ಬೆಂಗಳೂರು: ಸರ್ಕಾರ ನೂರು ದಿನಗಳ ಸಾಧನಾ ಸಂಭ್ರಮದಲ್ಲಿದ್ದರೆ ಪ್ರತಿಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ಚಾರ್ಜ್ ಶೀಟ್ ಬಿಡುಗಡೆ ಮಾಡಿದೆ. ಈ ಚಾರ್ಜ್‌ಶೀಟ್ ವಿಚಾರದಲ್ಲಿಯೇ ಬಿಜೆಪಿ ಹಾಲಿ ಮತ್ತು ಆ ಪಕ್ಷದ ಮಾಜಿ ನಾಯಕರ ನಡುವೆ ಜಟಾಪಟಿ ನಡೆದಿದೆ.
ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಹಾಗೂ ಪ್ರಸ್ತುತ ಕಾಂಗ್ರೆಸ್‌ನಲ್ಲಿರುವ ಜಗದೀಶ್ ಶೆಟ್ಟರ್, ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ. ಟೀಕೆಗಳನ್ನು ಮಾಡಿಕೊಂಡಿದ್ದಾರೆ. ವಿರೋಧ ಪಕ್ಷವಾಗಿ ಏನೋ ಮಾಡಬೇಕೆಂದು ಮಾಡುತ್ತಿದ್ದಾರೆ. ಚಾರ್ಜ್ಶೀಟ್ ಬಿಡುಗಡೆ ಮಾಡುವುದರಲ್ಲಿ ಅರ್ಥವಿಲ್ಲ. ಮೊದಲು ವಿರೋಧ ಪಕ್ಷದ ನಾಯಕರನ್ನು ನೇಮಕ ಮಾಡಿಕೊಳ್ಳಲಿ. ಪಕ್ಷ ಬಿಡುವವರ ಬಗ್ಗೆ ಕಾಳಜಿ ವಹಿಸಲಿ ಎಂದು ಹೇಳಿದರು.
ಜನತೆ ಆಶೀರ್ವಾದದಿಂದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ನೂರು ದಿನಗಳಲ್ಲಿ ಮಹತ್ವದ ತೀರ್ಮಾನಗಳನ್ನು ಮಾಡಿದೆ. ಚುನಾವಣೆಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಬಳಿಕ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವ ಆರ್ ಅಶೋಕ್, ಜಗದೀಶ್ ಶೆಟ್ಟರ್ ನಮ್ಮಪಕ್ಷದಲ್ಲಿ ಇದ್ದಾಗ ನಾಲ್ಕು ಬಾರಿ ಚಾರ್ಜ್ ಶೀಟ್ ಬಿಡುಗಡೆ ಮಾಡಿದ್ದರು. ಆಗ ಅವರು ಕೆಲಸ ಇಲ್ಲದೇ ಬಿಡುಗಡೆ ಮಾಡಿದ್ದರೇ? ಹುಷಾರಾಗಿ ಮಾತನಾಡಲಿ ಎಂದರು.
ಸರ್ಕಾರದ ನೂರು ಕರಾಳ ದಿನಗಳು ಇವು. ಒಂದೇ ಒಂದು ಅಭಿವೃದ್ಧಿ ಕೆಲಸ ಆಗಿಲ್ಲ. ರಸ್ತೆ ಅಭಿವೃದ್ಧಿ ಆಗಿಲ್ಲ. ಕಸ ವಿಲೇವಾರಿ ಆಗದ ಸ್ಥಿತಿ ಇದೆ. ಒಂದೇ ಒಂದು ಕುಡಿಯುವ ನೀರಿನ ಯೋಜನೆ ಆಗಿಲ್ಲ. ಗುತ್ತಿಗೆದಾರರಿಗೆ ಬಾಕಿ ಬಿಲ್‌ಕೊಟ್ಟಿಲ್ಲ. ಕಳೆದ ನೂರು ದಿನ ಅಭಿವೃದ್ಧಿ ಶೂನ್ಯದಿನ. ಅವರು ಇದೇ ಹೊಸ ಸರ್ಕಾರದ ಸಾಧನೆ ಎಂದು ಟೀಕಿಸಿದರು.
ಪ್ರತಿ ದಿನ ಉಚಿತದ ಬಗ್ಗೆಯೇ ಮಾತನಾಡುತ್ತಿದ್ದಾರೆ. ಎಲ್ಲೆಡೆ ಲೋಡ್ ಶೆಡ್ಡಿಂಗ್ ಇದೆ ಎಂದ ಅವರುರಾಜ್ಯದ ಗುತ್ತಿಗೆದಾರರು ಪ್ರತಿಭಟನೆಗೆ ಇಳಿದಿದ್ದಾರೆ. ತನಿಖೆ ಮಾಡಿ ಬಿಲ್‌ಕೊಡಿ ಎಂದು ಸಿಎಂ ಹೇಳಿದ್ದಾರೆ. ಸತ್ಯ ಏನೆಂದರೆ ಸರ್ಕಾರದ ಬಳಿ ಹಣ ಇಲ್ಲ. ಬಿಲ್‌ಕೊಡಲಾಗದೇ ತನಿಖೆ… ತನಿಖೆ… ಎಂದು ಹಣ ಬಿಡುಗಡೆ ಮುಂದೆ ಹಾಕುತ್ತಿದ್ದಾರೆ.ತಪ್ಪಿದ್ದವರ ಮೇಲೆ ಕ್ರಮಕೈಗೊಳ್ಳಲಿ, ಜೈಲಿಗೆ ಬೇಕದರೂ ಹಾಕಲಿ. ಸರ್ಕಾರದಲ್ಲಿ 33 ಸಚಿವರು, ಸಾವಿರಾರು ಇಂಜಿನಿಯರ್‌ಗಳಿದ್ದಾರೆ, ಸ್ಥಳ ತನಿಖೆ ಮಾಡಲಿ. ಎಲ್ಲಾ ಗುತ್ತಿಗೆದಾರರು, ಎಲ್ಲ ಇಂಜಿನಿಯರ್‌ಗಳು ಕಳ್ಳರಂತೆ ಬಿಂಬಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಲೋಕಸಭೆ ಚುನಾವಣೆ ಬಳಿಕ ಸರ್ಕಾರ ಇರಲ್ಲ, ಸರ್ಕಾರ ಉಳಿಯಲ್ಲ ಎಂಬ ಭಯ ಬಂದಿದೆ. ಇದಕ್ಕಾಗಿ ಆಪರೇಷನ್ ಹಸ್ತ ಮಾಡುತ್ತಿದ್ದಾರೆ. ಯಾರೂ ನಮ್ಮ ಪಕ್ಷ ಬಿಡಲ್ಲ, ಎಲ್ಲರೂ ಪಕ್ಷದ ಹಂಗಿನಲ್ಲಿ ಇದ್ದಾರೆ. ಪಕ್ಷದಲ್ಲಿ ಉಳಿಯಲು ಪಕ್ಷ ನಿಷ್ಠೆ ಇರಬೇಕಾಗುತ್ತದೆ. ಈಗ ಇರುವವರಿಗೆಲ್ಲ ಪಕ್ಷ ನಿಷ್ಠೆ ಇದೆ ಎಂದು ಭಾವಿಸಿದ್ದೇನೆ ಎಂದು ಶೆಟ್ಟರ್ ಮಾತಿಗೆ ತಿರುಗೇಟು ನೀಡಿದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:15 − 14 =
Remember me
