ಮೈಸೂರು:ಜನಪ್ರತಿನಿಧಿಗಳ ಜತೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ತಿಳಿಸಿದ್ದೇನೆಂದು ಕಂದಾಯ ಸಚಿವ ಆರ್​. ಅಶೋಕ್​ ಹೇಳಿದರು.
ಡಿಸಿ ರೋಹಿಣಿ ಸಿಂಧೂರಿ ಜನಪ್ರತಿನಿಧಿಗಳ ಗುದ್ದಾಟ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿ, ನಿನ್ನೆ ಜಿಲ್ಲಾಧಿಕಾರಿ ನನ್ನನ್ನು ಭೇಟಿ ಮಾಡಿದ್ದರು. ಈ ವೇಳೆ ಜನಪ್ರತಿನಿಧಿಗಳ ಜತೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ತಿಳಿಸಿದ್ದೇನೆ. ಜನಸ್ಪಂದನಾ ಕಾರ್ಯಕ್ರಮದ ಉದ್ಘಾಟನೆಗೆ ಶಾಸಕರನ್ನು ಕರೆಯಲೇಬೇಕು ಎಂದು ಸೂಚಿಸಿದ್ದೇನೆ ಎಂದರು.
ಜನಸ್ಪಂದನಾ ಕಾರ್ಯಕ್ರಮವನ್ನೇ ಸಚಿವರು ರದ್ದುಗೊಳಿಸಿದ್ದು, ಈಗ ಜನಸ್ಪಂದನ ಕಾರ್ಯಕ್ರಮ ಇರುವುದಿಲ್ಲ. ಮುಂದಿನ ದಿನದಲ್ಲಿ ಜಿಲ್ಲಾಧಿಕಾರಿಗಳ ನಡಿಗೆ ಗ್ರಾಮದ ಕಡೆಗೆ ಕಾರ್ಯಕ್ರಮ ನಡೆಯಲಿದೆ. ಇದಕ್ಕೆ ಮಾರ್ಗಸೂಚಿಗಳನ್ನು ಸಿದ್ದಪಡಿಸಲಾಗುತ್ತಿದೆ. ಈ ವೇಳೆ ಜನರ ಅಹವಾಲುಗಳನ್ನು ಕೇಳಲಾಗುತ್ತದೆ. ಈ ಬೆಳವಣಿಗೆಯಿಂದ ಸಾರ್ವಜನಿಕರಿಗೆ ಅನಾನೂಕೂಲವಾಗಿದೆ. ಇದನ್ನು ನಾನು ಒಪ್ಪುತ್ತೇನೆಂದರು.
ಇದನ್ನೂ ಓದಿ:ಡಿಸೈನರ್​ ಬಟ್ಟೆ ತೊಟ್ಟು ಹಣದೊಂದಿಗೆ ಪೋಸ್​ ನೀಡಿದ ಬೆನ್ನಲ್ಲೇ ಮಾಡೆಲ್​ಗೆ ಕಾದಿತ್ತು ಶಾಕ್​..!
ಸಂತೋಷ್ ಆತ್ಮಹತ್ಯೆ ಯತ್ನ ವಿಚಾರದಲ್ಲಿ ರಹಸ್ಯ ಸಿಡಿ ಪ್ರಸ್ತಾಪ ಕುರಿತು ಮಾತನಾಡಿದ ಅಶೋಕ್​, ಡಿಕೆಶಿ ಯಾವಾಗಲೂ ಗಾಳಿಯಲ್ಲೇ ಗುಂಡು ಹಾರಿಸೋದು. ಉಪಚುನಾವಣೆ ಬಳಿಕ ಡಿಕೆಶಿಗೆ ಅಸ್ತಿತ್ವದ ಪ್ರಶ್ನೆ ಬಂದಿದೆ. ಸಂತೋಷ್ ವಿಚಾರದಲ್ಲೂ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆಂದು ಡಿಕೆಶಿಗೆ ಟಾಂಗ್ ನೀಡಿದರು.(ದಿಗ್ವಿಜಯ ನ್ಯೂಸ್​)
ಮನೆಯಲ್ಲಿದ್ದುಕೊಂಡೇ ಮದುವೆ ನೋಡಿ, ಕಾರ್ಬನ್ ಫ್ರೀ ಫುಡ್ ಸವಿಯಿರಿ – ಗಮನಸೆಳೆಯಿತು ಹೊಸ ಟ್ರೆಂಡ್ !

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:19 − 8 =
Remember me
