿ ಮೇಲೆ ಜಾತಿ ಕಾಲಂ, ಭಾಗ್ಯಗಳ ಫಲಾನುಭವಿ ಆಗಲು ಇರುವ ಷರತ್ತುಗಳು, ವಿದ್ಯುತ್ ಉಚಿತ, ಮುಂತಾದ ವಿಚಾರಗಳ ಬಗ್ಗೆ ಮಾತನಾಡಿದ್ದ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, “ಕಾಂಗ್ರೆಸ್ ಬಂದಮೇಲೆ ಗೊಂದಲದ ಮೇಲೆ ಗೊಂದಲವಾಗುತ್ತಿದ್ದು ಪ್ರತಿಯೊಬ್ಬ ಮಂತ್ರಿಗಳು ಹೇಳಿಕೆ‌ ಕೊಡೊವಾಗ ಗೊಂದಲ ಉಂಟಾಗುತ್ತಿದೆ. ‘ನನಗೂ ಫ್ರೀ.. ಮಹದೇವಪ್ಪ ನಿನಗೂ ಫ್ರೀ’ ಅಂದಿದ್ರು. ಆದರೆ ಮಹದೇವಪ್ಪ ಇನ್ ಕಮ್ ಟ್ಯಾಕ್ಸ್ ಪೇ ಮಾಡೋವ್ರು. ಈಗ ಫ್ರೀ ಇಲ್ಲ ಅಂತಿದಾರೆ” ಎಂದು ಕಾಲೆಳೆದಿದ್ದಾರೆ.
ಇನ್ನು ಹೊಸ ವಿದ್ಯುತ್ ಸಂಪರ್ಕವನ್ನು ಪಡೆಯುವ ಕುರಿತು ಉಲ್ಲೇಖಿಸಿ ಮಾತನಾಡಿದ ಆರ್. ಅಶೋಕ್ “ಇವತ್ತು ಏಕಾಏಕಿ ಕರೆಂಟ್ ಕನೆಕ್ಷನ್ ತಗೊಳ್ಳೊರಿಗೆ 60% ಜಾಸ್ತಿ ಮಾಡಿದಾರೆ. ಇದರಲ್ಲಿ ಹಣ ಸಂಗ್ರಹ ಮಾಡೋಕೆ ಮುಂದಾಗಿದಾರೆ. ಇವರು ಜನರ ದುಡ್ಡು ತಗೊಂಡು ಜನರಿಗೇ ಫ್ರೀ ಕೊಡೋದು.
ಇಡಿ ರಾಜ್ಯದ ಜನ ರೊಚ್ಚಿಗೆದ್ದು ಬೀದಿಗಳಿದು ಹೋರಾಟ‌ ಮಾಡಬೇಕು. ಗ್ಯಾರಂಟಿ ಚೆಕ್ ನಂತೆ ನಡೀರಿ ಅಂತಾ ಕೇಳಿದಾಗ ಚುರುಕು ಮುಟ್ಟಿಸೋ ಕೆಲಸ ಆಗಲಿದೆ. ಕಾಂಗ್ರೆಸ್ ಜನತೆಗೆ ಟೋಪಿ ಹಾಕುವ ಕೆಲಸ ಮಾಡಿದೆ.
ಅವರು ಜಾತಿ ಕಾಲಮ್ ಗಳನ್ನು ಹಾಕೋ ಮೂಲಕ ಜಿಲೆಬಿ ಬ್ರಾಂಡ್ ಮಾಡ್ತಿದ್ದಾರೆ. ಸಿದ್ದರಾಮಯ್ಯ ಅಂದ್ರೆ ಜಿಲೆಬಿ ಅನ್ನೋ ಬ್ರಾಂಡ್ ಇದೆ” ಎಂದು ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಾ ಉಚಿತಗಳ ಅರ್ಜಿಗಳಲ್ಲಿ ಜಾತಿ ಕಾಲಂ ಇರುವ ಬಗ್ಗೆ ಮಾತನಾಡಿದ ಆರ್.ಅಶೋಕ್, “ಕರೆಂಟ್, 2000 ರೂ. ಕೊಡೋಕೆ ಜಾತಿ ಬೇಕಾ? ಕೆಲವು ಜಾತಿಗಳನ್ನ ಈ  ಫ್ರೀ ಸ್ಕೀಮ್ ನಿಂದ ಹೊರಗಡೆ ಇಡೋದಕ್ಕೆ ಹುನ್ನಾರ ಮಾಡ್ತಿದ್ದಾರೆ.” ಎಂದು ಆರೋಪಿಸಿದ್ದಾರೆ.
“ಕಾಂಗ್ರೆಸ್ ಮೋಸದ ಗ್ಯಾರಂಟಿ ವಿರುದ್ಧ ಬಿಜೆಪಿ ಹೋರಾಟ ಮಾಡಲಿದೆ. ಜಾತಿ ಹೆಸರಿನಲ್ಲಿ ಗ್ಯಾರಂಟಿ ಕೊಡ್ತಿದ್ದಾರೆ. ಇದನ್ನು ಕೂಡ ಬಿಜೆಪಿ ಖಂಡಿಸುತ್ತದೆ. ಹೊಸದಾಗಿ ಗೆದ್ದ ಮೇಲೆ ಕಾಂಗ್ರೆಸ್ ಆಕಾಶದ ಮೇಲೆಯೇ ಇದೆ. ಇನ್ನೂ ಅವರು ಭೂಮಿಗೇ ಇಳಿದಿಲ್ಲ. ಅವರನ್ನು ಅರೆಸ್ಟ್ ಮಾಡ್ಬೇಕು ಇವರನ್ನು ಅರೆಸ್ಟ್ ಮಾಡ್ಬೇಕು ಅಂತಿದ್ದಾರೆ. ಸಿದ್ದರಾಮಯ್ಯ ಒಂದು ಜಾತಿಯನ್ನು ಮೆಚ್ಚಿಸಲು ಜಾತಿ‌ ಜನಗಣತಿ ಬಿಡುಗಡೆಗೆ ಮುಂದಾಗಿದ್ದಾರೆ
ಈ ಮೂಲಕ ಇತರೆ ಸಮುದಾಯ ತುಳಿಯಲು ಹೊರಟಿದ್ದಾರೆ. ಜಾತಿ ಜನಗಣತಿ ಬಿಡುಗಡೆ ಆಗಲಿ, ಅವರ ಬಂಡವಾಳ ಏನೆಂದು ಆಮೇಲೆ ಜನರು ತೋರಿಸ್ತಾರೆ. ಜಾತಿ ಜನಗಣತಿ ಮೂಲಕ ನಾವು ಕೊಟ್ಟ ಮೀಸಲಾತಿ ಬದಲಾವಣೆ ಮಾಡಿದ್ರೆ ನಾವು ಸುಮ್ಮನೆ ಇರಲ್ಲ. ನಾವಲ್ಲ, ರಾಜ್ಯದ ಜನರು ಅವರ ವಿರುದ್ಧ ರೊಚ್ಚಿಗೇಳ್ತಾರೆ” ಎಂದು ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಗ್ರಾಹಕರಿಗೆ ತಟ್ಟಲಿದೆಯಾ ಹಾಲಿನ ದರ ಏರಿಕೆ ಬಿಸಿ? ಬೆಲೆ ಏರಿಕೆಗೆ ಪಟ್ಟು ಹಿಡಿದ ಒಕ್ಕೂಟ!

ಇನ್ನು ಗೂಗಲ್ ಪೇ ಬಳಸಲು ಆಧಾರ್ ಇದ್ದರೆ ಸಾಕು!

ಗೃಹಲಕ್ಷ್ಮೀ ಯೋಜನೆಯ ಅರ್ಜಿ ಹೀಗಿರಲಿದೆ ನೋಡಿ! 2000 ರೂ. ಪಡೆಯಲು ಯಾವ ದಾಖಲೆ ಕೊಡಬೇಕು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
