ಬೆಂಗಳೂರು:ಕೇಂದ್ರ ಸಚಿವ ಪಿಯೂಷ್ ಗೋಯಾಲ್ ಅಕ್ಕಿ ಕೊಡಲು ನಿರಾಕರಿಸಿದ್ದಾರೆ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ(KHMuniyappa)ಮಾಡಿದ ಆರೋಪಕ್ಕೆ ಮಾಜಿ ಸಚಿವ ಆರ್. ಅಶೋಕ್(R Ashok)ಇದೀಗ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ:ಮಚ್ಚು ಹಿಡಿದು ನಡು ರಸ್ತೆಯಲ್ಲೇ ಹೊಡೆದಾಟ; ಅಪರಿಚಿತರಿಂದ ಪ್ರತಿಷ್ಠಿತ ಕಾಲೇಜ್ ವಿದ್ಯಾರ್ಥಿ ಮೇಲೆ ದಾಳಿ
ಇಂದು ದೊಡ್ಡಬಳ್ಳಾಪುರದಲ್ಲಿ(Doddaballapur)ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಅಶೋಕ್, “ಸುಳ್ಳು ಹೇಳಲು ಹೊರಟಿರುವ ಸಚಿವ ಮುನಿಯಪ್ಪ ಅವರ ಮಾತು ಸರಿಯಿಲ್ಲ! ಈಗಾಗಲೇ ಪಿಯೂಷ್ ಗೋಯಲ್​ ಅವರು ಮೂರು ದಿನಗಳ ಹಿಂದೆಯೇ ಪ್ರೇಸ್ ಮೀಟ್ ಮಾಡಿದ್ದಾರೆ. ಕೇಂದ್ರದ ಬಳಿ ಇರುವ ಅಕ್ಕಿಯನ್ನು ಯಾವೆಲ್ಲಾ ರಾಜ್ಯಕ್ಕೆ ಕೊಡಬೇಕು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ”.
“ಮುಂಗಾರು ಮಳೆ ವಿಳಂಬವಾಗುತ್ತಿದ್ದು, ಪ್ರವಾಹ, ಬರ ಬಂದಂತಹ ಸಂದರ್ಭದಲ್ಲಿ ಅಕ್ಕಿಯನ್ನು ಪೂರೈಕೆ ಮಾಡಬೇಕಾಗುತ್ತದೆ. ಯಾವುದಾದರೂ ರಾಜ್ಯಕ್ಕೆ 10 ಕೆಜಿ ಅಕ್ಕಿಯನ್ನ ಕೊಟ್ಟಿದ್ದರೆ ಅದರ ಬಗ್ಗೆ ಕಾಂಗ್ರೆಸ್​​ನವರು ಹೇಳಲಿ! ಯಾಕೆ ಇವರೇನು ವಿಶೇಷವಾ?” ಎಂದು ರಾಜ್ಯ ಸರ್ಕಾರದ(StateGovernment)ವಿರುದ್ಧ ಗುಡುಗಿದ್ದಾರೆ.
ಇದನ್ನೂ ಓದಿ:ಆಟವಾಡುತ್ತಿದ್ದ ವೇಳೆ ಬಾಯಲ್ಲಿ ಬ್ಯಾಟರಿ ಸ್ಫೋಟ; ಬಾಲಕನ ಸ್ಥಿತಿ ಚಿಂತಾಜನಕ
“10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಕಾಂಗ್ರೆಸ್​​ನವರು ತಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದಾರೆ ಹೊರೆತು ಬಿಜೆಪಿಯಲ್ಲ! ನಮ್ಮನ್ನು ನೀವು ಯಾಕೆ ಪ್ರಶ್ನಿಸುತ್ತೀರಾ? ಅಕ್ಕಿ ಕೊಡುವುದು ನಿಮ್ಮ ಹಣೆಬರಹ. 10 ಕೆಜಿ ಅಕ್ಕಿ ಕೊಡುವುದಕ್ಕೆ ಯೋಗ್ಯತೆ ಇಲ್ಲ, ರಾಜಕೀಯ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.
“ಒಂದೆಡೆ ಕೇಂದ್ರ ಸರ್ಕಾರ(Central Government)ಕೊಡುತ್ತಿಲ್ಲ ಎಂದ ಹೇಳುತ್ತಾರೆ. ಮತ್ತೊಂದೆಡೆ ಯಾರು ಕೊಡದೆ ಇದ್ದರೂ ನಾವು ಪೂರೈಕೆ ಮಾಡುತ್ತೇವೆ ಎಂದು ಹೇಳುತ್ತಾರೆ. ಹಾಗಾದ್ರೆ ಕೊಡಿ ಯಾಕೆ ಕೇಳುತ್ತೀರಾ? ಹಣವಿದ್ದರೆ ಅಕ್ಕಿ ಖರೀದಿ ಮಾಡಿ ಕೊಡಿ” ಎಂದು ಕಾಂಗ್ರೆಸ್ ವಿರುದ್ದ ಆರ್.ಅಶೋಕ್ ನೇರ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
