ಪ್ರತಿಪಕ್ಷ ನಾಯಕರಾಗಿ ದಿನದಿನಕ್ಕೂ ಪಕ್ವಗೊಳ್ಳುತ್ತಿರುವ ಆರ್.ಅಶೋಕ್ ಶುಕ್ರವಾರ ವಿಜಯವಾಣಿ ಸಂಪಾದಕೀಯ ಬಳಗದ ಜತೆ ಸಂವಾದ ನಡೆಸಿದರು. ಸರ್ಕಾರದ ಆಗುಹೋಗು, ಪಕ್ಷದ ಬೆಳವಣಿಗೆ, ಲೋಕಸಭೆ ಚುನಾವಣೆ ತಯಾರಿ ಹೀಗೆ ವಿವಿಧ ವಿಚಾರಗಳಿಗೆ ಸಂಬಂಧಪಟ್ಟಂತೆ ತೂರಿಬಂದ ಪ್ರಶ್ನೆಗಳಿಗೆ ಉತ್ತರ ನೀಡಿದರು.
ಸರ್ಕಾರದಲ್ಲಿ ಮಂತ್ರಿ ಆಗಲು 33 ಜನ ಇರುತ್ತಾರೆ. ವಿರೋಧ ಪಕ್ಷದ ನಾಯಕ ಒಬ್ಬನೇ. ಇದೊಂದು ಹೊಸ ಅನುಭವ, ಹೊಸ ಸವಾಲು. ಮಂತ್ರಿಯಾಗಿದ್ದರೆ ಆ ಒಂದು ಇಲಾಖೆಯ ಮಾಹಿತಿ ಕ್ಷಣ ಮಾತ್ರದಲ್ಲಿ ಸಿಗುತ್ತದೆ. ವಿರೋಧ ಪಕ್ಷದ ನಾಯಕನಾಗಿ ಪ್ರತಿಯೊಂದನ್ನೂ ಹುಡುಕಬೇಕು. ಎಲ್ಲ ಮಂತ್ರಿಗಳಿಗೂ ಸವಾಲು ಹಾಕಬೇಕು, ಅದಕ್ಕೆ ತಯಾರಾಗಬೇಕು. ಇದೊಂದು ಅವಕಾಶ ಎಲ್ಲರಿಗೂ ಸಿಗುವುದಿಲ್ಲ, ಇದನ್ನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸ, ನಂಬಿಕೆ ಇದೆ.
ಜೆಡಿಎಸ್​ನವರು ನಮಗೆ ಬೆಂಬಲ ಕೊಟ್ಟಿದ್ದಾರೆ. ಕಾರ್ಯಕರ್ತರನ್ನು ಒಂದು ಮಾಡುವುದು ನಮಗಿರುವ ಸವಾಲು. ಕಳೆದ ಬಾರಿ ಕಾಂಗ್ರೆಸ್- ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಾಗ ಏನಾಗಿತ್ತು ಎಂದು ಗೊತ್ತಿದೆ. ಇದೇ ಕಾರಣಕ್ಕೆ ನಾವು ಪ್ಲಾನ್ ಮಾಡುತ್ತಿದ್ದೇವೆ. 10-12 ದಿನದಲ್ಲಿ ಜೆಡಿಎಸ್- ಬಿಜೆಪಿಯ 10-12 ನಾಯಕರು ಒಟ್ಟಾಗಿ ಸೇರಿ ಎಲ್ಲಾ ಜಿಲ್ಲೆಗಳಲ್ಲೂ ಪ್ರವಾಸ ಮಾಡಿ ಅಲ್ಲಿ ಎರಡೂ ನಾಯಕರನ್ನು, ಕಾರ್ಯಕರ್ತರನ್ನು ಒಟ್ಟಾಗಿ ಹೋಗುವ ರೀತಿ ಮಾಡುತ್ತೇವೆ.
ಈಗಾಗಲೆ ಸಿದ್ಧತಾ ಸಭೆಗಳನ್ನು ಮಾಡುತ್ತಿದ್ದೇವೆ. ಬೂತ್, ಪೇಜ್ ಮುಖ್ಯಸ್ಥರನ್ನು ನೇಮಕ ಮಾಡಲಾಗುತ್ತಿದೆ. ಮತದಾರರ ಪಟ್ಟಿಯ ಪ್ರತಿ ಪುಟ್ಟಕ್ಕೂ ಪೇಜ್ ಪ್ರಮುಖರನ್ನು ನಿಯೋಜಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳನ್ನು ಮಾತನಾಡಿಸಲಾಗುತ್ತಿದೆ. ಪ್ರಧಾನ ಮಂತ್ರಿಗಳ ವಿಶ್ವಕರ್ಮ ಯೋಜನೆಯ ಲಾಭ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಮೋದಿಯವರ ಸಾಧನೆ ಬಿಂಬಿಸುವ ರಥ ಬರುತ್ತಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಕಾರ್ಯಕ್ರಮ ಮಾಡಲಾಗುತ್ತಿದೆ.
ಸೋಮಣ್ಣ ಜತೆ ವೈಯಕ್ತಿಕ ನಾನೇ ಖುದ್ದು ಮಾತನಾಡಿದ್ದೇನೆ, ಅವರದ್ದು ಬಗೆಹರಿದಿದೆ. ಯತ್ನಾಳ್ ಜತೆ ದೆಹಲಿ ನಾಯಕರು ಮಾತನಾಡಿದ್ದು, ಇನ್ನೊಮ್ಮೆ ಮಾತನಾಡುವವರಿದ್ದಾರೆ. ನಮ್ಮದು ರಾಷ್ಟ್ರೀಯ ಪಕ್ಷ ಯಾವುದೇ ತೀರ್ಮಾನ ಮಾಡುವುದಿದ್ದರೂ ದೆಹಲಿ ನಾಯಕರು ನಿರ್ಧರಿಸುತ್ತಾರೆ. ನಾಯಕರಾಗಬೇಕು ಎಂದು ಬಹಳಷ್ಟು ಜನರಿಗೆ ಆಸೆ ಇರುತ್ತದೆ. ಅದಾಗದೇ ಇದ್ದಾಗ ಕೆಲವು ಬೆಳವಣಿಗೆ ನಡೆಯುತ್ತಿದೆ. ಉದಾಹರಣೆಗೆ ಕಾಂಗ್ರೆಸ್​ನಲ್ಲಿ ಬಿ.ಕೆ ಹರಿಪ್ರಸಾದ್ ಇದ್ದಾರೆ. ಇದೊಂದು ನಿರಂತರ ಸಮಸ್ಯೆ, ಇದಕ್ಕೆ ಸಮಯವೇ ಔಷಧಿ.
ಕಾಂಗ್ರೆಸ್​ನವರಿಗೆ ರಾಮನ ಭಯ ಶುರುವಾಗಿದೆ. ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಇಷ್ಟು ಬೇಗ ಆಗುತ್ತದೆ ಎಂದು ನೆನಸಿರಲಿಲ್ಲ. ಈಗ ಭಯ ಶುರುವಾಯಿತು. ಈಗ ನಾನೇ ಸಿದ್ದರಾಮಯ್ಯ, ನನ್ನ ಹೆಸರಲ್ಲೇ ರಾಮ ಇದ್ದಾನೆ ಎಂದು ಹೇಳುತ್ತಿದ್ದಾರೆ. ಈ ಸ್ಥಿತಿಗೆ ಬಂದಿದ್ದಾರೆ. ನಾನು ಹಿಂದು ಎಂದು ಜನ್ಮದಲ್ಲಿ ಹೇಳಿದ್ದರೇ, ಈಗ ಹಾಗೆ ಹೇಳುವ ಸ್ಥಿತಿ ನಿರ್ವಣವಾಗಿದೆ. ನಾನು ಎಂದು ಹೇಳುವ ರೀತಿ ಮಾಡಿದ್ದೇವೆ.ರಾಮನ ಬಗ್ಗೆ ಭಯ ಬಂದು ರಾಮನ ವಿಚಾರ, ಧರ್ಮದ ವಿಚಾರ ಮುಂದಿಟ್ಟುಕೊಂಡು ಕಿರುಕುಳ ಕೊಡಲು ಆರಂಭಿಸಿದ್ದಾರೆ. ಬೆದರಿಕೆ ತಂತ್ರವಾಗಿ ಕರಸೇವಕರನ್ನು ಬಂಧಿಸಲು ಹೊರಟಿದ್ದರು.
ಕೆಲವು ಕಡೆ ಅಪಸ್ವರ ಇಲ್ಲ ಎಂದು ನಾನು ಹೇಳಲ್ಲ. ಎರಡು ಸರ್ವೆ ಆಗುತ್ತದೆ, ಸರ್ವೆನಲ್ಲಿ ಏನು ಬರುತ್ತದೋ ಅದರಲ್ಲಿನ ಜನ ಹಾಗೂ ಕಾರ್ಯಕರ್ತರ ಅಭಿಪ್ರಾಯ ಗೊತ್ತಾಗುತ್ತದೆ. ಈಗ ಮೋದಿಯವರ ಅಲೆ ಜಾಸ್ತಿಯಾಗಿದೆ, ಯಾರು ಚುನಾವಣೆಗೆ ಸ್ಪರ್ಧಿಸಲ್ಲ ಎನ್ನುತ್ತಿದ್ದರೋ ಅವರೆಲ್ಲ ಕಣಕ್ಕಿಳಿಯುವ ಅಭಿಲಾಷೆ ವ್ಯಕ್ತ ಪಡಿಸುತ್ತಿದ್ದಾರೆ.
ಗ್ಯಾರಂಟಿ ಅನುಷ್ಠಾನಕ್ಕೆ ಕಾಂಗ್ರೆಸ್ ಕಾರ್ಯಕರ್ತರ ಸಮಿತಿ ಮಾಡುವುದಾದರೆ ಸರ್ಕಾರಿ ಇಲಾಖೆಗಳು ಕತ್ತೆ ಕಾಯಬೇಕೆ? ಇಲಾಖಾ ಸಚಿವರು, ಜಿಲ್ಲಾ ಮಂತ್ರಿ, ಜಿಲ್ಲಾ ಕಾರ್ಯದರ್ಶಿ, ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ರೀಜನಲ್ ಕಮೀಷನರ್, ಜಿಲ್ಲಾ ಪಂಚಾಯಿತಿ ಅಧಿಕಾರಿಗಳೆಲ್ಲ ಏನು ಮಾಡುತ್ತಾರೆ? ಎಂದು ಆರ್.ಅಶೋಕ ಪ್ರಶ್ನಿಸಿದರು. ರೈತರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ಕಾಂಗ್ರೆಸ್​ನವರು ಮಜದ ಹಾದಿ ಹಿಡಿದಿದ್ದಾರೆ. ಬೇಜವಾಬ್ದಾರಿಯಿಂದ ಖರ್ಚು ಮಾಡಲಾಗುತ್ತಿದ್ದು, ಇದರ ಅವಶ್ಯಕತೆಯಾದರೂ ಏನಿದೆ? ಎಂದ ಅವರು ಅಭಿವೃದ್ಧಿ ಮಾಡಲು ಸರ್ಕಾರದ ಬಳಿ ಹಣವಿಲ್ಲ. ಅನುದಾನ ಬಿಡುಗಡೆ ಮಾಡದೇ ಜಿಲ್ಲಾ ಪಂಚಾಯಿತಿ, ಲೋಕೋಪಯೋಗಿ, ನೀರಾವರಿ ಇಲಾಖೆಯಲ್ಲಿ ಕೆಲಸವೆ ಇಲ್ಲವಾಗಿದೆ. ಇತ್ತ ಚುನಾವಣೆಗೋಸ್ಕರ ಕಾರ್ಯಕರ್ತರ ಸಮಿತಿ ರಚಿಸಿ ಅವರಿಗೆ ಸರ್ಕಾರದ ಬೊಕ್ಕಸದ ಹಣ ಕೊಡಲಾಗುತ್ತಿದೆ ಎಂಬುದು ಸಾಮಾನ್ಯ ಜನರಿಗೂ ಅರ್ಥವಾಗುತ್ತಿದೆ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − three =
Remember me
