ಬೆಂಗಳೂರು:‘ಸಿಎಂ ಬೊಮ್ಮಾಯಿ ಅವರು ಜೇನುಗೂಡಿಗೆ ಕಲ್ಲುಹೊಡೆದಿದ್ದಾರೆ. ಸಿಕ್ಕಿರುವ ಜೇನನ್ನು ಎಸ್ಸಿ ಎಸ್ಟಿ ಸಮುದಾಯಕ್ಕೆ ಹಂಚಿದ್ದಾರೆ’ ಎಂದು ಆರ್​ ಅಶೋಕ್​ ಹೇಳಿಕೆ ನೀಡಿದ್ದಾರೆ.
ಮೀಸಲಾತಿ ಸಂಬಂಧಿಸಿದ ಸುಗ್ರೀವಾಜ್ಞೆಗೆ ರಾಜ್ಯಪಾಲರಿಂದ ಅಂಕಿತ ಪಡೆದ ಹಿನ್ನೆಲೆಯಲ್ಲಿ ಆರ್​ ಅಶೋಕ್ ಫ್ರೀಡಂ ಪಾರ್ಕ್​ಗೆ ಬಂದಿದ್ದರು. ಧರಣಿ ಕುಳಿತವರಿಗೆ ಆದೇಶದ ಮಾಹಿತಿ ನೀಡುವ ಸಮಯದಲ್ಲಿ ಮಾತನಾಡಿದ ಸಚಿವರು ‘ ಹಿಂದೆ ಬಂದ ಸರ್ಕಾರಗಳು ಮೀಸಲಾತಿಯ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಈಗ ನಮ್ಮ ಸರ್ಕಾರ ಮೀಸಲಾತಿಯನ್ನು ನೀಡಿದ ಕಾರಣ ವಾಲ್ಮೀಕಿ ಸಮುದಾಯಕ್ಕೆ ಒಳ್ಳೆಯದಾಗಿದೆ’ ಎಂದು ಹೇಳಿದ್ದಾರೆ.
ಫ್ರೀಡಂ ಪಾರ್ಕ್​ನಲ್ಲಿ ಮಾತನಾಡಿದ ಆರ್​ ಅಶೋಕ್​ ‘ನಮ್ಮ ಸಿಎಂ ಚಾಣಕ್ಯನ ಬುದ್ಧಿಯವರು. ಅವರು ಚಾಣಾಕ್ಷತನದಿಂದ ಮೀಸಲಾತಿ ಹೆಚ್ಚಿಸುವ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ’ ಎಂದು ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − one =
Remember me
