ಬೆಂಗಳೂರು:ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಯಾವ ಯಾವ ರಾಜ್ಯದಲ್ಲಿ ‌ಕಾಂಗ್ರೆಸ್ ಸರ್ಕಾರ ಇದೆ ಅಲ್ಲಿ ಉಗ್ರರು ಹುಲ್ಲು ‌ಮೇಯುವ ರೀತಿ ಆಗಿದೆ ಎಂದು ಮಾಜಿ ಸಚಿವ ಆರ್​​. ಅಶೋಕ್ ಶಂಕಿತ ಉಗ್ರರ ಬಂಧನದ ವಿಚಾರವಾಗಿ​​ ಹೇಳಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಭಾರಿ ಸ್ಫೋಟಕ್ಕೆ ಸಂಚು: ಐವರು ಶಂಕಿತ ಉಗ್ರರ ಬಂಧನಬೆಂಗಳೂರಿನ ಒಂದು ಪೊಲೀಸ್ ಠಾಣೆಯಲ್ಲಿ ಕುರಾನ್ ಹಂಚಿ ಸಹಿ ಮಾಡಿಸಿಕೊಳ್ಳಲಾಗುತ್ತಿದೆ. ಈ ರೀತಿಯಾದ ವ್ಯವಸ್ಥೆ ಕಂಡು ಬರುತ್ತಿದ್ದು, ಇದರ ಮಾಹಿತಿ‌ ಕಲೆ ಹಾಕುತ್ತಿದ್ದೇನೆ. ಯಾವ ಠಾಣೆ ಎನ್ನುವ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದು, ಬೆಂಗಳೂರನ್ನ ರಕ್ಷಿಸಬೇಕು ಅಂತ ನಾವು ಕೇಂದ್ರ ಸರ್ಕಾರಕ್ಕೆ ‌ಮನವಿ ಮಾಡಿದ್ದೇವೆ. ಆದಷ್ಟು ಬೇಗ ಎನ್ ಐ.ಎ ಟೀಂ ಬೆಂಗಳೂರಿಗೆ ಬಂದು ಉಗ್ರರನ್ನ ಸದೆ ಬಡಿಯಬೇಕು ಎಂದಿದ್ದಾರೆ.ಡಿಕೆ ಶಿವಕುಮಾರ್ ಅವರು, ರಾಜ್ಯ ರಾಜಧಾನಿಯನ್ನು ಬ್ರ್ಯಾಂಡ್​​ ಬೆಂಗಳೂರು ಮಾಡುತ್ತೇನೆ ಎಂದು ಹೇಳಿದ್ದರು. ಬ್ರಾಂಡ್ ಬೆಂಗಳೂರು ‌ಮಾಡುತ್ತಾರೋ, ಸಿಂಗಾಪುರ, ಮಾಡುತ್ತಾರೋ, ಮಂಗಾಪುರ ಮಾಡುತ್ತಾರೋ ನೋಡಬೇಕು ಎಂದು ವ್ಯಂಗ್ಯವಾಡಿದ್ದಾರೆ.I.N.D.I.A ವಿರುದ್ಧ ವಾಗ್ದಾಳಿ:ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ವಿಪಕ್ಷಗಳ ಮೈತ್ರಿ ಒಕ್ಕೂಟಕ್ಕೆ I.N.D.I.A ಎಂದು ಹೆಸರಿಡಲು ನಿರ್ಣಯ ಕೈಗೊಳ್ಳಲಾಗಿದ್ದು ಈ ವಿಚಾರವಾಗಿ ಮಾತನಾಡಿದ ಆರ್​​.ಅಶೋಕ್​, ಅದು I.N.D.I.A ಅಲ್ಲ, ಈಸ್ಟ್ ಇಂಡಿಯಾ ಕಂಪನಿಯಾಗಿದ್ದು, ಕಂಪನಿಯ ಎಲ್ಲ ನಿರ್ದೇಶಕರುಗಳು ಬಂದು ಹೋಗಿದ್ದಾರೆ. ಕಾಂಗ್ರೆಸ್​​ನ್ನು ಬ್ರಿಟಿಷರು ಹುಟ್ಟು ಹಾಕಿದ್ದಾರೆ. I.N.D.I.A ಗೆ ಕರ್ನಾಟಕವನ್ನ ಎಟಿಎಂ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.ಅಲ್ಲದೇ, ಈ ಸಭೆಗೆ ಐಎಎಸ್ ಅಧಿಕಾರಿಗಳನ್ನ ದುರುಪಯೋಗ ‌ಪಡಿಸಿಕೊಂಡಿದ್ದಾರೆ. ಲಾಲು ಪ್ರಸಾದ್ ಜೈಲಿನಲ್ಲಿದ್ದವರು ಹಾಗೂ ಬೇಲ್​ ಮೇಲಿರುವವರನ್ನು ಸ್ವಾಗತ ಮಾಡಲು ಐಎಎಸ್ ಅಧಿಕಾರಿಗಳನ್ನು ಕಳಿಸಿದ್ಧಾರೆ ಎಂದು ಮಾಜಿ ಸಚಿವರು ಹೇಳಿದ್ದಾರೆ.(ಏಜೆನ್ಸೀಸ್​​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
